ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ 774 ಮಂದಿಯ ಗಂಟಲು ದ್ರವವನ್ನ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಂದು ವರದಿ ಬರುವ ನಿರೀಕ್ಷೆ ಇದೆ.
ಸದ್ಯ, 2,082 ಮಂದಿಯನ್ನ ಕ್ವಾರಂಟೈನ್ನಲ್ಲಿ ಇಡಲಾಗಿದ್ದು, ಇದುವರೆಗೂ ಜಿಲ್ಲೆಯಾದ್ಯಂತ 8,900 ಜನರ ಸ್ಯಾಂಪಲ್ಗಳನ್ನ ಪಡೆಯಲಾಗಿದೆ. ಅದರಲ್ಲಿ 8,040 ಮಂದಿಯ ವರದಿಗಳು ನೆಗೆಟಿವ್ ಬಂದಿವೆ. 59 ಜನರ ಸ್ಯಾಂಪಲ್ ವರದಿಯನ್ನ ತಿರಸ್ಕರಿಸಿ, ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 27 ಮಂದಿಯಲ್ಲಿ ಕೋವಿಡ್-19 ಸೋಂಕು ಕಂಡುಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ.
13 ವರ್ಷದ ಬಾಲಕ ಸೇರಿ ಐವರು ಗುಣಮುಖರಾಗಿದ್ದು, 20 ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಐದು ಪ್ರದೇಶಗಳನ್ನುಕಂಟೇನ್ಮೆಂಟ್ ಝೋನ್ಗಳೆಂದು ಎಂದು ಪರಿಗಣಿಸಿ, ಸೀಲ್ಡೌನ್ ಮಾಡಲಾಗಿದೆ.