ETV Bharat / state

ತುಮಕೂರು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸ್ವಯಂ ಪ್ರೇರಿತ ಲಾಕ್​ಡೌನ್​​​ - ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರು ಸೋಂಕಿತರ ಸಂಖ್ಯೆ ಸುದ್ದಿ

ಕಳೆದ 10 ದಿನಗಳಿಂದ ದಿಢೀರನೆ ಏರಿಕೆಯಾದ ಸೋಂಕಿತರ ಸಂಖ್ಯೆಯಿಂದ ಬೆಚ್ಚಿಬಿದ್ದಿರುವ ತಾಲೂಕಿನ ಜನರು ಸೋಂಕು ನಿಯಂತ್ರಿಸಲು ಸ್ವಯಂ ಪ್ರೇರಿತರಾಗಿ ಲಾಕ್​​ಡೌನ್​​​ ಮೊರೆ ಹೋಗಿದ್ದಾರೆ.

ಮೂರು ತಾಲೂಕುಗಳಲ್ಲಿ ಸ್ವಯಂ ಘೋಷಿತ ಲಾಕ್​ಡೌನ್​

author img

By

Published : Jul 17, 2020, 11:11 AM IST

ತುಮಕೂರು: ಜಿಲ್ಲೆಯ ವಿವಿಧೆಡೆ ಕೊರೊನಾ ಸೋಂಕು ನಿಧಾನಗತಿಯಲ್ಲಿ ಏರಿಕೆಯಾಗುತ್ತಿದ್ದು, ಮೂರು ತಾಲೂಕು ಕೇಂದ್ರಗಳಲ್ಲಿ ಜನರು ಸ್ವಯಂ ಪ್ರೇರಿತರಾಗಿ ಸ್ಥಳೀಯ ವ್ಯವಸ್ಥೆಗೆ ತಕ್ಕಂತೆ ಲಾಕ್​ಡೌನ್​ ಮೊರೆ ಹೋಗಿದ್ದಾರೆ.

ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಹಲವು ಮಾರ್ಗೋಪಾಯಗಳನ್ನು ಕೈಗೊಂಡಿದೆ. ಆದರೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ಕುಣಿಗಲ್, ತಿಪಟೂರು ಹಾಗೂ ಕೊರಟಗೆರೆ ತಾಲೂಕುಗಳಲ್ಲಿ ಜನರು ವ್ಯಾಪಾ ವಹಿವಾಟು ನಡೆಸುವುದನ್ನು ದಿನದ ಕೆಲವೇ ಗಂಟೆಗಳಿಗೆ ಸೀಮಿತಗೊಳಿಸಿದ್ದಾರೆ.

ಮೂರು ತಾಲೂಕುಗಳಲ್ಲಿ ಸ್ವಯಂ ಘೋಷಿತ ಲಾಕ್​ಡೌನ್​

ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 612ಕ್ಕೆ ಏರಿಕೆಯಾಗಿದೆ. ಹದಿನೆಂಟು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಅದರಲ್ಲೂ ಕೊರಟಗೆರೆಯಲ್ಲಿ 36, ಕುಣಿಗಲ್​​ನಲ್ಲಿ 29, ತಿಪಟೂರಿನಲ್ಲಿ 24 ಪ್ರಕರಣಗಳು ಪತ್ತೆಯಾಗಿವೆ. ಕಳೆದ 10 ದಿನಗಳಿಂದ ದಿಢೀರನೆ ಏರಿಕೆಯಾದ ಸೋಂಕಿತರ ಸಂಖ್ಯೆಯಿಂದ ಬೆಚ್ಚಿಬಿದ್ದಿರುವ ತಾಲೂಕಿನ ಜನರು ಸೋಂಕು ನಿಯಂತ್ರಿಸಲು ಸ್ವಯಂ ಪ್ರೇರಿತರಾಗಿ ಲಾಕ್​​ಡೌನ್​ ಮೊರೆ ಹೋಗಿದ್ದಾರೆ. ಸ್ಥಳೀಯ ವಿವಿಧ ಜನಪರ ಸಂಘಟನೆಗಳು, ವರ್ತಕರು ಸ್ವಯಂ ಪ್ರೇರಿತ ಲಾಕ್​​ಡೌನ್​​ಗೆ ಸಹಕಾರ ನೀಡುತ್ತಿದ್ದಾರೆ.

