ETV Bharat / state

ಸಹ ಶಿಕ್ಷಕನ ವರ್ಗಾವಣೆಗೆ ವಿರೋಧ: ಪರೀಕ್ಷೆ ತೊರೆದು ವಿದ್ಯಾರ್ಥಿಗಳ ಪ್ರತಿಭಟನೆ

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಶ್ರೀರಂಗಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಮಾರುತೀಶ್​ ಅವರ ವರ್ಗಾವಣೆ ಹಿಂಪಡೆಯುವಂತೆ ವಿದ್ಯಾರ್ಥಿಗಳು ಪ್ರಥಮ ಸೆಮಿಸ್ಟರ್​ನ ಪರೀಕ್ಷೆ ತೊರೆದು ಪ್ರತಿಭಟಿಸಿದರು.

ಸಹ ಶಿಕ್ಷಕ ಮಾರುತೀಶ್​ ವರ್ಗಾವಣೆ ಹಿಮ್ಮಡೆಯುವಂತೆ ವಿದ್ಯಾರ್ಥಿಗಳ ಪ್ರತಿಭಟಿಸಿದರು
author img

By

Published : Sep 26, 2019, 11:45 AM IST

ಪಾವಗಡ: ಸಹ ಶಿಕ್ಷಕ ಮಾರುತೀಶ್​ ಅವರ ವರ್ಗಾವಣೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ ವಿದ್ಯಾರ್ಥಿಗಳು ಪರೀಕ್ಷೆ ತೊರೆದು ಬೀದಿಗಿಳಿದು ಪ್ರತಿಭಟಿಸಿದ್ದಾರೆ.

ಸಹ ಶಿಕ್ಷಕ ಮಾರುತೀಶ್​ ವರ್ಗಾವಣೆ ಹಿಂಪಡೆಯುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ತಾಲೂಕಿನ ಶ್ರೀರಂಗಪುರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 90ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಥಮ ಸೆಮಿಸ್ಟರ್​ ಪರೀಕ್ಷೆ ತೊರೆದು ಬುಧವಾರ ಶಾಲೆಯ ಎದುರು ಪೋಷಕರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

ಒಂದು ವಾರದಿಂದ ಶಾಲೆಗೆ ಬರದ ಮಾರುತೀಶ್​ ಅವರ ವರ್ಗಾವಣೆ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ತರಗತಿಗಳನ್ನು ಬಿಟ್ಟು, ವರ್ಗಾವಣೆ ಆದೇಶ ತೆಗೆದುಹಾಕುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಶಿಕ್ಷಣಾಧಿಕಾರಿ​ ಆನಂದ್ ಭೇಟಿ ನೀಡಿ, ಮಕ್ಕಳ ಪೋಷಕರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಪೋಷಕರು ಸಹ ಶಿಕ್ಷಕ ಮಾರುತೀಶ್ ಶಾಲೆಗೆ ಬರುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Intro:Body:ತಮಕೂರು / ಪಾವಗಡ

ಶಾಲೆಯ ಸಹ ಶಿಕ್ಷಕ ವರ್ಗಾವಣೆಯಿಂದ ವಿದ್ಯಾರ್ಥಿಗಳು ಪ್ರಥಮ ಸೆಮಿಸ್ಟರ್ ಪರಿಕ್ಷೇ ತೆಜಿಸಿ ಶಾಲೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ತಾಲೂಕಿನ ಶ್ರೀರಂಗಪುರ ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 1 ರಿಂದ 8 ರವರಿಗೆ 96 ಜನ ವಿದ್ಯಾರ್ಥಿಗಳಿದ್ದು ,ಇಂದಿನಿಂದ ಮೋದಲ ಸೆಮಿಸ್ಟರ್ ಪರೀಕ್ಷೆ ಕೂಡ ಆರಂಭವಾಗಿರುತ್ತದೆ ,ಆದರೆ ಶಾಲೆಯ ಸಹ ಶಿಕ್ಷಕರಾದ ಮೂರುತೀಶ್‍ರನ್ನು ಕಳೆದಾ ಒಂದು ವಾರದ ಕಾಲ ಅಪ್ಪಾಜಿಯಲ್ಲಿನ ಶಾಲೆಗೆ ನೀಯೋಜಿಸಲಾಗಿತ್ತು , ವಾರ ಮುಗಿದರೂ ಶಿಕ್ಷಕ ಶಾಲೆಗೆ ಬರದಾ ಕಾರಣ ಶಾಲಾ ವಿದ್ಯಾರ್ಥಿಗಳ ಪೋಷಕರು ಮತ್ತು ವಿದ್ಯಾರ್ಥಿಗಳು ನಮ್ಮ ಶಿಕ್ಷಕರು ನಮ್ಮ ಶಾಲೆಯಲ್ಲೇ ಕರ್ತವ್ಯ ನಿರ್ವಹಿಸಬೇಕು ಎಂದು ಮೋದಲ ಸೆಮಿಸ್ಟರ್ ಪರೀಕ್ಷೆಯನ್ನು ತ್ಯಜಿಸಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಿರುತ್ತಾರೆ.

ಪ್ರತಿಭಟನಾ ಸ್ಥಳಕ್ಕೆ ಸಿಆರ್‍ಪಿ ಆನಂದ್ ಬೇಟಿ ನೀಡಿ ಮಕ್ಕಳ ಪೋಷಕರನ್ನು ಮನವೊಲಿಸುವ ಪ್ರಯತ್ನ ಮಾಡಿದರು ಪೋಷಕರು ಸಹ ಶಿಕ್ಷಕ ಮಾರುತೀಶ್ ಶಾಲೆಗೆ ಬರುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದಿರುತ್ತಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.