ತುಮಕೂರು: ರೌಡಿಶೀಟರ್ ಟೆಂಪಲ್ ರಾಜನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ರೌಡಿಶೀಟರ್ ಮೋಹನ್ ಕೊಲೆ ಆರೋಪದ ಮೇಲೆ ಟೆಂಪಲ್ ರಾಜನನ್ನು ಪೊಲೀಸರು ಬಂಧಿಸಲು ಹೋಗಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ತುಮಕೂರಿನ ವಡ್ಡರಹಳ್ಳಿ ಸಮೀಪ ಟೆಂಪಲ್ ರಾಜನ ಕಾಲಿಗೆ ಕ್ಯಾತಸಂದ್ರ ಇನ್ಸ್ಪೆಕ್ಟರ್ ಶ್ರೀಧರ್ ಗುಂಡು ಹಾರಿಸಿದ್ದಾರೆ.
ಬೆಳಗುಂಬ ಬಸ್ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಮೋಹನ್ ಅಲಿಯಾಸ್ ಮನು ಎಂಬಾತನನ್ನು ಕಲ್ಲು ಎತ್ತು ಹಾಕಿ ಕೊಲೆ ಮಾಡಲಾಗಿತ್ತು. ಈ ವಿಚಾರವಾಗಿ ಟೆಂಪಲ್ ರಾಜನನ್ನು ಬಂಧಿಸಲು ಹೋದಾಗ ಈ ಘಟನೆ ನಡೆದಿದೆ. ಇನ್ನು ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.