ತುಮಕೂರು : ಒಂದು ಶತಮಾನಕ್ಕೆ ಆಗುವಷ್ಟು ಪಾಠವನ್ನು 2020ನೇ ವರ್ಷ ಕಲಿಸಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, 2020 ಮುಗಿಯುತ್ತಿದೆ 2021ಕ್ಕೆ ಕಾಲಿಡುತ್ತಿದ್ದೇವೆ. 2020 ನಮ್ಮ ಜೀವಮಾನದಲ್ಲಿ ಮರೆಯಲಾಗದ ವರ್ಷವಾಗಿದೆ. ಕೋವಿಡ್ ವರ್ಷ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ವರ್ಷವನ್ನು ಪ್ರಪಂಚವೇ ಮರೆಯುವಂತಿಲ್ಲ. ಈ ವರ್ಷ ಎಲ್ಲಾ ಕ್ಷೇತದಲ್ಲೂ ಹಿನ್ನಡೆಯುಂಟಾಗಿದೆ ಎಂದರು.
ಓದಿ : ನಿಷೇಧಾಜ್ಞೆಗೆ ಬೀಕೋ ಎನ್ನುತ್ತಿರುವ ಕಡಲತೀರ; ಹೊಸ ವರ್ಷಾಚರಣೆಗೆ ಗೋವಾದತ್ತ ಹರಿದ ಜನ!
2020 ನೇ ವರ್ಷ ಕಡಿಮೆ ವ್ಯವಸ್ಥೆಯಲ್ಲಿ ಹೇಗೆ ಬದುಕಬೇಕು ಎಂಬುವುದನ್ನು ಕಲಿಸಿದೆ. 2021ನೇ ವರ್ಷ ಪ್ರಾರಂಭವಾದರೂ, ಕೊರೊನಾ ಮಹಾಮಾರಿ ಅಂತ್ಯವಾಗಿಲ್ಲ. ಸದ್ದು ಗದ್ದಲ, ವಿಜೃಂಭಣೆ, ಸಂಭ್ರಮಾಚರಣೆ ಇಲ್ಲದೇ 2021 ಅನ್ನು ಸ್ವಾಗತಿಸಬೇಕು. ಜನರಿಗೆ ಹೊಸ ಹುರುಪಿರುತ್ತದೆ, ನಾಳೆ ಮಠಕ್ಕೆ ಸಹಜವಾಗಿ ಭಕ್ತರು ಬರುತ್ತಾರೆ. ಮಠದಲ್ಲಿ ಪ್ರತಿ ವರ್ಷದಂತೆ ವ್ಯವಸ್ಥೆ ಮುಂದುವರೆಯಲಿದೆ ಎಂದು ಹೇಳಿದರು.