ತುಮಕೂರು: ಮಹಾರಾಷ್ಟ್ರ ಸರ್ಕಾರದಿಂದ ಹೊರ ಹೋಗಿರುವ ಶಾಸಕರು ಭಾರತೀಯ ಜನತಾ ಪಕ್ಷದ ವಿಚಾರಗಳಿಗೆ ಬದ್ಧರಾಗಿರುವ ಕಾರಣ ಅವರು ಅಪೇಕ್ಷೆ ಪಟ್ಟರೆ ಖಂಡಿತ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬರಲಿದೆ ಎಂದು ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಸೇನೆಯಿಂದ ಹೊರ ಹೋಗಿರುವ 42 ಮಂದಿ ಶಾಸಕರು ಖಂಡಿತ ಬಿಜೆಪಿಗೆ ಬೆಂಬಲವಾಗಿದ್ದಾರೆ. ಆದ್ದರಿಂದ ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬರಲಿದೆ. ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿ ನಾಯಕರು ನಡೆದುಕೊಂಡು, ಶಾಸಕರಿಗೆ ಮಾತನಾಡಲು ಸಿಗದಂತಹ ಸ್ಥಿತಿಯನ್ನು ಠಾಕ್ರೆ ನಿರ್ಮಾಣ ಮಾಡಿದ್ದರಿಂದ ಇಂತಹ ಪರಿಸ್ಥಿತಿ ಉದ್ಭವವಾಗಿದೆ ಎಂದರು.
ಇದನ್ನೂ ಓದಿ: ಕುಮಟಾ ಸಮುದ್ರದಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿಗಳು: ಇಬ್ಬರ ಮೃತದೇಹ ಪತ್ತೆ, ಇನ್ನಿಬ್ಬರಿಗೆ ಶೋಧ