ETV Bharat / state

ಫಸಲಿಗೆ ಬಂದಿದ್ದ ಅಡಿಕೆ, ತೆಂಗಿನ ಮರ ಕಡಿದು ಹಾಕಿದ ಗ್ರಾಮ ಲೆಕ್ಕಿಗ: ತಹಶೀಲ್ದಾರ್​​​​ ವಿರುದ್ಧ ಸ್ಥಳೀಯರ ಆಕ್ರೋಶ - ತುಮಕೂರಿನಲ್ಲಿ ತೋಟ ನಾಶ

ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಎಂಬುವವರಿಗೆ ಉಡುಸಲಮ್ಮ ದೇವಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನು ನೀಡಲಾಗಿತ್ತು. ಕಳೆದ 30 ವರ್ಷಗಳಿಂದ ಈ ಜಾಗದಲ್ಲಿ ತೆಂಗು, ಅಡಿಕೆ, ಬಾಳೆ ಬೆಳೆದುಕೊಂಡು‌ ಬರಲಾಗುತ್ತಿದೆ. ಈ ನಡುವೆ ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗೋದಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ತಹಶೀಲ್ದಾರ್ ಮಮತಾ, ದೇಗುಲದ ಜಾಗದಲ್ಲಿದ್ದ ಅಡಿಕೆ, ತೆಂಗಿನ ಮರಗಳನ್ನು ಕಡಿದು ಹಾಕಲು ಆದೇಶ ನೀಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

plantation Destroyed in Tumkur
ಅಡಿಕೆ, ತೆಂಗಿನ ಮರ ಕಡಿದು ಹಾಕಿದ ಗ್ರಾಮ ಲೆಕ್ಕಿಗ
author img

By

Published : Mar 9, 2020, 11:15 AM IST

ತುಮಕೂರು: ಸುಮಾರು 20 ವರ್ಷಗಳಿಂದ ಬೆಳೆದು ನಿಂತಿದ್ದ ಅಡಿಕೆ, ತೆಂಗಿನ ಮರಗಳನ್ನು ಕಡಿದು ಹಾಕಲು ತಹಶೀಲ್ದಾರ್ ಆದೇಶಿಸಿದ್ದಾರೆ ಎಂದು ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮಸ್ಥರು ಆರೋಪಿಸಿದ್ದಾರೆ.

ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಎಂಬುವವರಿಗೆ ಉಡುಸಲಮ್ಮ ದೇವಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನು ನೀಡಲಾಗಿತ್ತು. ಕಳೆದ 30 ವರ್ಷಗಳಿಂದ ಈ ಜಾಗದಲ್ಲಿ ತೆಂಗು, ಅಡಿಕೆ, ಬಾಳೆ ಬೆಳೆದುಕೊಂಡು‌ ಬರಲಾಗುತ್ತಿದೆ. ಈ ನಡುವೆ ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗೋದಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ತಹಶೀಲ್ದಾರ್ ಮಮತಾ, ದೇಗುಲದ ಜಾಗದಲ್ಲಿದ್ದ ಅಡಿಕೆ, ತೆಂಗಿನ ಮರಗಳನ್ನು ಕಡಿದು ಹಾಕಲು ಆದೇಶ ನೀಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಅಡಿಕೆ, ತೆಂಗಿನ ಮರ ಕಡಿದು ಹಾಕಿದ ಗ್ರಾಮ ಲೆಕ್ಕಿಗ

ತಹಶೀಲ್ದಾರ್​ ಆದೇಶದಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಿ ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ 150 ಅಡಿಕೆ, 20 ತೆಂಗು ಮತ್ತು ಬಾಳೆ ಗಿಡಗಳನ್ನು ಕಡಿದು ಹಾಕಿದ್ದಾರೆ ಎನ್ನಲಾಗಿದೆ. ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ಕುಟುಂಬ ಉಡುಸಲಮ್ಮ ದೇವಸ್ಥಾನದ ಅರ್ಚಕರಾಗಿದ್ದಾರೆ. ಹಾಗಾಗಿ ಈ ಕುಟುಂಬಕ್ಕೆ ದೇವಸ್ಥಾನದಿಂದಲೇ ಕೊಡುಗೆಯಾಗಿ ಜಮೀನು ಕೊಡಲಾಗಿದೆ. ಜಮೀನು ಹಂಚಿಕೆ ವಿಚಾರದಲ್ಲಿ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮರ ಮಧ್ಯೆಯೇ ವಿವಾದ ಉಂಟಾಗಿತ್ತು ಎನ್ನಲಾಗಿದೆ. ಈ ನಡುವೆ ಮರಗಳನ್ನು ಕಡಿದು ಹಾಕಲಾಗಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.