ತಿಪಟೂರು ಪಟ್ಟಣದಲ್ಲಿ ಚಿನ್ನ-ಬೆಳ್ಳಿ ಅಂಗಡಿ ಮಾಲೀಕರ ಸಂಘದಿಂದ ಸಂಜೆ 4 ಗಂಟೆವರೆಗೆ, ಹಾರ್ಡ್​ವೇರ್​ ಅಂಗಡಿ ಮಾಲೀಕರ ಸಂಘದಿಂದ ಮಧ್ಯಾಹ್ನ 2 ಗಂಟೆಯವರೆಗೆ, ಬಟ್ಟೆ ಅಂಗಡಿ ಮಾಲೀಕರ ಸಂಘದಿಂದ ಸಂಜೆ 5 ಗಂಟೆವರೆಗೆ ಮಾತ್ರ ವಹಿವಾಟು ನಡೆಯಲಿದೆ.

ಕೊರಟಗೆರೆ ಪಟ್ಟಣದಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವಹಿವಾಟು ನಡೆಸಲಾಗುತ್ತಿದೆ. ಕುಣಿಗಲ್ ತಾಲೂಕಿನಲ್ಲಿ ಸಹ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಂಕು ಹರಡುವಿಕೆ ನಿಯಂತ್ರಿಸಲು ಸ್ವಯಂ ಪ್ರೇರಿತರಾಗಿ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ.

ತುಮಕೂರು ತಾಲೂಕಿನಲ್ಲಿ ಅತಿ ಹೆಚ್ಚು 267 ಸೋಂಕಿತರ ಸಂಖ್ಯೆ ಇದ್ದು, ಇದುವರೆಗೂ ಸೋಂಕಿನಿಂದ 13 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ತುಮಕೂರು ತಾಲೂಕಿನಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಇರುವುದು ಆತಂಕ ಮೂಡಿಸಿದೆ. ಹೀಗಾಗಿ ಉಳಿದ ಮೂರು ತಾಲೂಕುಗಳಲ್ಲಿ ಆರಂಭವಾಗಿರುವ ಸ್ವಯಂ ಪ್ರೇರಿತ ಲಾಕ್​​ಡೌನ್​ ನಿಯಮವನ್ನು ತುಮಕೂರು ತಾಲೂಕಿನಲ್ಲಿಯೂ ಪಾಲಿಸಲು ಜನ ಹೇಗೆ ಸಹಕರಿಸಲಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಮಧುಗಿರಿಯಲ್ಲಿ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ಸಂಪೂರ್ಣ ಸಹಕಾರ ಇದೆ. ಆದರೆ 12ವರೆಗೆ ಬಂದ್​​ ಮಾಡಬೇಕೆಂದು ಕೆಲವರು ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಬೇಕರಿ ಮಾಲೀಕರು ಹಾಗೂ ಗಡಿನಾಡು ರಕ್ಷಣಾ ವೇದಿಕೆ ಪದಾಧಿಕಾರಿಗಳು ತಹಶೀಲ್ದಾರ್​​ಗೆ ಮನವಿ ಕೂಡ ಸಲ್ಲಿಸಿದ್ದಾರೆ.

ಬೇಕರಿ ಉದ್ಯಮ ಆಗಿರುವುದರಿಂದ 12 ಗಂಟೆಗೆ ಬಂದ್ ಮಾಡಿದರೆ ವ್ಯಾಪಾರಕ್ಕೆ ತೊಂದರೆಯಾಗುತ್ತದೆ. ಕೆಲವರು ಬಂದ್​​ ಮಾಡಲು ಒತ್ತಡ ಹೇರುತ್ತಿದ್ದು, ಇದನ್ನು ತಡೆಯಬೇಕೆಂದು ತಹಶೀಲ್ದಾರ್​​ಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.