ETV Bharat / state

ತುಮಕೂರು ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ: ಸೊಗಡು ಶಿವಣ್ಣ ಘೋಷಣೆ

ಏ.20 ಗುರುವಾರದಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಘೋಷಣೆ ಮಾಡಿದ್ದಾರೆ.

author img

By

Published : Apr 18, 2023, 4:30 PM IST

Updated : Apr 18, 2023, 10:58 PM IST

Etv Bharatsogadu-shivanna-contesting-as-independent-candidate
ತುಮಕೂರು ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ: ಸೊಗಡು ಶಿವಣ್ಣ
ಮಾಜಿ ಸಚಿವ ಸೊಗಡು ಶಿವಣ್ಣ

ತುಮಕೂರು: ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ತುಮಕೂರು ನಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ. ನಗರದಲ್ಲಿ ಮಧ್ಯಮದವರೊಂದಿಗೆ ಮಾತನಾಡಿದ ಅವರು, ಏ.20 ಗುರುವಾರದಂದು ನಾಮಪತ್ರ ಸಲ್ಲಿಸುತ್ತೇನೆ ಎಂದರು. ಇವತ್ತಿನಿಂದ ಹೊಸ ಅಧ್ಯಾಯ ಶುರು ಆಗುತ್ತಿದೆ. ನಾನು ಸ್ವಾಭಿಮಾನಿ, ನನ್ನ ಜೊತೆಯಲ್ಲಿರುವವರು ಕೂಡ ಸ್ವಾಭಿಮಾನಿಗಳು. ಎಲ್ಲರೂ ಸ್ವತಂತ್ರ್ಯ ಅಭರ್ಥಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಹೀಗಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿನಿ. ಶಾಂತಿ ಮಂತ್ರ, ಸಮಾನತೆ ಮಂತ್ರ ಜಪಿಸುತ್ತೇನೆ, ಭ್ರಷ್ಟಾಚಾರ ಮುಕ್ತವಾಗಿರಬೇಕು ಎಂದೂ ಇದೇ ವೇಳೆ ಹೇಳಿದರು.

ನಾನು ಇನ್ಮೇಲೆ ಮನೆ ಮನೆಗೆ ತೆರಳಿ ಮತ ಕೇಳುತ್ತೇನೆ. ಎರಡು ಜೋಳಿಗೆ ಹಿಡಿದು ಹೋಗುತ್ತೇನೆ, ಹಿಂದೆ ಋಷಿ ಮುನಿಗಳು ಜೋಳಿಗೆ ಹಿಡಿದು ಮಠಮಾನ್ಯಗಳ ಅಭಿವೃದ್ದಿಗೆ ಹೋಗುತ್ತಿದ್ದರು. ನಾನು ಹಾಗೆ ಜೋಳಿಗೆ‌ ಹಿಡಿದು ಹೋಗುತ್ತಿದ್ದೇನೆ. ಒಂದು ವೋಟು, ಇನ್ನೊಂದು ನೋಟಿಗಾಗಿ ಜೋಳಿಗೆ ಹಾಕಿದ್ದೇನೆ. ನಾನು ಯಾವತ್ತು ಸ್ವಜನ ಪಕ್ಷಪಾತ ಮಾಡೋದಿಲ್ಲ. ಕರಪತ್ರಗಳನ್ನ ಮನೆ ಮನೆಗೂ ಕೂಡುತ್ತೇನೆ ಎಂದು ಶಿವಣ್ಣ ಇದೇ ವೇಳೆ ಹೇಳಿದರು.

1994 ರಲ್ಲಿ ಕಾಂಗ್ರೆಸ್​ನವರು ನಮ್ಮನ್ನು ಜೈಲಿಗೆ ಕಳುಹಿಸಿದ್ದರು, ಅದರು ಸಹ ಕಾಂಗ್ರೆಸ್​ ಎಂಎಲ್​ಎಗಳು ಮತ್ತು ಆಗ ಮುಖ್ಯಮಂತ್ರಿಗಳಾಗಿದ್ದ ಎಸ್​ ಎಂ ಕೃಷ್ಣ ಮತ್ತು ಧರ್ಮಸಿಂಗ್ ನಾನು ಕೇಳಿದಂತ ಒಳ್ಳೆಯ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಒಮ್ಮೆ ಶಾಸಕನಾದ ನಂತರ ಇಡೀ ರಾಜ್ಯದ ವ್ಯವಸ್ಥೆಯೊಳಗೆ ಬದುಕಬೇಕಾಗುತ್ತದೆ ಅದಕ್ಕಾಗಿ ನಾನು ಎಲ್ಲಾ ಪಕ್ಷದವರೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದಿದ್ದೇನೆ ಎಂದರು.

