ತುಮಕೂರು: ಸರ್ಕಾರದ ಸೂಚನೆಯಂತೆ ಸಿದ್ದಗಂಗಾ ಮಠದಲ್ಲೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗಲಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಜನವರಿ ವೇಳೆಗೆ ಮುಕ್ಕಾಲು ಭಾಗ ಪಾಠ ಪ್ರವಚನ ಮುಕ್ತಾಯವಾಗಬೇಕಿತ್ತು. ಆದ್ರೆ ಈ ಬಾರಿ ಜನವರಿಯಲ್ಲಿ ಪ್ರಾರಂಭವಾಗುತ್ತಿದೆ ಎಂದರು.
ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಶಾಲೆಗಳಲ್ಲಿ ಸ್ವಚ್ಚತೆ, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಶಾಲೆಗಳಲ್ಲಿ ಶುದ್ದ ವಾತಾವರಣ ನಿರ್ಮಾಣವಾಗಬೇಕಿದೆ. ವಿದ್ಯಾರ್ಥಿಗಳು ಕೂಡ ಸರ್ಕಾರದ ನಿಯಮಗಳನ್ನ ಪಾಲನೆ ಮಾಡಬೇಕು. ಮಕ್ಕಳ ಸುರಕ್ಷತೆಗೆ ಎಲ್ಲಾ ವಿದ್ಯಾಸಂಸ್ಥೆಗಳು ಆದ್ಯತೆ ನೀಡಬೇಕು ಎಂದರು.
ಆನ್ಲೈನ್ ತರಗತಿಯಲ್ಲಿ ಪರಿಣಾಮಕಾರಿಯಾಗಿ ಓದಲು ಸಾಧ್ಯವಿಲ್ಲ. ಒಂದು ಕಡೆ ಸೇರಿ ಕಲಿತಾಗ ಮಾತ್ರ ಪರಿಣಾಮಕಾರಿಯಾಗಿರುತ್ತೆ, ಕಲಿಕೆ ಪೂರ್ಣವಾಗಿರುತ್ತೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು.