ತುಮಕೂರು: ಇಲ್ಲಿನ ಕೊರಟಗೆರೆ, ಮಧುಗಿರಿ, ಪಾವಗಡ ರಸ್ತೆ ಮಾರ್ಗವಾಗಿ ಚಲಿಸುವ ಖಾಸಗಿ ಬಸ್ಗಳು ಅತಿ ವೇಗವಾಗಿ ಚಲಿಸುವುದರಿಂದ ಪದೇ ಪದೆ ಅಪಘಾತಗಳು ಸಂಭವಿಸುತ್ತಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದ ಕೊರಟಗೆರೆ ರಸ್ತೆ ಸುರಕ್ಷತಾ ಗ್ರಾಮಸ್ಥ ನಾಗರಿಕ ವೇದಿಕೆ ಸದಸ್ಯರ ಮೇಲೆ ಪೊಲೀಸರು ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆಂದು ಸಿಪಿಐನ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2017ಮಾರ್ಚ್ 25ರಂದು ಕೊರಟಗೆರೆ ತಾಲೂಕಿನ ಥರಟಿ ಗ್ರಾಮದ ಬಳಿ ಅತಿ ವೇಗವಾಗಿ ಬಂದ ಖಾಸಗಿ ಬಸ್ ವೊಂದು ದ್ವಿಚಕ್ರ ವಾಹನ ಸವಾರರ ಮೇಲೆ ಹರಿದ ಪರಿಣಾಮವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದ, ಅಲ್ಲದೆ ಅದೇ ತಿಂಗಳು ಗ್ರಾಮದಲ್ಲಿ ಮತ್ತೊಂದು ಖಾಸಗಿ ಬಸ್ ಅಪಘಾತದಲ್ಲಿ ಐದು ಜನ ಬಲಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಅಪಘಾತ ತಡೆಗಟ್ಟಲು ಖಾಸಗಿ ಬಸ್ಗಳ ವೇಗ ನಿಯಂತ್ರಿಸಬೇಕು ಎಂದು ಒತ್ತಾಯಿಸಲು ಮುಂದಾದ ಕೊರಟಗೆರೆ ರಸ್ತೆ ಸುರಕ್ಷತಾ ಗ್ರಾಮಸ್ಥ ನಾಗರಿಕ ವೇದಿಕೆಯ ಸದಸ್ಯರ ಮೇಲೆ ಪೊಲೀಸರು ಸುಳ್ಳು ಮೊಕದ್ದಮೆ ಹೂಡಿದ್ದಾರೆ ಎಂದರು. ಅಲ್ಲದೇ ಬಸ್ ಚಾಲಕರು ಎಚ್ಚೆತ್ತುಕೊಂಡು ಬಸ್ ಚಲಾಯಿಸಬೇಕು ಎಂದರು.