ನಾನು ಕುಮಾರಸ್ವಾಮಿಯನ್ನು ಭೇಟಿ ಮಾಡುತ್ತೇನೆ, ಅದೇ ರೀತಿ ಸಣ್ಣ ಪಕ್ಷಗಳಾದ ಆಮ್​ಆದ್ಮಿ ಪಕ್ಷದವರು ನಮ್ಮ ಅಭ್ಯರ್ಥಿಯಾಗಿ ಎಂದು ಕೇಳಿಕೊಂಡರು ಎಂದರು. ನನ್ನ ಹಿತೈಷಿಗಳು ಮತ್ತು ನಾಗರಿಕ ಬಂಧುಗಳ ಪರವಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನಿಮ್ಮ ಮನೆ ಮನೆಗೆ ಬಂದು ವೋಟ್​ ಕೇಳುತ್ತೇನೆ. 1994ರಿಂದ ನಾಗರಿಕ ಬಂಧುಗಳು ಮತ್ತು ಹಿತೈಷಿಗಳಿಗೆ ನನ್ನ ಮನೆ ತೆರೆದ ಬಾಗಿಲು. ಜನರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದು ಸೊಗಡು ಶಿವಣ್ಣ ಹೇಳಿದರು.

ಸ್ವತಂತ್ರ ಸಂಸದೆ ಮಂಡ್ಯದ ಸುಮಲತಾ ಮೋದಿಜೀ ಅಂತಾರೇ. ಅವರು ಮೋದಿಯನ್ನೂ ಪ್ರಶ್ನೆ ಮಾಡ್ತಾರೆ. ಹಾಗೇ ನಾನು ಎಲ್ಲರನ್ನೂ ಪ್ರಶ್ನೆ ಮಾಡ್ತೀನಿ. ಸುಮಲತಾ ಅವರು ಮೋದಿ ಅವರ ಒಳ್ಳೇದನ್ನ ಒಳ್ಳೆದು, ಕೆಟ್ಟದನ್ನ ಕೆಟ್ಟದನ್ನು ಅಂತಾರೆ. ಆ ಶಕ್ತಿ ಸ್ವತಂತ್ರ ಅಭ್ಯರ್ಥಿಗೆ ಇರುತ್ತೆ. ಭ್ರಷ್ಟಾಚಾರದ ವಿರುದ್ದ ನಾನು ಹೋರಾಟ ಮಾಡುತ್ತೇನೆ. 1972 ರಲ್ಲಿ ನನ್ನನ್ನ ಜೈಲಿಗೆ ಹಾಕಿಸಿದಂತಾ ವ್ಯಕ್ತಿಗಳನ್ನ ತಾಳ್ಮೆಯಿಂದ ಸಹಿಸಿಕೊಂಡಿದ್ದೇನೆ. ನಾನು ಮುಂದೆ ಮಾಡಬೇಕಿರೋ ಕೆಲಸ ಬೇಕಾದಷ್ಟು ಇದೆ. ಎಲ್ಲಾ ಪಾರ್ಟಿಯವರು ನನ್ನ ಜೊತೆ ಇದ್ದಾರೆ‌ ಎಂದರು

ಬಿಜೆಪಿ ತೊರೆದ ಬಳಿಕ ಸೊಗಡು ಶಿವಣ್ಣ, ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಜೆಡಿಎಸ್ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ಅವರ ಈ ಪ್ರಯತ್ನ ವಿಫಲವಾಗಿತ್ತು.

ಇದನ್ನೂ ಓದಿ:ರಾಜ್ಯ ರಾಜಕೀಯಕ್ಕೆ ಘಟಾನುಘಟಿಗಳನ್ನು ನೀಡಿದ ಹಳೇ ಮೈಸೂರು ಭಾಗದ ಅವಲೋಕನ

Last Updated : Apr 18, 2023, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.