ETV Bharat / state

ನ್ಯಾ. ಸದಾಶಿವ ಆಯೋಗದ ವರದಿ ತಕ್ಷಣದಲ್ಲಿಯೇ ಜಾರಿಗೊಳಿಸಬೇಕು ; ಕೆ ಎನ್​ ರಾಜಣ್ಣ - ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ಒಳಮೀಸಲಾತಿ ವರದಿ

ನ್ಯಾಯಯುತ ಬೇಡಿಕೆಗಳಿಗೆ ಯಾವುದೇ ಸರ್ಕಾರ ಶೀಘ್ರ ಸ್ಪಂದಿಸದಿದ್ರೆ, ಆ ಸಮುದಾಯಗಳಿಗೆ ಆಗುವ ಅನ್ಯಾಯ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಆಡಳಿತ ನಡೆಸುತ್ತಿದೆ..

Protest in Tumkur
Protest in Tumkur
author img

By

Published : Sep 21, 2020, 9:09 PM IST

ತುಮಕೂರು : ಪ್ರತಿಭಟನಾಕಾರರು ಯಾವುದೇ ರೀತಿಯ ಒಳಸಂಚಿಗೆ, ರಾಜಕೀಯ ಆಮಿಷಕ್ಕೆ ಒಳಗಾಗದೆ, ಹೆದರಿಕೊಳ್ಳದೆ ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ಹೆಚ್ಚಿಸಬೇಕು. ಜಿಲ್ಲಾಮಟ್ಟದಲ್ಲಿ ಮಾತ್ರವಲ್ಲದೇ, ತಾಲೂಕು ಮಟ್ಟದಲ್ಲಿಯೂ ನ್ಯಾ. ಎ ಜೆ ಸದಾಶಿವ ಆಯೋಗದ ವರದಿಗೆ ಪ್ರತಿಭಟನೆಯಾಗಬೇಕಿದೆ ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ಒತ್ತಾಯಿಸಿದರು.

ಅಹೋರಾತ್ರಿ ಪ್ರತಿಭಟನಾ ಧರಣಿ ಕೈಗೊಂಡ ಹಕ್ಕೊತ್ತಾಯ ಸಮಿತಿ

ಸಾಮಾಜಿಕ ನ್ಯಾಯದ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನಾ ಧರಣಿ ಸಮಾವೇಶವನ್ನು ನ್ಯಾ. ಎ.ಜೆ ಸದಾಶಿವ ಆಯೋಗ ಜಾರಿ ಹಕ್ಕೊತ್ತಾಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಳ್ಳಲಾಗಿತ್ತು. ಒಳಮೀಸಲಾತಿ ಜಾರಿ ಮಾಡುವ ಅಧಿಕಾರವು ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್​ನ ನ್ಯಾಯಪೀಠ ತೀರ್ಪು ನೀಡಿರುವುದರಿಂದ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ಒಳಮೀಸಲಾತಿ ವರದಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ ಎನ್ ರಾಜಣ್ಣ, ನ್ಯಾ. ಎ ಜೆ ಸದಾಶಿವ ಆಯೋಗದ ಶಿಫಾರಸನ್ನು ಜಾರಿ ಮಾಡಬೇಕೆಂದು ಸರ್ಕಾರಕ್ಕೆ ಹಲವು ಬಾರಿ ಪ್ರತಿಭಟನೆಯ ಮೂಲಕ ತಿಳಿಸುತ್ತಾ ಬರಲಾಗುತ್ತಿದೆ. ನ್ಯಾಯಯುತ ಬೇಡಿಕೆಗಳಿಗೆ ಯಾವುದೇ ಸರ್ಕಾರ ಶೀಘ್ರ ಸ್ಪಂದಿಸದಿದ್ರೆ, ಆ ಸಮುದಾಯಗಳಿಗೆ ಆಗುವ ಅನ್ಯಾಯ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಆಡಳಿತ ನಡೆಸುತ್ತಿದೆ. ನ್ಯಾ. ಎ ಜೆ ಸದಾಶಿವ ಆಯೋಗದ ವರದಿಯನ್ನು ತಕ್ಷಣದಲ್ಲಿಯೇ ಸುಗ್ರೀವಾಜ್ಞೆಯ ಮೂಲಕ ಶಿಫಾರಸನ್ನು ಜಾರಿ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ದಲಿತ ಸಮುದಾಯದ ಒಂದು ವರ್ಗ ಮಾತ್ರವಲ್ಲ, ಶೋಷಣೆಗೆ ಒಳಗಾದ ತಳ ಸಮುದಾಯದ ಎಲ್ಲಾ ವರ್ಗದವರು ಈ ಆಯೋಗಕ್ಕೆ ಬೆಂಬಲ ವ್ಯಕ್ತ ಪಡಿಸಬೇಕು. ಪ್ರತಿಭಟನಾಕಾರರು ಯಾವುದೇ ರೀತಿಯ ಒಳಸಂಚಿಗೆ, ರಾಜಕೀಯ ಚಿತಾವಣೆಗೆ ಒಳಗಾಗದೆ, ಹೆದರಿಕೊಳ್ಳದೆ ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ಹೆಚ್ಚಿಸಬೇಕು. ಅಷ್ಟೇ ಅಲ್ಲ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಪ್ರಮಾಣ ಏರಿಕೆ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.