ತುಮಕೂರು: ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಯಡಿ ಹಣ ಪಡೆಯಲು ರೈತ ಫಲಾನುಭವಿಗಳು ಬೆಳಗ್ಗೆಯಿಂದಲೂ ಡಿಸಿಸಿ ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲಲು ಸಾಧ್ಯವಾಗದೇ ಚಪ್ಪಲಿಗಳನ್ನು ಇರಿಸಿ ಬೇರೆಡೆ ಕುಳಿತು ಕಾಯುತ್ತಿರುವ ಘಟನೆ ತುರುವೇಕೆರೆ ತಾಲೂಕಿನಲ್ಲಿ ಸಾಮಾನ್ಯವಾಗಿದೆ.
ಬೆಳಿಗ್ಗೆ 6 ಗಂಟೆಗೆ ಬ್ಯಾಂಕುಗಳಿಗೆ ಬರುವ ರೈತರು ಸುಮಾರು 8 ಗಂಟೆ ವೇಳೆಗೆ ಬಿಸಿಲೇರುತ್ತಿದ್ದಂತೆ ಸರತಿ ಸಾಲಲ್ಲಿ ನಿಲ್ಲಲು ಸಾಧ್ಯವಾಗದೇ ಬ್ಯಾಗ್, ಚಪ್ಪಲಿಗಳನ್ನು ತಮ್ಮ ಸ್ಥಳದಲ್ಲಿರಿಸುತ್ತಾರೆ. ಬ್ಯಾಂಕ್‌ನಲ್ಲಿ ಎರಡು ಕೌಂಟರ್ಗಳನ್ನು ತೆರೆದರೂ ಸಾಕಷ್ಟು ಸಂಖ್ಯೆಯ ರೈತರು ಇರುವುದರಿಂದ ಬೇಗ ಹಣ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ.
ಕೊರೊನಾ ಸೋಂಕು ಪ್ರಸರಣ ಭೀತಿ ನಡುವೆಯೂ ರೈತರು 2 ಸಾವಿರ ರೂ. ಹಣ ಪಡೆಯಲು ಮುಂಜಾನೆಯೇ ಬ್ಯಾಂಕ್ ಮುಂದೆ ಜಮಾಯಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: ಆಟೋ, ಕ್ಯಾಬ್ ಚಾಲಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಹಣ ಪಡೆಯಲು ಅರ್ಜಿ ಸಲ್ಲಿಸುವಂತೆ ಸೂಚನೆ