ETV Bharat / state

ಮಾವಿನ ಮರದಲ್ಲಿ ಮಾವೇ ಬೆಳೆಯುತ್ತೆ.. ಪ್ರಧಾನಿ ಮೋದಿ ಗೌಡರಿಗೆ ಸಾಟಿಯಲ್ಲ: ಸಿ.ಎಂ ಇಬ್ರಾಹಿಂ - undefined

ಶಿವಕುಮಾರ ಸ್ವಾಮೀಜಿ ಅವರ ನೆಲದಿಂದ ದೇವೇಗೌಡರನ್ನು ಚುನಾಯಿಸಿ ಕಳುಹಿಸಬೇಕು. ದೇವೇಗೌಡರಿಗೆ ದೇವರು ಶಕ್ತಿ ಕೊಡಲಿ ಮಾವಿನ ಮರದಲ್ಲಿ ಮಾವು ಬೆಳೆಯುತ್ತದೆ. ಅದರಂತೆ ಪ್ರಜ್ವಲ್ ರೇವಣ್ಣಗೆ ದೇವೇಗೌಡರ ಶಕ್ತಿ ಬರುವುದಿಲ್ಲವೇ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಮಾರ್ಮಿಕವಾಗಿ ನುಡಿದರು.

ಸಿ.ಎಂ ಇಬ್ರಾಹಿಂ
author img

By

Published : Apr 11, 2019, 12:56 PM IST

ತುಮಕೂರು : ಪ್ರಧಾನಿ ಮೋದಿ ಅವರು ಹೆಚ್ ಡಿ ದೇವೇಗೌಡರಿಗೆ ಸರಿ ಸಮಾನರಲ್ಲ ಎಂದು ಮಾಜಿ ಕೇಂದ್ರ ಸಚಿವ ಸಿ ಎಂ ಇಬ್ರಾಹಿಂ ತಿಳಿಸಿದರು.

ಸಿ.ಎಂ ಇಬ್ರಾಹಿಂ

ಜಿಲ್ಲೆ ತಿಪಟೂರಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಜಂಟಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಅವರ ನೆಲದಿಂದ ದೇವೇಗೌಡರನ್ನು ಚುನಾಯಿಸಿ ಕಳುಹಿಸಬೇಕು ಎಂದರು. ಬಿಜೆಪಿ ಅಭ್ಯರ್ಥಿ ಮುಖ್ಯವಲ್ಲ ಮೋದಿ ಮುಖ ನೋಡಿ ಮತ ಹಾಕಿ ಎಂಬುದಕ್ಕೆ , ಹುಡುಗಿ ಕೊಡಬೇಕು ಎಂದರೆ ಹುಡುಗನನ್ನು ನೋಡಬೇಡಿ, ಬದಲಾಗಿ ಹುಡುಗನ ಅಪ್ಪನನ್ನು ನೋಡಿ ಎನ್ನುವಂತಾಗಿದೆ ಎಂದು ಲೇವಡಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಅನುಕಂಪ ಇದೆ. ಬಿಜೆಪಿ ಅವರನ್ನು ಬಳಸಿಕೊಂಡು ಬಿಸಾಡಿದೆ. ಚುನಾವಣೆಯಲ್ಲಿ ಬಿಎಸ್​ವೈ ಶೋರೂಂ ಪೀಸ್ ಆಗಿರುತ್ತಾರೆ. ಆದರೆ, ಚುನಾವಣೆ ಮುಗಿದ ಮೇಲೆ ಅನಂತ್ ಕುಮಾರ್ ಮುಂದೆ.. ಯಡ್ಡಿ ಹಿಂದೆ... ಇರುತ್ತಾರೆ ಎಂದು ಟೀಕಿಸಿದರು. ಈಶ್ವರಪ್ಪನಿಗೆ ಹಿಂದುಳಿದ ವರ್ಗದ ಕುರುಬ ಸಮಾಜದ ವ್ಯಕ್ತಿಯೊಬ್ಬರಿಗೆ ಬಿಜೆಪಿಯಲ್ಲಿ ಟಿಕೆಟ್ ಕೊಡಿಸಲು ಆಗಲಿಲ್ಲ ಎಂದು ಛೇಡಿಸಿದರು.

70 ವರ್ಷದ ಇತಿಹಾಸದಲ್ಲಿ ಇಂತಹ ಚುನಾವಣೆ ನಡೆದಿಲ್ಲ. ಸಂವಿಧಾನ ಒಂದು ರೀತಿ ಬೈಬಲ್ ಇದ್ದಂತೆ. ಸಮಾನತೆ ನೀಡಿದೆ ಮೀಸಲಾತಿ ನೀಡಿದೆ. ಅದು ಅಂಬೇಡ್ಕರ್ ನೀಡಿದ್ದು ಎಂದು ಹೇಳಿದರು. ಮಾಜಿ ಪ್ರಧಾನಿ ದೇವೇಗೌಡರು ಒಂದು ಜಾತಿ ರಾಜಕಾರಣ ಮಾಡಿದ್ದಿದ್ದರೆ ತುಮಕೂರು ಜಿಲ್ಲೆಯಲ್ಲಿ ಬಹುತೇಕ ಹಿಂದುಳಿದ ವರ್ಗದ ನಾಯಕರು ಬೆಳೆಯುತ್ತಿರಲಿಲ್ಲ ಎಂದರು.

