ತುಮಕೂರು: ಸೋಮವಾರ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಮೈತ್ರಿ ಸರ್ಕಾರ ಉಳಿಯುವುದಿಲ್ಲ ಎಂದು ಮಾಜಿ ಶಾಸಕ ರಾಜಣ್ಣ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ವರ್ಗಾವಣೆ ವಿಚಾರದಲ್ಲಿ ದಂಧೆ ನಡೆಯುತ್ತಿದೆ, ಹಾಗಾಗಿ ರಾಜ್ಯಪಾಲರು ಮಧ್ಯ ಪ್ರವೇಶಿಸಿ ವರ್ಗಾವಣೆ ತಡೆ ಹಿಡಿಯಬೇಕು ಎಂದು ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡರು.
ಉಪಮುಖ್ಯಮಂತ್ರಿ ಅವರ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿಯು ಅವ್ಯವಹಾರ ನಡೆದಿದ್ದು, ಅದರ ಬಗ್ಗೆ ಮುಂದಿನ ದಿನಗಳಲ್ಲಿ ಲಿಖಿತವಾಗಿ ತನಿಖೆಗೆ ದೂರು ನೀಡಲಿದ್ದೇನೆ ಎಂದರು. ರೇವಣ್ಣ ಕೆಎಂಎಫ್ನ ಹಗರಣದಲ್ಲಿ ಭಾಗಿಯಾಗಿರುವುದರ ಬಗ್ಗೆ ತನಿಖೆ ನಡೆಸಲು ಪತ್ರದ ಮೂಲಕ ಅರ್ಜಿ ಸಲ್ಲಿಸುತ್ತೇನೆ ಎಂದು ಮಾಜಿ ಶಾಸಕ ರಾಜಣ್ಣ ಇದೇ ವೇಳೆ ತಿಳಿಸಿದರು.