ETV Bharat / state

ತುಮಕೂರಿನಲ್ಲಿ ರಾಜ್ಯ ರೈತ ಸಂಘ ಸಭೆ; ಸಮಸ್ಯೆಗೆ ಸ್ಪಂದಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ

ಕರ್ನಾಟಕ ರಾಜ್ಯ ಭೀಕರ ಬರಗಾಲದಿಂದ ಎದುರಿಸುತ್ತಿರುವ ಸಮಸ್ಯೆಗಳು, ರೈತರ ಸಾಲ ಮನ್ನಾ, 2019ರ ಭೂ ಸ್ವಾಧೀನ ಕಾಯ್ದೆ ರದ್ದು, ಹನಿ ನೀರಾವರಿಗೆ ನೀಡುತ್ತಿರುವ ಸಹಾಯಧನದಲ್ಲಿ ತಾರತಮ್ಯ, ಕೇಂದ್ರ ಸರ್ಕಾರದ ಆರ್ಥಿಕ ನೀತಿ ಎಂಬ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ರಾಜ್ಯ ರೈತ ಸಂಘ ಸಭೆ
author img

By

Published : Sep 6, 2019, 8:58 AM IST

ತುಮಕೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಗುರುವಾರ ನಗರದ ಕನ್ನಡ ಭವನದಲ್ಲಿ ರಾಜ್ಯ ಸಮಿತಿ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಕರ್ನಾಟಕ ರಾಜ್ಯವು ಭೀಕರ ಬರಗಾಲದಿಂದ ಎದುರಿಸುತ್ತಿರುವ ಸಮಸ್ಯೆಗಳು, ರೈತರ ಸಾಲ ಮನ್ನಾ, 2019ರ ಭೂ ಸ್ವಾಧೀನ ಕಾಯ್ದೆ ರದ್ದು, ಹನಿ ನೀರಾವರಿಗೆ ನೀಡುತ್ತಿರುವ ಸಹಾಯಧನದಲ್ಲಿ ತಾರತಮ್ಯ, ಕೇಂದ್ರ ಸರ್ಕಾರದ ಆರ್ಥಿಕ ನೀತಿ ಎಂಬ ಜ್ವಲಂತ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಬೆಳಗಾವಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸತ್ಯಪ್ಪ ಮಾತನಾಡಿ, ಜಿಲ್ಲೆಯ ನದಿಗಳು ತುಂಬಿದ ಪರಿಣಾಮ ಪ್ರವಾಹ ಉಂಟಾಗಿ ಮನೆ ಆಸ್ತಿಪಾಸ್ತಿಯನ್ನು ಕಳಕೊಂಡವರಿಗೆ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ನೀಡಬೇಕೆಂದು ಈಗಾಗಲೇ ಬೆಳಗಾವಿಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಇದಕ್ಕೆ ಸೂಕ್ತ ಪರಿಹಾರ ಇನ್ನೂ ದೊರೆತಿಲ್ಲ, ಇನ್ನು ಕೆಲವರಿಗೆ ಪರಿಹಾರವಾಗಿ ಚೆಕ್ ವಿತರಣೆ ಮಾಡಲಾಗಿದೆ. ಅದರಡಿ ಬ್ಯಾಂಕ್​ಗಳಿಗೆ ಹೋದರೆ ಹಣ ಬಂದಿಲ್ಲ ಎನ್ನುತ್ತಾರೆ. ರೈತರು ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರ ಜೊತೆಗೆ ಚೆಕ್ ಹಿಡಿದುಕೊಂಡು ಬ್ಯಾಂಕ್​ಗಳಿಗೆ ಓಡಾಡುವುದೇ ಒಂದು ಕೆಲಸವಾಗಿಬಿಟ್ಟಿದೆ. ಈಗಾಗಲೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಗಮನಕ್ಕೂ ತರಲಾಗಿದೆ ಎಂದರು. ತಕ್ಷಣದಿಂದಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

Intro:ತುಮಕೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ನಗರದ ಕನ್ನಡ ಭವನದಲ್ಲಿ ರಾಜ್ಯ ಸಮಿತಿ ಸಭೆಯನ್ನು ನಡೆಸಲಾಯಿತು.

Body:ಈ ಸಭೆಯಲ್ಲಿ ಕರ್ನಾಟಕ ರಾಜ್ಯವು ಭೀಕರ ಬರಗಾಲದಿಂದ ಎದುರಿಸುತ್ತಿರುವ ಸಮಸ್ಯೆಗಳು, ರೈತರ ಸಾಲ ಮನ್ನಾ, 2019ರ ಭೂಸ್ವಾಧೀನ ಕಾಯ್ದೆ ರದ್ದು, ಹನಿ ನೀರಾವರಿಗೆ ನೀಡುತ್ತಿರುವ ಸಹಾಯಧನದಲ್ಲಿ ತಾರತಮ್ಯ, ಕೇಂದ್ರ ಸರ್ಕಾರದ ಆರ್ಥಿಕ ನೀತಿ ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಬೆಳಗಾವಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸತ್ಯಪ್ಪ ಮಾತನಾಡಿ, ಜಿಲ್ಲೆಯ ನದಿಗಳು ತುಂಬಿದ ಪರಿಣಾಮ ಪ್ರವಾಹ ಉಂಟಾಗಿ ಮನೆ ಆಸ್ತಿಪಾಸ್ತಿಯನ್ನು ಕಳೆದು ಕೊಂಡವರಿಗೆ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ನೀಡಬೇಕೆಂದು ಈಗಾಗಲೇ ಬೆಳಗಾವಿಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಇದಕ್ಕೆ ಸೂಕ್ತ ಪರಿಹಾರ ಇನ್ನೂ ದೊರೆತಿಲ್ಲ, ಇನ್ನು ಕೆಲವರಿಗೆ ಪರಿಹಾರವಾಗಿ ಚೆಕ್ ವಿತರಣೆ ಮಾಡಲಾಗಿದೆ, ಆದರಡ ಬ್ಯಾಂಕ್ಗಳಿಗೆ ಹೋದರೆ ಹಣ ಬಂದಿಲ್ಲ ಎನ್ನುತ್ತಾರೆ. ರೈತರು ಅನೇಕ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುವುದರ ಜೊತೆಗೆ ಚೆಕ್ ಹಿಡಿದುಕೊಂಡು ಬ್ಯಾಂಕ್ ಗಳಿಗೆ ಓಡಾಡುವುದೇ ಒಂದು ಕೆಲಸವಾಗಿಬಿಟ್ಟಿದೆ. ಈಗಾಗಲೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಗಮನಕ್ಕೂ ತರಲಾಗಿದೆ ಎಂದರು.
ತಕ್ಷಣದಿಂದಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ಜಿಲ್ಲೆಗೆ ಒಬ್ಬರಂತೆ ಉಪಮುಖ್ಯಮಂತ್ರಿಯನ್ನು ಮಾಡಿ ನಮಗೆ ಸಮಸ್ಯೆಯಿಲ್ಲ, ಮೊದಲು ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾರ್ಯಪ್ರವೃತ್ತರಾಗಿ ಸೂಕ್ತ ಪರಿಹಾರ ನೀಡದಿದ್ದರೆ ಜೈಲಿಗೆ ಹೋಗಲು ಸಿದ್ದನಿದ್ದೇನೆ ಎಂದರು.
ಬೈಟ್: ಸತ್ಯಪ್ಪ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ, ಬೆಳಗಾವಿ.

Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.