ತುಮಕೂರು : ರಾಜಕೀಯ ಪಕ್ಷದ ನಾಯಕರೊಬ್ಬರು ಮದ್ಯದ ಅಮಲಿನಲ್ಲಿ ತುರುವೇಕೆರೆ ಆಸ್ಪತ್ರೆ ಆವರಣದಲ್ಲಿ ಪುಂಡಾಟಿಕೆ ನಡೆಸಿರೋ ವಿಡಿಯೋ ಭಾರಿ ವೈರಲ್ ಆಗಿದೆ.
ಆಸ್ಪತ್ರೆ ಆವರಣಕ್ಕೆ ನುಗ್ಗಿದ ಅವರು, ಜಿಲ್ಲೆಯ ಜನಪ್ರತಿನಿಧಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸ್ ಬ್ಯಾರಿಕೇಡ್‌ನ ಒದ್ದು ಉರುಳಿಸಿದ್ದಾರೆ. ಅಲ್ಲದೇ ಸಮೀಪದಲ್ಲೇ ಇದ್ದ ಜನರಿಗೆ ಮಾಸ್ಕ್ ಕಿತ್ತೆಸೆಯುವಂತೆ ಪ್ರೇರೇಪಿಸಿದ್ದಾರೆ.
ಶರ್ಟ್ ಬಿಚ್ಚಿ, ಬನಿಯನ್ ಮತ್ತು ಪ್ಯಾಂಟ್ ಧರಿಸಿಕೊಂಡು ಆಸ್ಪತ್ರೆ ತುಂಬೆಲ್ಲಾ ಅರಚಾಡಿದ್ದಾರೆ. ಈ ವೇಳೆ, ಕೆಲವರು ಬಂದು ಸಮಾಧಾನ ಪಡಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.
ಈ ವೇಳೆ ಆಸ್ಪತ್ರೆ ಆವರಣದಲ್ಲಿಯೇ ಇದ್ದ ಪೊಲೀಸ್ ಪೇದೆಗಳಿಬ್ಬರೂ ಅಸಹಾಯಕರಾಗಿ ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದರು. ನಂತರ ವ್ಯಕ್ತಿಯೊಬ್ಬರು ಶರ್ಟ್ವೊಂದನ್ನು ತಂದು ಅವರಿಗೆ ತೊಡಿಸಿ, ಸಮಾಧಾನ ಮಾಡಿ ಆಸ್ಪತ್ರೆ ಆವರಣದಿಂದ ಕರೆದುಕೊಂಡು ಹೋಗಿದ್ದಾರೆ.
ಓದಿ: ಕೊರೊನಾ ಕಹಿ ನಡುವೆ ಸಿಹಿ ಸುದ್ದಿ: ಸಿಲಿಂಡರ್ ದರದಲ್ಲಿ 122 ರೂ. ಇಳಿಕೆ