ETV Bharat / state

SSLC Exam.. ತುಮಕೂರು ಜಿಲ್ಲಾಡಳಿತದಿಂದ ವಿದ್ಯಾರ್ಥಿಗಳಿಗೆ ಉಪಹಾರ ವ್ಯವಸ್ಥೆ..

author img

By

Published : Jul 18, 2021, 5:47 PM IST

ಪ್ರತಿ ವಿದ್ಯಾರ್ಥಿಗೆ ಮಾಹಿತಿ ತಲುಪುವಂತೆ ವ್ಯಾಪಕವಾದ ಪ್ರಚಾರ ಮಾಡಲಾಗಿತ್ತು. ಒಂಬತ್ತನೇ ತರಗತಿಯಲ್ಲಿದ್ದ ಎಲ್ಲ ಮಕ್ಕಳನ್ನು 10ನೇ ತರಗತಿಗೆ ಈ ಬಾರಿ ದಾಖಲು ಮಾಡಲಾಗಿತ್ತು. ಆದರೆ, ಕೆಲ ಪೋಷಕರು ಶಾಲೆಗೆ ಬಂದು ಪರೀಕ್ಷೆಯನ್ನು ಕಟ್ಟುವಂತಹ ಪೂರಕ ಪ್ರಕ್ರಿಯೆಯನ್ನು ಪಾಲನೆ ಮಾಡಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ 105 ಮಕ್ಕಳು ಪರೀಕ್ಷೆ ಬರೆಯುತ್ತಿಲ್ಲ ಎಂದು ತಿಳಿದು ಬಂದಿದೆ..

Snacks for SSLC children from Tumkur District
ತುಮಕೂರು ಜಿಲ್ಲಾಡಳಿತದಿಂದ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಲಘ ಉಪಹಾರ

ತುಮಕೂರು : ಜಿಲ್ಲೆಯಲ್ಲಿ ನಾಳೆಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷೆ ಬರೆಯಲು ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ಈ ಬಾರಿ ಜಿಲ್ಲಾಡಳಿತದ ವತಿಯಿಂದ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.

ಪರೀಕ್ಷಾ ಮೇಲ್ವಿಚಾರಕರಾದ ಚಂದ್ರಶೇಖರ್ ಮಾತನಾಡಿದರು

ಬೆಳಗ್ಗೆಯಿಂದ ನಿರಂತರವಾಗಿ ಮೂರು ಗಂಟೆಗಳ ಕಾಲ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಈ ಬಾರಿ ಶೇ.10ರಷ್ಟು ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಗ್ಗೆ 7ಗಂಟೆಯಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಬಳಿ ಬರುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಒಟ್ಟು 23,650 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ. ಸುಮಾರು 105 ಮಕ್ಕಳು ಪರೀಕ್ಷೆಗೆ ಹಾಜರಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಪ್ರತಿ ವಿದ್ಯಾರ್ಥಿಗೆ ಮಾಹಿತಿ ತಲುಪುವಂತೆ ವ್ಯಾಪಕವಾದ ಪ್ರಚಾರ ಮಾಡಲಾಗಿತ್ತು. ಒಂಬತ್ತನೇ ತರಗತಿಯಲ್ಲಿದ್ದ ಎಲ್ಲ ಮಕ್ಕಳನ್ನು 10ನೇ ತರಗತಿಗೆ ಈ ಬಾರಿ ದಾಖಲು ಮಾಡಲಾಗಿತ್ತು. ಆದರೆ, ಕೆಲ ಪೋಷಕರು ಶಾಲೆಗೆ ಬಂದು ಪರೀಕ್ಷೆಯನ್ನು ಕಟ್ಟುವಂತಹ ಪೂರಕ ಪ್ರಕ್ರಿಯೆಯನ್ನು ಪಾಲನೆ ಮಾಡಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ 105 ಮಕ್ಕಳು ಪರೀಕ್ಷೆ ಬರೆಯುತ್ತಿಲ್ಲ ಎಂದು ತಿಳಿದು ಬಂದಿದೆ.

ಓದಿ: ಕೋವಿಡ್ ನಡುವೆಯೂ ನಾಳೆಯಿಂದ SSLC ಎಕ್ಸಾಂ.. ಮಕ್ಕಳೇ, ಧೈರ್ಯವಾಗಿ ಪರೀಕ್ಷೆ ಎದುರಿಸಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.