ETV Bharat / state

ಗುಬ್ಬಿಯಲ್ಲಿ ಸುಟ್ಟು ಭಸ್ಮವಾದ ಖಾಸಗಿ ಬಸ್​-ಓಮ್ನಿ ವ್ಯಾನ್​​​​​: ಮೂವರು ಸಜೀವ ದಹನ - ತುಮಕೂರಿನಲ್ಲಿ ಬಸ್​​ ಅಪಘಾತ ಲೇಟೆಸ್ಟ್​​ ಸುದ್ದಿ

ಖಾಸಗಿ ಬಸ್ ಹಾಗೂ ಓಮ್ನಿ ವ್ಯಾನ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸಜೀವ ದಹನಗೊಂಡಿರುವ ದುರ್ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.

accident
ಮೂವರ ಸಜೀವ ದಹನ
author img

By

Published : Jan 4, 2020, 7:33 AM IST

Updated : Jan 4, 2020, 8:00 AM IST

ತುಮಕೂರು: ಖಾಸಗಿ ಬಸ್ ಹಾಗು ಓಮ್ನಿ ವ್ಯಾನ್ ನಡುವೆ ನಡೆದ ಭೀಕರ ಅಪಘಾತ ಸಂಭವಿಸಿ ಮೂವರು ಸಜೀವ ದಹನಗೊಂಡಿರುವ ದುರ್ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ದೊಡ್ಡಗುಣಿ ಗ್ರಾಮದ ಬಳಿ ನಡೆದಿದೆ.

ಇಂದು ಮುಂಜಾನೆ ಈ ಅಪಘಾತ ಸಂಭವಿಸಿದ್ದು ಮಾರುತಿ ಓಮ್ನಿ ವ್ಯಾನ್​​ನಲ್ಲಿದ್ದ ವಸಂತಕುಮಾರ್ (55) ಮತ್ತು ರಾಮಯ್ಯ(55), ನರಸಮ್ಮ (65) ಎಂಬುವರು ಸಜೀವ ದಹನಗೊಂಡಿದ್ದಾರೆ. ಇನ್ನು ವ್ಯಾನ್​​​​ನಲ್ಲಿದ್ದ ಮೂವರು ಗಂಭೀರ ವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಶ್ರೀಶ ಟ್ರಾವೆಲ್ಸ್‌ಗೇ ಸೇರಿದ ಖಾಸಗಿ ಬಸ್​​​ ಹಾಗೂ ಎನ್ ಹೊಸಹಳ್ಳಿ ಗ್ರಾಮದಿಂದ ನಿಟ್ಟೂರಿಗೆ ಹೋಗುತ್ತಿದ್ದ ಮಾರುತಿ ವ್ಯಾನ್ ನಡುವೆ ಅಪಘಾತ ಸಂಭವಿಸಿದೆ.

ಮೂವರು ಸಜೀವ ದಹನ

ಅನಾರೋಗ್ಯದಿಂದ ಬಳಲುತ್ತಿದ್ದ ನರಸಮ್ಮ ಎಂಬುವರನ್ನು ನಿಟ್ಟೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಅಪಘಾತದ ತೀವ್ರತೆಗೆ ಮಾರುತಿ ವ್ಯಾನ್ ಹಾಗೂ ಖಾಸಗಿ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ವ್ಯಾನ್​​​ನಲ್ಲಿದ್ದ ನರಸಿಂಹ ಮೂರ್ತಿ, ರಾಧಾಮಣಿ, ರವಿ ಅವರುಗಳನ್ನು ಹೈವೆ ಗಸ್ತು ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್​​ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ.

ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:nullBody:ಸುಟ್ಟು ಭಸ್ಮವಾದ ಖಾಸಗಿ ಬಸ್, ಓಮ್ನಿ ವ್ಯಾನ್ .... ಇಬ್ಬರು ಸಜೀವ ದಹನ....

ತುಮಕೂರು ಖಾಸಗಿ ಬಸ್ ಮತ್ತು ಮಾರುತಿ ಒಮಿನಿ ವ್ಯಾನ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಜೀವ ದಹನಗೊಂಡಿರೋ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ದೊಡ್ಡಗುಣಿ ಗ್ರಾಮದ ಬಳಿ ನಡೆದಿದೆ.
ಇಂದು ಮುಂಜಾನೆ ಅಪಘಾತ ಸಂಭವಿಸಿದ್ದು ಮಾರುತಿ ವ್ಯಾನ್ ನಿನ್ನಲ್ಲಿದ್ದ ವಸಂತಕುಮಾರ್ 55 ಮತ್ತು ರಾಮಯ್ಯ55 ಎಂಬುವರು ಸಜೀವ ದಹನಗೊಂಡಿದ್ದಾರೆ. ನರಸಮ್ಮ 65 ಎಂಬುವರು ಸಹ ಮೃತಪಟ್ಟಿದ್ದಾರೆ. ಮಾರುತಿ ಒಮಿನಿ ವ್ಯಾನ್ ನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಶ್ರೀಶ ಟ್ರಾವೆಲ್ಸ್ ಪ್ರೈವೇಟ್ ಹಾಗೂ ಎನ್ ಹೊಸಹಳ್ಳಿ ಗ್ರಾಮದಿಂದ ಮಾರುತಿ ವ್ಯಾನ್ ನಿಟ್ಟೂರಿಗೆ ಹೋಗುತ್ತಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ನರಸಮ್ಮ ಎಂಬುವರನ್ನು ನಿಟ್ಟೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಮಾರುತಿ ವ್ಯಾನ್ ಹಾಗೂ ಖಾಸಗಿ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಮಾರುತಿ ಒಮಿನಿ ವ್ಯಾನ್ ನಲ್ಲಿದ್ದ ನರಸಿಂಹ ಮೂರ್ತಿ, ರಾಧಾಮಣಿ, ರವಿ ಅವರುಗಳನ್ನು ಹೈವೇ ಗಸ್ತು ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ನಲ್ಲಿದ್ದ ಅವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ
ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:null
Last Updated : Jan 4, 2020, 8:00 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.