ಪಾವಗಡ (ತುಮಕೂರು): ವಿಶ್ವದ ಬೃಹತ್ ಸೌರ ಶಕ್ತಿ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹುಲ್ಲಿಗೆ ಬೆಂಕಿ ತಗುಲಿ ಒಂದು ಕಾರು, ಬೈಕ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸೌರ ಫಲಕಗಳು ಸುಟ್ಟು ಹೋದ ಘಟನೆ ನಡೆದಿದೆ.
ಪಾವಗಡ ತಾಲೂಕಿನ ತಿರುಮಣಿ ಸೋಲಾರ್ ಪಾರ್ಕ್ನ 37ನೇ ಬ್ಲಾಕ್ನಲ್ಲಿ ವಿದ್ಯುತ್ ಪೂರೈಕೆಯಾಗುವ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದರಿಂದ ಪಾರ್ಕ್ನಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿ ಎಲ್ಲೆಡೆ ಹರಡಿದೆ. ಪರಿಣಾಮ ಬ್ಲಾಕ್ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸೌರ ಫಲಕಗಳು, ಒಂದು ಕಾರು ಹಾಗೂ ದ್ವಿಚಕ್ರ ವಾಹನ ಸುಟ್ಟು ಕರಕಲಾಗಿವೆ.
ಓದಿ : ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್: ಕಾರು ಚಾಲಕನಿಗಾಗಿ ಶೋಧ
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇಂತಹ ಘಟನೆಗಳು ನಡೆದಾಗ ನಿಭಾಯಿಸಲು ಸ್ಥಳದಲ್ಲಿ ಯಾವುದೇ ವ್ಯವಸ್ಥೆಗಳು ಇರಲಿಲ್ಲ ಎನ್ನಲಾಗಿದ್ದು, ಪ್ರಾಣ ಹಾನಿಯಾದರೆ ಯಾರು ಹೊಣೆ ಎಂದು ಸೌರ ಪಾರ್ಕ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 13,500 ಎಕರೆ ಪ್ರದೇಶದಲ್ಲಿರುವ ಸೌರ ವಿದ್ಯುತ್ ಪಾರ್ಕ್ನಲ್ಲಿ ಒಂದೇ ಒಂದು ಆ್ಯಂಬುಲೆನ್ಸ್ ಆಗಲಿ, ಅಗ್ನಿಶಾಮಕ ವಾಹನವಾಗಲಿ ಇಲ್ಲ ಎನ್ನಲಾಗಿದೆ.