ETV Bharat / state

Olxನಲ್ಲಿ ಮೋಸ ಮಾಡಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದವನ ಬಂಧನ - Tumakuru

ಈತನಿಂದ ಮೇಲುಕೊಟೆಯಲ್ಲಿ ಕಳ್ಳತನವಾಗಿದ್ದ ಬಜಾಜ್ ಡಿಸ್ಕವರ್, ಶ್ರೀರಂಗಪಟ್ಟಣದ ಬಜಾಜ್-15, ಗುಬ್ಬಿ ಪಟ್ಟಣದ ಬಜಾಜ್ ಪಲ್ಸರ್, ತುಮಕೂರು ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೆಟಿಎಂ ಬೈಕ್‌ನ ವಶಕ್ಕೆ ಪಡೆಯಲಾಗಿದೆ..

Olxನಲ್ಲಿ ಮೋಸ
Olxನಲ್ಲಿ ಮೋಸ
author img

By

Published : Dec 2, 2020, 3:47 PM IST

ತುಮಕೂರು : ಒಎಲ್​ಎಕ್ಸ್​ನಲ್ಲಿ ಮಾರಾಟಕ್ಕೆ ಇರಿಸಿದ್ದ ಬೈಕ್​ಗಳನ್ನು ಖರೀದಿಸುವ ನೆಪದಲ್ಲಿ ಮಾಲೀಕರ ಬಳಿ ಹೋಗಿ ಟೆಸ್ಟ್​​ಡ್ರೈವ್​ ಮಾಡುತ್ತೇನೆಂದು ಪಡೆದು ಕದ್ದೊಯ್ದಿದ್ದ ಕಳ್ಳನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ರಾಜೀವ್ ಗಾಂಧಿ ಬಡಾವಣೆಯ ನೌಷದ್ ಪಾಷಾ ಬಂಧಿತ ಆರೋಪಿ. ಈತ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಒಎಲ್​ಎಕ್ಸ್​ನಲ್ಲಿ ದ್ವಿಚಕ್ರ ವಾಹನಗಳು ಮಾರಾಟಕ್ಕಿವೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮಾಲೀಕರ ಬಳಿ ತೆರಳಿ ಬೈಕ್​ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಈತನಿಂದ ಮೇಲುಕೊಟೆಯಲ್ಲಿ ಕಳ್ಳತನವಾಗಿದ್ದ ಬಜಾಜ್ ಡಿಸ್ಕವರ್, ಶ್ರೀರಂಗಪಟ್ಟಣದ ಬಜಾಜ್-15, ಗುಬ್ಬಿ ಪಟ್ಟಣದ ಬಜಾಜ್ ಪಲ್ಸರ್, ತುಮಕೂರು ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೆಟಿಎಂ ಬೈಕ್‌ನ ವಶಕ್ಕೆ ಪಡೆಯಲಾಗಿದೆ. ಒಟ್ಟು ಬೈಕ್​ಗಳ ಮೌಲ್ಯ ₹2,90,000 ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.