ತುಮಕೂರು: ಜೆಡಿಎಸ್ ಪಕ್ಷಕ್ಕೆ ಬಹುಮತ ಬರೋಲ್ಲ. ಯಾರೂ ಮುಖ್ಯಮಂತ್ರಿ ಆಗೋಲ್ಲ ಎಂದು ಹೇಳಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದ ಗುಬ್ಬಿ ಶಾಸಕ ಹಾಗೂ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಇದೀಗ ತಾನು ಕಾಂಗ್ರೆಸ್ ಪಕ್ಷಕ್ಕೆ ಹೋಗೋಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಗುಬ್ಬಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಎಲ್ಲಿಯೂ ಬಾಯಿ ತಪ್ಪಿ ಕಾಂಗ್ರೆಸ್ಗೆ ಹೋಗುತ್ತೇನೆ ಎಂದು ಹೇಳಿಲ್ಲ. ಚುನಾವಣಾ ಕಣದಲ್ಲಿ ಕುತಂತ್ರಗಳನ್ನು ಹೂಡಿ ಗೆಲ್ಲುವುದನ್ನು ಹೆತ್ತ ತಾಯಿ ಅಣೆಗೂ ಎಂದೂ ಕೂಡ ಮಾಡಿಲ್ಲ. ಮತದಾರರ ಆಶೀರ್ವಾದಿಂದಲೇ ಗೆದ್ದು ಬಂದಿದ್ದೇನೆ ಎಂದು ತಿಳಿಸಿದ್ದಾರೆ.