ETV Bharat / state

ಯಾವುದೋ ಶಕ್ತಿ ತುಮಕೂರಿಗೆ ನನ್ನನ್ನು ಕರೆದುಕೊಂಡು ಬಂದಿದೆ: ದೇವೇಗೌಡ

ತುಮಕೂರಿಗೆ ಯಾವುದೋ ಒಂದು ಶಕ್ತಿ ನನ್ನನ್ನು ಕರೆದುಕೊಂಡು ಬಂದಿದೆ ಎಂದು ದೇವೇಗೌಡರು ಪಕ್ಷದ ಪ್ರಚಾರ ಸಭೆಯಲ್ಲಿ ಹೇಳಿದ್ರು.

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡ
author img

By

Published : Apr 2, 2019, 8:01 AM IST

ತುಮಕೂರು: ಈ ಲೋಕಸಭಾ ಕ್ಷೇತ್ರಕ್ಕೆ ಬಂದಿರುವುದು ಯಾಕೆ ಎಂದು ನನಗೆ ಗೊತ್ತಿಲ್ಲ. ಆದರೆ ಯಾವುದೋ ಒಂದು ಶಕ್ತಿ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ ಎಂದು ಮಾಜಿ ಪ್ರಧಾನಿ ಹೆಚ್​​.ಡಿ.ದೇವೇಗೌಡ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.

ನಾನು ಚುನಾವಣೆಯಲ್ಲಿ ನಿಲ್ಲಬಾರದು ಎಂದು ಪ್ರತಿಜ್ಞೆ ಮಾಡಿದ್ದೆ. ಅಲ್ಲದೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಬಂದು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದ್ರು. ಈ ಕುರಿತು ಮೂರು ದಿನ ಯೋಚನೆ ಮಾಡಿದ್ದೆ ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ಗುಲಾಬ್​ ನಬಿ ಆಜಾದ್ ಸಂಪರ್ಕಿಸಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬೇಕೆಂದು ಕುಮಾರಸ್ವಾಮಿಯವರಿಗೆ ತಿಳಿಸಿದ್ರು ಎಂದು ಸ್ಮರಿಸಿದರು.

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡ

ಇತ್ತೀಚಿಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಛತ್ತಿಸ್​ಘಢ, ರಾಜಸ್ಥಾನದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಅಲ್ಲದೆ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದಿದ್ದ ಮೋದಿ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದ್ದನ್ನು ಅರಿತುಕೊಳ್ಳಬೇಕಿದೆ ಎಂದರು.

ಮಹಾಘಟಬಂಧನ್ ಮಹಾಮೇಳಾವ್ ಆಗಿದೆ ಎಂದು ಮೋದಿ ಅರ್ಥ ಮಾಡಿಕೊಳ್ಳಬೇಕು ಎಂದರು. ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧಿ ವಂಶದ ಬಗ್ಗೆ ಲಘುವಾಗಿ ಮಾತನಾಡುತ್ತೀರಾ. ಎಲ್ಲವೂ ನಿಮಗೆ ಗೊತ್ತಿಲ್ಲವೇ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದರು.

Intro:ಶಾಂತಿನಾಥ್, ಈಟಿವಿ ಭಾರತ್ , ತುಮಕೂರು....
–----------------------

ದೇವೇಗೌಡರು ಜಾತಿ ರಾಜಕಾರಣ ಮಾಡಿದವರಲ್ಲ......
ಮುಖ್ಯಮಂತ್ರಿ ಕುಮಾರಸ್ವಾಮಿ... .

