ETV Bharat / state

ತುಮಕೂರು: ಲಾರಿ ಚಕ್ರ ಸಿಡಿದು ಚಾಲಕ ಸಾವು - ಕಿಬ್ಬನಹಳ್ಳಿ ಪೊಲೀಸ್ ಠಾಣೆ

ಲಾರಿ ಚಕ್ರ ಪರಿಶೀಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಚಕ್ರ ಸಿಡಿದು ಚಾಲಕ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

Image of the lorry that killed the driver
ಚಾಲಕ ಸಾವನ್ನಪ್ಪಲು ಕಾರಣವಾದ ಲಾರಿಯ ಚಿತ್ರ
author img

By

Published : Jan 3, 2023, 2:12 PM IST

ತುಮಕೂರು: ತಾಂತ್ರಿಕ ದೋಷ ಕಂಡುಬಂದು ಪರಿಶೀಲಿಸಲು ಹೋಗಿದ್ದಾಗ ದಿಢೀರ್ ಟೈರ್ ಸಿಡಿದು ಲಾರಿ ಚಾಲಕ ಮೃತಪಟ್ಟಿದ್ದಾನೆ. ಈ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಹಿಂಡಿಸ್ಕೆರೆ ಗ್ರಾಮದ ಬಳಿ ನಡೆದಿದೆ. ನರೇಶ್ (45) ಮೃತಪಟ್ಟಿರುವ ವ್ಯಕ್ತಿ.

ಲಾರಿಯ ಟೈರ್ ಉಷ್ಣಾಂಶ ಹೆಚ್ಚಾಗಿದೆಯೇ ಎಂದು ನೋಡಲು ಹೋಗಿದ್ದಾಗ ಅವಘಡ ಸಂಭವಿಸಿದೆ. ಸಿಡಿದ ರಭಸಕ್ಕೆ ಚಾಲಕ ಸುಮಾರು 200 ಮೀಟರ್ ದೂರದವರೆಗೂ ಹೋಗಿ ಬಿದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬೆಳಗಿನ ಜಾವ ಸುಮಾರು 6.30 ವೇಳೆಯಲ್ಲಿ ನಡೆದಿದೆ. ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕರೆ ಮಾಡುವುದಾಗಿ ಮೊಬೈಲ್ ಪಡೆದವನಿಂದ ಬ್ಲ್ಯಾಕ್ ಮೇಲ್: ಆರೋಪಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.