ETV Bharat / state

ತುಮಕೂರಲ್ಲೂ ಶಾಸಕರ ವಿರುದ್ಧ ಛೀ ಥೂ ಚಳುವಳಿ - kannada news

ಶಾಸಕರು ಕತ್ತೆಗಳ ರೀತಿಯಲ್ಲಿ ಹರಾಜಾಗುತ್ತಿರುವುದರಿಂದ ರಾಷ್ಟ್ರಮಟ್ಟದಲ್ಲಿ ರಾಜ್ಯದ ಮರ್ಯಾದೆ ಹಾಳಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಛೀ ಥೂ ಉಗಿಯುವ ಚಳುವಳಿ ನಡೆಯಿತು.

ಜನಪ್ರತಿನಿಧಿಗಳ ವಿರುದ್ಧ "ಉಗಿಯುವ ಚಳವಳಿ" ನಡೆಯಿತು
author img

By

Published : Jul 15, 2019, 7:33 PM IST

ತುಮಕೂರು: ಶಾಸಕರು ಕತ್ತೆಗಳ ರೀತಿಯಲ್ಲಿ ಹರಾಜಾಗುತ್ತಿರುವುದರಿಂದ ರಾಷ್ಟ್ರಮಟ್ಟದಲ್ಲಿ ರಾಜ್ಯದ ಮರ್ಯಾದೆ ಹಾಳಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಛೀ ಥೂ ಉಗಿಯುವ ಚಳುವಳಿ ನಡೆಯಿತು.

ನಗರದ ಟೌನ್ ಹಾಲ್ ವೃತ್ತದಲ್ಲಿ ಜಮಾಯಿಸಿದ ರೈತರು ರಾಜಕಾರಣಿಗಳ ಭಾವಚಿತ್ರಕ್ಕೆ ಉಗಿಯುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್ ಪಾಟೇಲ್ ಮಾತನಾಡಿ, ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ರೈತರು ಅನೇಕ ಸಮಸ್ಯೆಗಳಿಗೆ ತುತ್ತಾಗಿ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಮಳೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ರೆಸಾರ್ಟ್ ರಾಜಕಾರಣ ಮಾಡುತ್ತಾ ರಾಜಕೀಯ ಅಸ್ಥಿರತೆ ಉಂಟುಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಆದ್ದರಿಂದ ಜನಪ್ರತಿನಿಧಿಗಳ ವಿರುದ್ಧ ಛೀ ಥೂ ಎಂದು ಉಗಿಯುವ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜನಪ್ರತಿನಿಧಿಗಳ ವಿರುದ್ಧ ಛೀ ಥೂ ಉಗಿಯುವ ಚಳುವಳಿ

ಪ್ರತಿಭಟನೆಯಲ್ಲಿ ಅತೃಪ್ತ ಶಾಸಕರ ಭಾವಚಿತ್ರಗಳಿಗೆ ಉಗಿಯಲಾಯಿತು ಮತ್ತು ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಮೂರು ಪಕ್ಷದ ರಾಜಕಾರಣಿಗಳನ್ನು ಹರಾಜು ಮಾಡಿದ ಪ್ರಸಂಗ ನಡೆಯಿತು.

Intro:ತುಮಕೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ನಗರದ ಟೌನ್ ಹಾಲ್ ವೃತ್ತದಲ್ಲಿ ಕತ್ತೆ ರೀತಿಯಲ್ಲಿ ಶಾಸಕರು ಹರಾಜಾಗುತ್ತಿರುವುದರಿಂದ, ದೇಶದಲ್ಲಿ ಕರ್ನಾಟಕದ ಮರ್ಯಾದೆ ಹಾಳಾಗುತ್ತಿದೆ ಎಂದು ಆರೋಪಿಸಿ, ಈ ಕೆಟ್ಟ ರಾಜಕಾರಣಿಗಳ ಭಾವಚಿತ್ರಕ್ಕೆ ಛೀ, ಥೂ ಎಂದು ಉಗಿಯುವ ಮೂಲಕ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದರು.

Body:ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳು ಯಾವುದೇ ಶಿಸ್ತುಬದ್ಧವಾಗಿ ಆಡಳಿತ ನಡೆಸಿದೆ, ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವ ರೀತಿಯಲ್ಲಿ ವರ್ತಿಸುತ್ತಿವೆ.
ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಬಗ್ಗೆ ಗಮನಹರಿಸದೆ ರಾಜಕಾರಣಿಗಳು ರೆಸಾರ್ಟ್ ನಲ್ಲಿ ಮಜಾ ಮಾಡು ಮಾಡುತ್ತಾ, ರಾಜೀನಾಮೆ ಎಂಬ ಆಟವಾಡುತ್ತಿದ್ದಾರೆ ಎಂದು ಆರೋಪಿಸಿ ವಿನೂತನ ಚಳುವಳಿಯನ್ನು ನಡೆಸಿದರು.
ಇದೇ ವೇಳೆ ಮಾತನಾಡಿದ ಆನಂದ್ ಪಾಟೇಲ್, ರಾಜ್ಯದಲ್ಲಿ ಬರಗಾಲ ಉಂಟಾಗಿ ರೈತರು ಅನೇಕ ಸಮಸ್ಯೆಗಳಿಗೆ ತುತ್ತಾಗಿ, ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ, ಮುಂಗಾರಿನ ಮಳೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ಎನಿಸಿಕೊಂಡ ಮೂರು ಪಕ್ಷದ ಕೆಲ ರಾಜಕಾರಣಿಗಳು ರೆಸಾರ್ಟ್ ರಾಜಕಾರಣ ಮಾಡುತ್ತಿರುವವರಿಗೆ ಛೀ, ಥೂ ಎಂದು ಉರಲಗಿಯುವಂತಹ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ. ರಾಜಕೀಯ ಅಸ್ಥಿರತೆಯನ್ನು ಉಂಟುಮಾಡಿ, ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಾಟೇಲ್ ಹುಲಿಕಟ್ಟೆ ಆಕ್ರೋಶ ವ್ಯಕ್ತಪಡಿಸಿದರು.
ಬೈಟ್: ಆನಂದ್ ಪಾಟೇಲ್ ಹುಲಿಕಟ್ಟೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ.

Conclusion:ಇದೇ ವೇಳೆ ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಮೂರು ಪಕ್ಷದ ರಾಜಕಾರಣಿಗಳನ್ನು ಹರಾಜು ಮಾಡಲಾಯಿತು.

ವರದಿ
ಸುಧಾಕರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.