ತುಮಕೂರು
ದೇವೇಗೌಡರು ಎಂದು ಕೂಡ ಜಾತಿ ರಾಜಕಾರಣ ಮಾಡಿದವರಲ್ಲ, ಎಲ್ಲಾ ಹಿಂದುಳಿದ ವರ್ಗದವರ ಅಭಿವೃದ್ಧಿಯತ್ತ ಸಣ್ಣ ಶಕ್ತಿಯನ್ನು ಧಾರೆಯೆರೆದವರು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯಲ್ಲಿ ನಡೆದ ಜೆಡಿಎಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,
ಹೀಗಾಗಿ ದೇವೇಗೌಡರನ್ನು ಸಣ್ಣ ಸಮುದಾಯದ ಮತದಾರರು ಮರೆಯಬಾರದು ಎಂದು ತಿಳಿಸಿದರು.
ಚಿತ್ರದುರ್ಗದಲ್ಲಿ ಯಾದವ ಸಮುದಾಯಕ್ಕೆ ಸೇರಿದ ನಿವೃತ್ತ ಅಧಿಕಾರಿ ಕೋದಂಡರಾಮಯ್ಯ, ಚಿಕ್ಕ ಬಳ್ಳಾಪುರದಲ್ಲಿ ಹಿಡಿದ ಸಮಾಜಕ್ಕೆ ಸೇರಿದ ಆರ್ ಎಲ್ ಜಾಲಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಸಂಸದರನ್ನಾಗಿ ಆಯ್ಕೆ ಮಾಡಿಕೊಂಡು ಲೋಕಸಭೆಗೆ ಅಂದು ಎಚ್ ಡಿ ದೇವೇಗೌಡರು ಕರೆದುಕೊಂಡು ಹೋಗಿದ್ರು.
ದೇವೇಗೌಡರು ಕೇವಲ ಒಕ್ಕಲಿಗರ ಮತದಿಂದಲೇ ಗೆಲುವು ಸಾಧಿಸುತ್ತಾರೆ ಎಂಬುದನ್ನು ದುರಹಂಕಾರದಿಂದ ಹೇಳುವುದಿಲ್ಲ. ನಾಯಕ ಸಮುದಾಯದ ಮತಗಳು ಬೇಕು, ದಲಿತ ಬಂಧುಗಳ ಮತಗಳು ಬೇಕಿದೆ , ಕುರುಬ ಮತ್ತು ಯಾದವ ಸಮುದಾಯದ ಮತಗಳು ಆಶೀರ್ವಾದ ಬೇಕಿದೆ ಎಂದರು.
ಅದೇ ರೀತಿ ಮುಸ್ಲಿಂ ಸಮುದಾಯದ ಸಿಎಂ ಇಬ್ರಾಹಿಂ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಅಂದು, ಅವರು ಪ್ರಧಾನಿಯಾಗಿದ್ದ ವೇಳೆ ಎರಡು ಪ್ರಮುಖ ಖಾತೆಗಳನ್ನು ನೀಡಿ ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದರು.

ನಾನು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಮೂರು ವಿಧಾನಸಭೆ ಅಧಿವೇಶನಗಳ ನಡೆದಿವೆ. ಆದರೆ ಚಿಕ್ಕನಾಯಕನಹಳ್ಳಿ ಬಿಜೆಪಿ ಶಾಸಕ ಜಿ ಮಾಧುಸ್ವಾಮಿ ಮಾತ್ರ ಒಮ್ಮೆಯೂ ವಿಧಾನಸಭೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಸ್ತಾಪ ಮಾಡಿಲ್ಲ. ಕೇವಲ ರಾಜ್ಯದ ಮೈತ್ರಿ ಸರ್ಕಾರವನ್ನು ಬೀಳಿಸಬೇಕೆಂಬ ಹುನ್ನಾರದಲ್ಲಿ ತೊಡಗಿದ್ದಾರೆ. ಅವರ ಕ್ಷೇತ್ರದ ನೀರಾವರಿ ಯೋಜನೆಗಳ ಕುರಿತು ವಿಧಾನಸಭೆಯಲ್ಲಿ ಚಕಾರ ಎತ್ತಲಿಲ್ಲ ಎಂದು ಪರೋಕ್ಷವಾಗಿ ಕಿಡಿಕಾರಿದರು. ಹೀಗಾಗಿ ನಾನು ಇವರಿಂದ ನಾನು ತುಮಕೂರಿಗೆ ನೀರು ತಂದು ಕೊಡಬೇಕೆಂಬ ಪಾಠವನ್ನು ಕಲಿತುಕೊಳ್ಳಬೇಕಿಲ್ಲ ಎಂದು ಪರೋಕ್ಷವಾಗಿ ಮಾಧುಸ್ವಾಮಿಗೆ ಸ್ವಾಮಿಗೆ ಟಾಂಗ್ ನೀಡಿದರು.

Body:ತುಮಕೂರು

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.