ತುಮಕೂರು: ಸುಮಾರು 6,600 ಅಡಿ ಎತ್ತರದ ಸಿದ್ಧರಬೆಟ್ಟದಲ್ಲಿ ಅಪಾರ ಪ್ರಮಾಣದ ಅನ್ನ ಸುರಿದರೂ ಒಂದು ಕಾಗೆ ಕೂಡಾ ಇತ್ತ ಸುಳಿಯುವುದಿಲ್ಲ.
ಓದಿ: ರಾಜ್ಯದಲ್ಲಿಂದು 590 ಮಂದಿಗೆ ಸೋಂಕು ದೃಢ; 6 ಮಂದಿ ಬಲಿ
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಿಶಿಷ್ಟವಾದ ಗಿಡಮೂಲಿಕೆಗಳ ರಾಶಿಯನ್ನೇ ಹೊಂದಿರುವ ಸಿದ್ಧರಬೆಟ್ಟದಲ್ಲಿ ಕಾಗೆಗಳು ಹುಡುಕಿದರೂ ಕಾಣಿಸುವುದಿಲ್ಲ. ಹಾಗಂತ ಯಾರೂ ಕೂಡ ಕಾಗೆಗಳಿಗೆ ನಿಷೇಧ ಹೇರಿಲ್ಲ. ಇನ್ನುಳಿದಂತೆ ಕರಡಿ, ಚಿರತೆಗಳು ಓಡಾಡಿಕೊಂಡಿರುತ್ತವೆ. ಅಲ್ಲದೆ ವಿವಿಧ ರೀತಿಯ ಪಕ್ಷಿಗಳು ಕೂಡಾ ಇಲ್ಲಿವೆ.
ಸುಮಾರು 6,600 ಅಡಿ ಎತ್ತರದ ಸಿದ್ಧರಬೆಟ್ಟದಲ್ಲಿ, ಎಲ್ಲಿಯಾದರೂ ಅಪಾರ ಪ್ರಮಾಣದ ಅನ್ನವನ್ನು ಸುರಿದರೂ ಒಂದು ಕಾಗೆ ಕೂಡಾ ಇತ್ತ ಸುಳಿಯುವುದಿಲ್ಲ. ಈ ಬೆಟ್ಟದ ಸಮೀಪದಲ್ಲೇ ಇರುವ ಚಂದ್ರಗಿರಿ ಬೆಟ್ಟ ಮತ್ತು ಶಿವಗಂಗೆ ಬೆಟ್ಟ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಬೆಟ್ಟಗುಡ್ಡಗಳಿವೆ. ಆ ಬೆಟ್ಟಗಳಲ್ಲಿ ಕಾಗೆಗಳು ಕಾಣ ಸಿಗುತ್ತವೆ.
ಸಿದ್ಧರಬೆಟ್ಟದಲ್ಲಿ ಅಪಾರ ಔಷಧೀಯ ಗಿಡಮೂಲಿಕೆಗಳಿವೆ. ಬೆಟ್ಟದಲ್ಲಿ ಎಲ್ಲಿ ನೋಡಿದರಲ್ಲಿ ಔಷಧೀಯ ಸಸ್ಯಗಳು ಕಾಣಸಿಗುತ್ತವೆ. ಅಲ್ಲದೆ ಇಲ್ಲಿರುವ ಕೆಲ ಸಸ್ಯಗಳ ವಾಸನೆಯಿಂದ ಕಾಗೆಗಳು ದೂರ ಉಳಿಯುತ್ತವೆ ಎಂಬುದು ವೈಜ್ಞಾನಿಕ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಆದರೆ, ಅದು ಯಾವ ಔಷಧಿ ಸಸ್ಯ ಎಂಬುದು ಮಾತ್ರ ಈವರೆಗೂ ಪತ್ತೆಯಾಗಿಲ್ಲ. ಕಾಗೆಗಳು ಸಿದ್ಧರಬೆಟ್ಟ ಕಂಡರೆ ಬಿಚ್ಚಿ ಬೀಳುವುದು ಸತ್ಯ ಎಂದೇ ಹೇಳಬಹುದಾಗಿದೆ.