ರಾಜಕೀಯದಲ್ಲಿ ಬಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಸದ್ಯ ನಾನು ಸಿದ್ದರಾಮಯ್ಯ ಕಂಪನಿಯಲ್ಲಿ ಇದ್ದೇನೆ. ಹಳೆಯ ಭೂಕೈಲಾಸ ಸಿನಿಮಾವನ್ನು ಹೊಸ ಪ್ರಿಂಟ್ ಹಾಕಿಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಭಾಷಣ ಒಂದು ರೀತಿ ಬಜಾರಿನಲ್ಲಿ ಕರ್ಚೀಫ್ ಮಾರಾಟ ಮಾರುವವರ ರೀತಿ ಇದೆ. ದಿವಂಗತ ಮಾಜಿ ಸಚಿವ ಅನಂತ್ ಕುಮಾರ್ ಅಡ್ವಾಣಿಯವರ ಶಿಷ್ಯ ಎಂಬ ಕಾರಣಕ್ಕೆ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ. ಇನ್ನೊಂದೆಡೆ ಬೆಂಬಲಿಸುತ್ತೇವೆ ಎನ್ನುತ್ತಿದೆ ಬಿಜೆಪಿ. ದೇವೇಗೌಡರಿಗೆ ದೇವರು ಶಕ್ತಿ ಕೊಡಲಿ. ಮಾವಿನ ಮರದಲ್ಲಿ ಮಾವು ಬೆಳೆಯುತ್ತದೆ ಅದರಂತೆ ಪ್ರಜ್ವಲ್ ರೇವಣ್ಣಗೆ ದೇವೇಗೌಡರ ಶಕ್ತಿ ಬರುವುದಿಲ್ಲವೇ ಎಂದರು.

ಮೋದಿಗೆ ಹಿಂದೂ ಮುಂದೂ ಯಾರೂ ಇಲ್ಲ . ಕೇವಲ ಸಾಬ್ರ ಹೆಂಗಸರ ಬಗ್ಗೆ ಚಿಂತೆ ಇದೆ. ಪ್ರತಿ ಬಾರಿ ತ್ರಿವಳಿ ತಲಾಖ್ ಬಗ್ಗೆ ವಿಚಾರ ಪ್ರಸ್ತಾಪಿಸುತ್ತಾರೆ ಎಂದರು.

Intro:ಪ್ರಧಾನ ಮೋದಿ ದೇವೇಗೌಡರಿಗೆ ಸರಿ ಸಮಾನರಲ್ಲ ....
ಮಾಜಿ ಕೇಂದ್ರ ಸಚಿವ ಸಿ ಎಂ ಇಬ್ರಾಹಿಂ ಹೇಳಿಕೆ...

ತುಮಕೂರು
ಪ್ರಧಾನಿ ಮೋದಿ ಅವರು ಹೆಚ್ ಡಿ ದೇವೇಗೌಡರಿಗೆ ಸರಿ ಸಮಾನರಲ್ಲ ಎಂದು ಮಾಜಿ ಕೇಂದ್ರ ಸಚಿವ ಸಿ ಎಂ ಇಬ್ರಾಹಿಂ ತಿಳಿಸಿದರು.

ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಜಂಟಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಅವರು, ಶಿವಕುಮಾರ ಸ್ವಾಮೀಜಿ ಅವರ ನೆಲದಿಂದ ದೇವೇಗೌಡರನ್ನು ಚುನಾಯಿಸಿ ಕಳುಹಿಸಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಮುಖ್ಯವಲ್ಲ ಮೋದಿ ಮುಖ ನೋಡಿ ಮತ ಹಾಕಿ ಎಂಬುದಕ್ಕೆ , ಹುಡುಗಿ ಕೊಡಬೇಕು ಎಂದರೆ ಹುಡುಗನನ್ನು ನೋಡಬೇಡಿ ಬದಲಾಗಿ ಹುಡುಗಿ ಅಮ್ಮನನ್ನು ನೋಡಿ ಎನ್ನುವಂತಾಗಿದೆ ಎಂದು ಲೇವಡಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಅನುಕಂಪ ಇದೆ ಬಿಜೆಪಿ ಅವರನ್ನು ಬಳಸಿಕೊಂಡು ಬಿಸಾಡಿದೆ. ಚುನಾವಣೆಯಲ್ಲಿ ಬಿಎಸ್ವೈ ಶೋರೂಮ್ ಪೀಸ್ ಆಗಿರುತ್ತಾರೆ ಆದರೆ ಚುನಾವಣೆ ಮುಗಿದ ಮೇಲೆ ಅನಂತ್ ಕುಮಾರ್ ಮುಂದೆ... ಯಡ್ಡಿ ಹಿಂದೆ... ಇರುತ್ತಾರೆ ಎಂದು ಟೀಕಿಸಿದರು.

