ತುಮಕೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಪ್ರತಿಕ್ರಿಯಿಸಿದ್ದು, ಏಕವಚನದಲ್ಲಿ ಟೀಕಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಬಗೆಗೆ ಮಾತನಾಡಲು ಅವರಿಗೆ ಯಾವ ಹಕ್ಕಿದೆ. ನಮ್ಮದೇ ರಕ್ತವನ್ನು ಮೀರ್ ಸಾಧಿಕ್ ರಕ್ತಕ್ಕೆ ಬದಲಾಯಿಸಿದ್ದಾರೆ. ಕನಕದಾಸರ ಹೆಸರು ಹೇಳಲೂ ಸಿದ್ದರಾಮಯ್ಯನವರಿಗೆ ಯಾವುದೇ ಹಕ್ಕಿಲ್ಲ. ಸ್ವಾಮೀಜಿಗಳ ವಿರುದ್ಧ ಮಾತಾಡಿ ಜಾತ್ರೆಯಲ್ಲಿ ಕುಣಿತಾರೆ ಎಂದು ಕಟುವಾಗಿ ಟೀಕಿಸಿದರು.
ಸಿದ್ದರಾಮಯ್ಯನವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಒಕ್ಕಲಿಗ, ಲಿಂಗಾಯತ, ಹಿಂದುಳಿದ ವರ್ಗ ಎಲ್ಲಾ ಒಡೆದು ಚೂರು ಆಗಿಸಲು ಹೊರಟಿದ್ದಾರೆ. ಮುಂದಿನ ದಿನದಲ್ಲಿ ಧರ್ಮದ್ರೋಹಿ, ದೇಶದ್ರೋಹಿಗಳಿಗೆ ನಾವೆಲ್ಲ ದೇವಸ್ಥಾನಗಳಲ್ಲಿ ಬಹಿಷ್ಕರಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸಣ್ಣ ಮಾತುಗಳನ್ನಾಡಿದ್ದಾರೆ, ತಕ್ಷಣ ಕ್ಷಮೆಯಾಚಿಸಬೇಕು: ರಂಭಾಪುರಿ ಶ್ರೀ!