ETV Bharat / state

ಬೆಂಗಳೂರು ಗಲಭೆಗೆ ಕಾರಣರಾದವರನ್ನು ಗಲ್ಲಿಗೇರಿಸಿ: ಸೊಗಡು ಶಿವಣ್ಣ

ಸಿದ್ದರಾಮಯ್ಯರಿಗೆ ಮಾನ ಮರ್ಯಾದೆ ಇಲ್ಲ. ಎಸ್​ಡಿಪಿಐ, ಪಿಎಫ್​ಐ ಸಂಘಟನೆಯನ್ನ ಬೆಳೆಸಿದ್ದು ಇವರೇ. ಅವರ ಮೇಲಿದ್ದ ಕೇಸನ್ನು ವಾಪಸ್ ಪಡೆದಿದ್ದು ಅವರೇ. ಅವರ ಪಾಪದ ಕೂಸು ಇವತ್ತು ಗಲಭೆ ಮಾಡಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.

sogadu shivanna
sogadu shivanna
author img

By

Published : Aug 13, 2020, 4:33 PM IST

Updated : Aug 13, 2020, 5:30 PM IST

ತುಮಕೂರು: ಬೆಂಗಳೂರಿನ ಗಲಭೆಗೆ ಕಾರಣರಾದವರನ್ನ ಸಾಮೂಹಿಕವಾಗಿ ಗಲ್ಲಿಗೇರಿಸಬೇಕು. ಆಗ ಮಾತ್ರ ಅಂಥವರು ಬುದ್ದಿ ಕಲಿಯುತ್ತಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರು ಮೀರ್‌ ಸಾದೀಕ್​ಗಳು, ದೇಶಾಭಿಮಾನವಿಲ್ಲದ ನಾಚಿಕೆಗೇಡಿಗಳು. ಮತಕ್ಕಾಗಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದರು.

ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ

ರಾಮಲಿಂಗಾರೆಡ್ಡಿ‌‌ ಮೀರ್ ಸಾದಿಕ್ ರೆಡ್ಡಿಯಾಗಿದ್ದಾರೆ. ಕಾಂಗ್ರೆಸ್​ನವರು ನೋಡೋಕೆ ಒಳ್ಳೆಯವರು. ಒಳಗೆ ಗಬ್ಬು ನಾರುತ್ತಾರೆ ಎಂದರು.

ಸಿದ್ದರಾಮಯ್ಯರಿಗೆ ಮಾನ ಮರ್ಯಾದೆ ಇಲ್ಲ. ಎಸ್​ಡಿಪಿಐ, ಪಿಎಫ್​ಐ ಸಂಘಟನೆಯನ್ನ ಬೆಳೆಸಿದ್ದು ಇವರೇ. ಅವರ ಮೇಲಿದ್ದ ಕೇಸನ್ನು ವಾಪಸ್ ಪಡೆದಿದ್ದು ಅವರೇ. ಅವರ ಪಾಪದ ಕೂಸು ಇವತ್ತು ಗಲಭೆ ಮಾಡಿದೆ ಎಂದರು.

ಇಡೀ ದೇಶದಲ್ಲಿ ಕಾಂಗ್ರೆಸ್​ನ ಕುಮ್ಮುಕ್ಕಿನಿಂದ ಗಲಭೆಕೋರರಿಗೆ ಪ್ರೋತ್ಸಾಹ ಸಿಗುತ್ತಿದೆ. ಮುಸ್ಲಿಂ ಸಮುದಾಯದ ಯುವಕರು ಆಂಜನೇಯ ಸ್ವಾಮಿ ದೇವಸ್ಥಾನದ ರಕ್ಷಣೆ ಮಾಡುವ ನಾಟಕ ಆಡಿದ್ದಾರೆ.
ಮುಂದೆ ನಾವು ಹುಲಿ ವೇಷ ಹಾಕಿ ಅಂಥವರಿಗೆ ಬುದ್ದಿ ಕಲಿಸಬೇಕಾಗುತ್ತದೆ ಎಂದರು.

Last Updated : Aug 13, 2020, 5:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.