ETV Bharat / state

ಇನ್ನುಳಿದ ಏಳು ಮಂದಿಗೆ ಮೇ, ಜೂನ್​ನಲ್ಲಿ ಸಚಿವ ಸ್ಥಾನ: ಸಚಿವ ಎಸ್. ಟಿ. ಸೋಮಶೇಖರ್

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾರ್ವಜನಿಕವಾಗಿ ಭರವಸೆ ಕೊಟ್ಟಂತೆ 10 ಮಂದಿಗೆ ಸಚಿವ ಸ್ಥಾನವನ್ನು ನೀಡಿದ್ದಾರೆ. ಇನ್ನುಳಿದ ಏಳು ಮಂದಿಗೆ ಮೇ ಅಥವಾ ಜೂನ್ ನಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿರುವುದಾಗಿ ನೂತನ ಸಚಿವ ಎಸ್​. ಟಿ. ಸೋಮಶೇಖರ್ ತಿಳಿಸಿದ್ದಾರೆ.

The remaining seven will be appointed as ministers: MLA S. T. Somashekhar
ಇನ್ನುಳಿದ ಏಳು ಮಂದಿಗೆ ಮೇ ಜೂನ್​ನಲ್ಲಿ ಸಚಿವ ಸ್ಥಾನ: ಸಚಿವ ಎಸ್. ಟಿ. ಸೋಮಶೇಖರ್
author img

By

Published : Feb 6, 2020, 8:13 PM IST

Updated : Feb 6, 2020, 8:41 PM IST

ತುಮಕೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾರ್ವಜನಿಕವಾಗಿ ಭರವಸೆ ಕೊಟ್ಟಂತೆ 10 ಮಂದಿಗೆ ಸಚಿವ ಸ್ಥಾನವನ್ನು ನೀಡಿದ್ದಾರೆ. ಇನ್ನುಳಿದ ಏಳು ಮಂದಿಗೆ ಮೇ ಅಥವಾ ಜೂನ್ ನಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿರುವುದಾಗಿ ನೂತನ ಸಚಿವ ಎಸ್​. ಟಿ. ಸೋಮಶೇಖರ್ ತಿಳಿಸಿದ್ದಾರೆ.

ಇನ್ನುಳಿದ ಏಳು ಮಂದಿಗೆ ಮೇ, ಜೂನ್​ನಲ್ಲಿ ಸಚಿವ ಸ್ಥಾನ: ಸಚಿವ ಎಸ್. ಟಿ. ಸೋಮಶೇಖರ್

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸದ್ಯ ಸಚಿವ ಸ್ಥಾನ ದೊರಕದ ಏಳು ಮಂದಿಗೆ ಎಂಎಲ್​ಸಿ ಮಾಡಿ ಖಾತೆ ಹಂಚಿಕೆ ಮಾಡಲಾಗುವುದು ಎಂದರು.

ಮುನಿರತ್ನ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರ ಶಾಸಕತ್ವ ಸ್ಥಾನದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಅವರಿಗೆ ಸಚಿವ ಸ್ಥಾನಮಾನ ನೀಡುವುದು ವಿಳಂಬವಾಗಿದೆ. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳ ಬಳಿ ಇರುವ ಖಾತೆಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದರು.

ಇದೇ ವೇಳೆ ಶ್ರೀ ಸಿದ್ದಲಿಂಗ ಸ್ವಾಮೀಜಿ ನೂತನ ಸಚಿವ ಎಸ್. ಟಿ. ಸೋಮಶೇಖರ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

Last Updated : Feb 6, 2020, 8:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.