ಈಶ್ವರಪ್ಪನಿಗೆ ಹಿಂದುಳಿದ ವರ್ಗದ ಕುರುಬ ಸಮಾಜದ ವ್ಯಕ್ತಿಯೊಬ್ಬರಿಗೆ ಬಿಜೆಪಿಯಲ್ಲಿ ಟಿಕೆಟ್ ಕೊಡಿಸಲು ಆಗಲಿಲ್ಲ ಎಂದು ಛೇಡಿಸಿದರು.

70 ವರ್ಷದ ಇತಿಹಾಸದಲ್ಲಿ ಇಂತಹ ಚುನಾವಣೆ ನಡೆದಿಲ್ಲ. ಸಂವಿಧಾನ ಒಂದು ರೀತಿ ಬೈಬಲ್ ಇದ್ದಂತೆ ಸಮಾನತೆ ನೀಡಿದೆ ಮೀಸಲಾತಿ ನೀಡಿದೆ ಅದು ಅಂಬೇಡ್ಕರ್ ನೀಡಿದ್ದು ಎಂದು ಹೇಳಿದರು. ಮಾಜಿ ಪ್ರಧಾನಿ ದೇವೇಗೌಡರು ಒಂದು ಜಾತಿ ರಾಜಕಾರಣ ಮಾಡಿದ್ದಿದ್ದರೆ ತುಮಕೂರು ಜಿಲ್ಲೆಯಲ್ಲಿ ಬಹುತೇಕ ಹಿಂದುಳಿದ ವರ್ಗದ ನಾಯಕರು ಬೆಳೆಯುತ್ತಿರಲಿಲ್ಲ ಎಂದರು.

ರಾಜಕೀಯದಲ್ಲಿ ಬಿನ್ನಾಭಿಪ್ರಾಯ ಇದ್ದೇ ಇರುತ್ತದೆ ಸದ್ಯ ನಾನು ಸಿದ್ದರಾಮಯ್ಯ ಕಂಪನಿಯಲ್ಲಿ ಇದ್ದೇನೆ. ಹಳೆಯ ಭೂಕೈಲಾಸ ಸಿನಿಮಾವನ್ನು ಹೊಸ ಪ್ರಿಂಟ್ ಹಾಕಿಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದರು

ಪ್ರಧಾನಿ ಮೋದಿ ಭಾಷಣ ಒಂದು ರೀತಿ ಬಜಾರಿನಲ್ಲಿ ಕರ್ಚಿಎಫ್ ಮಾರಾಟ ಮಾರುವವರ ರೀತಿ ಇದೆ. ದಿವಂಗತ ಮಾಜಿ ಸಚಿವ ಅನಂತ್ ಕುಮಾರ್ ಅಡ್ವಾಣಿಯವರ ಶಿಷ್ಯ ಎಂಬ ಕಾರಣಕ್ಕೆ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ ಇನ್ನೊಂದೆಡೆ ಬೆಂಬಲಿಸುತ್ತೇವೆ ಎನ್ನುತ್ತಿದೆ ಬಿಜೆಪಿ. ದೇವೇಗೌಡರಿಗೆ ದೇವರು ಶಕ್ತಿ ಕೊಡಲಿ ಮಾವಿನ ಮರದಲ್ಲಿ ಮಾವ ಬೆಳೆಯುತ್ತದೆ ಅದರಂತೆ ಪ್ರಜ್ವಲ್ ರೇವಣ್ಣಗೆ ದೇವೇಗೌಡರ ಶಕ್ತಿ ಬರುವುದಿಲ್ಲವೇ ಎಂದರು.

ಮೋದಿಗೆ ಹಿಂದೂ ಮುಂದೂ ಯಾರು ಇಲ್ಲ . ಕೇವಲ ಸಾಬ್ರೆ ಹೆಂಗಸರ ಬಗ್ಗೆ ಚಿಂತೆ ಇದೆ. ಪ್ರತಿ ಬಾರಿ ತ್ರಿವಳಿ ತಲಾಕ್ ಬಗ್ಗೆ ವಿಚಾರ ಪ್ರಸ್ತಾಪಿಸುತ್ತಾರೆ ಎಂದರು.

Body:ತುಮಕೂರು

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.