ETV Bharat / state

ಸಾಮಾಜಿಕ ಅರಣ್ಯದಲ್ಲಿ ನಿಧಿ ಶೋಧ: ತುಮಕೂರಲ್ಲಿ 10 ಮಂದಿ ಬಂಧನ - ತುಮಕೂರು ಅಪರಾಧ ಸುದ್ದಿ

ಪೂಜಾ ಸಾಮಗ್ರಿಗಳನ್ನು ಬಳಸಿ, ನಿಧಿ ಶೋಧಕ್ಕೆ ಮುಂದಾಗಿದ್ದ ಆರೋಪಿಗಳನ್ನು ತುಮಕೂರಿನ ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ.

police arrested 10 people treasure hunters
ನಿಧಿ ಶೋಧಕ್ಕೆ ಯತ್ನಿಸಿದ್ದವರ ಬಂಧನ
author img

By

Published : Dec 20, 2020, 10:40 PM IST

ತುಮಕೂರು: ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ನಿಧಿ ಶೋಧ ಮಾಡಲು ಪೂಜಾ ಸಾಮಗ್ರಿಗಳೊಂದಿಗೆ ಗುಂಡಿ ತೆಗೆಯಲು ಪ್ರಯತ್ನಿಸುತ್ತಿದ್ದ 10 ಮಂದಿ ಆರೋಪಿಗಳನ್ನು ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ.

ಶಿರಾ ತಾಲೂಕಿನ ಗಾಣದಹುಣಸೆ ಸರ್ವೆ ನಂಬರ್ 25ರ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಪೂಜಾ ಸಾಮಗ್ರಿಗಳನ್ನು ಬಳಸಿ ನಿಧಿ ಶೋಧಿಸಲು ಪ್ರಯತ್ನಿಸಲಾಗಿದೆ ಎಂದು ರಾಜಸ್ವ ನಿರೀಕ್ಷಕ ಶ್ರೀನಿವಾಸ್ ಅವರು ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಓದಿ: ಮಂಡ್ಯ ಚಿನ್ನ ದೋಖಾ ಪ್ರಕರಣ: ಮೂವರು ಆರೋಪಿಗಳು ಅಂದರ್​

ಆರೋಪಿಗಳಾದ ವಿಜಯ್ ಕುಮಾರ, ಪರಶುರಾಮ, ಗಿರಿಯಪ್ಪ, ಮಂಜುನಾಥ, ಸಂತೋಷಕುಮಾರ, ಕುಮಾರನಾಯಕ, ನಾಗಪ್ಪ, ದೇವದಾಸ, ಶ್ರೀನಿವಾಸ, ಓಬಳೇಶ ರೆಡ್ಡಿ ಎಂಬುವವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಕೃತ್ಯಕ್ಕೆ ಬಳಸಿದಂತಹ ಮಾರುತಿ ಸ್ವಿಫ್ಟ್ ಕಾರು, ಎರಡು ಬೈಕ್​​, ಸ್ಫೋಟಕ ವಸ್ತುಗಳು ಮತ್ತು ಪೂಜಾ ಸಾಮಗ್ರಿಗಳನ್ನು ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.