ETV Bharat / state

ಆಲ್​​ರೌಂಡರ್​​ ​ ಆದ ಸಿದ್ಧಗಂಗಾ ಶ್ರೀ: ಮಕ್ಕಳಲ್ಲಿ ಇಮ್ಮಡಿಗೊಂಡ ಕ್ರೀಡಾಸ್ಫೂರ್ತಿ..!

ಸಿದ್ದಗಂಗಾ ಮಠ ಇದೀಗ ತ್ರಿವಿಧ ದಾಸೋಹದ ಜೊತೆಗೆ ಕ್ರೀಡಾಸ್ಫೂರ್ತಿಯನ್ನು ತುಂಬುತ್ತಿದೆ. ಮಠದ ಸ್ವಾಮೀಜಿಗಳೇ ಮುಂದೆ ಬಂದು ಇಲ್ಲಿನ ವಿದ್ಯಾರ್ಥಿಗಳಲ್ಲಿ ಕ್ರೀಡಾಭಿಮಾನ ತುಂಬುತ್ತಿದ್ದಾರೆ.

ಮಕ್ಕಳೊಂದಿಗೆ ವಾಲಿಬಾಲ್ ಆಡುತ್ತಿರುವ ಶ್ರೀ ಸಿದ್ದಲಿಂಗ ಸ್ವಾಮೀಜಿ
author img

By

Published : Jul 6, 2019, 11:41 AM IST

ತುಮಕೂರು: ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರತಿದಿನ ಮಠದ ಮಕ್ಕಳೊಂದಿಗೆ ಕೆಲಕಾಲ ಆಟ ಆಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಬ್ಯಾಟ್​ ಹಿಡಿದು ಅಂಗಳಕ್ಕೆ ಇಳಿದಿದ್ದ ಸ್ವಾಮೀಜಿ, ಸಿಕ್ಸ್​ ಬಾರಿಸುವ ಮೂಲಕ ತಾವೂ ಕೂಡ ಕ್ರಿಕೆಟ್​ ಪಟು ಎಂದು ಸಾಬೀತು ಪಡಿಸಿದ್ದರು.

ಕ್ರಿಕೆಟ್ ಆಡಿದ ಸಿದ್ದಗಂಗಾ ಮಠದ ಸ್ವಾಮೀಜಿ..!

ಇದೀಗ ವಾಲಿಬಾಲ್ ಹಿಡಿದು​ ಅಂಗಳಕ್ಕೆ ಬಂದ ಅವರು, ಮಕ್ಕಳ ಜೊತೆ ಆಟವಾಡಿ ರಂಜಿಸುವ ಮೂಲಕ ಕ್ರಿಕೆಟ್​ ಅಷ್ಟೇ ಅಲ್ಲ ನಾನೋರ್ವ ಆಲ್ ​ರೌಂಡರ್​ ಕ್ರೀಡಾಪಟು ಎಂದು ತೋರ್ಪಡಿಸಿದರು. ನಿತ್ಯ ಸಂಜೆ ವಾಯು ವಿಹಾರಕ್ಕೆ ಹೋಗುವ ಸ್ವಾಮೀಜಿ, ಅಲ್ಲಿ ಕೆಲಕಾಲ ಮಕ್ಕಳೊಂದಿಗೆ ಆಟವಾಡಿ ಕ್ರೀಡಾ ಮನೋಭಾವನೆಯನ್ನು ಇಮ್ಮಡಿಗೊಳಿಸುತ್ತಿದ್ದಾರೆ. ಮಕ್ಕಳೂ ಸಹ ಅಷ್ಟೇ ಸಂತಸದಿಂದ ಪಾಲ್ಗೊಂಡು ಸ್ವಾಮೀಜಿಗಳ ಆಟಕ್ಕೆ ಸಾಥ್ ನೀಡುತ್ತಾರೆ.

Intro:ಸಿದ್ದಗಂಗಾ ಮಠದ ಮಕ್ಕಳಲ್ಲಿ ಇಮ್ಮಡಿಗೊಂಡ ಕ್ರೀಡಾಸ್ಪೂರ್ತಿ.....

ತುಮಕೂರು
ತುಮಕೂರಿನ ಸಿದ್ದಗಂಗಾ ಮಠ ತ್ರಿವಿಧ ದಾಸೋಹಕ್ಕೆ ಪೂರಕವಾಗಿ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ಇನ್ನು ಮಠದಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ ಮೂಡಿಸಲು ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮುಂದಾಗಿದ್ದಾರೆ.
ಇದಕ್ಕೆ ಪೂರಕವಾಗಿ ಮಕ್ಕಳೊಂದಿಗೆ ವಾಲಿಬಾಲ್ ಕ್ರಿಕೆಟ್ ಇನ್ನಿತರ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪ್ರತಿದಿನ ಮಕ್ಕಳು ಶಾಲೆ ಮುಗಿಸಿ ಮೈದಾನದಲ್ಲಿ ಆಟವಾಡುತ್ತಿರುರ್ತಾರೆ ಆ ಭಾಗದಲ್ಲಿ ವಾಯು ವಿಹಾರಕ್ಕೆ ಹೋಗುವ ಸ್ವಾಮೀಜಿ ನಿತ್ಯ ಕನಿಷ್ಠ ಅರ್ಧ ಗಂಟೆಗೂ ಹೆಚ್ಚು ಕಾಲ ಮಕ್ಕಳೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ.
ಈ ರೀತಿ ಸ್ವತಹ ಸ್ವಾಮೀಜಿಯೇ ಬಂದು ತಮ್ಮೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಕ್ರೀಡಾ ಮನೋಭಾವನೆ ಇಮ್ಮಡಿಗೊಳಿಸುತ್ತಿದೆ ಎಂದು ಮಠದ ಮಕ್ಕಳು ಸಂತಸ ವ್ಯಕ್ತಪಡಿಸುತ್ತಾರೆ.Body:ತುಮಕೂರುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.