ETV Bharat / state

ಧಾರವಾಡದಿಂದ ಅಪ್ಪು ಸಮಾಧಿವರೆಗೆ ಮಹಿಳಾ ಅಭಿಮಾನಿಯಿಂದ ಪಾದಯಾತ್ರೆ - ದಾಕ್ಷಾಯಿಣಿ ಪಾಟೀಲ್ ಪಾದಯಾತ್ರೆ

ಮೂವರು ಮಕ್ಕಳ ತಾಯಿಯಾಗಿರುವ ಧಾರವಾಡದ ದಾಕ್ಷಾಯಿಣಿ ಅವರು ಪುನೀತ್​ ಸಮಾಧಿವರೆಗೂ ಪಾದಯಾತ್ರೆ ಮಾಡುತ್ತಿದ್ದಾರೆ.

ಧಾರವಾಡದಿಂದ ಅಪ್ಪು ಸಮಾಧಿಯವರೆಗೆ ಲೇಡಿ ಫ್ಯಾನ್​​ನಿಂದ ಪಾದಯಾತ್ರೆ

author img

By

Published : Oct 28, 2022, 9:49 PM IST

ತುಮಕೂರು: ನಾಳೆ ಪುನೀತ್ ರಾಜ್​​ಕುಮಾರ್ ಅವರ ಪ್ರಥಮ ಪುಣ್ಯಸ್ಮರಣೆಯಿದ್ದು ಧಾರವಾಡದಿಂದ ಬೆಂಗಳೂರಿಗೆ ಮಹಿಳೆಯೊಬ್ಬರು ಪಾದಯಾತ್ರೆ ಮಾಡುತ್ತಿದ್ದಾರೆ. ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಪ್ಪು ಸಮಾಧಿಗೆ ತುಮಕೂರು ಮೂಲಕ ಧಾರವಾಡದ ಮನಗುಂಡಿಯ ದಾಕ್ಷಾಯಿಣಿ ಪಾಟೀಲ್ ನಡೆದುಕೊಂಡೇ ಸಾಗಿ ಬರುತ್ತಿದ್ದಾರೆ.

ಧಾರವಾಡದಿಂದ ಅಪ್ಪು ಸಮಾಧಿಯವರೆಗೆ ಲೇಡಿ ಫ್ಯಾನ್​​ನಿಂದ ಪಾದಯಾತ್ರೆ

ಕಳೆದ ವರ್ಷವೂ ಪಾದಯಾತ್ರೆಯ ಮೂಲಕ ತೆರಳಿ ಅಪ್ಪು ಸಮಾಧಿಗೆ ದಾಕ್ಷಾಯಿಣಿ ನಮನ ಸಲ್ಲಿಸಿದ್ದರು. ತಮ್ಮ ಮೂರು ತಿಂಗಳ ಮಗುವಿನೊಂದಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಆ ಸಂದರ್ಭದಲ್ಲಿ ಸತತ ಮೂರು ವರ್ಷ ಪಾದಯಾತ್ರೆ ಮಾಡುವುದಾಗಿ ಹೇಳಿದ್ದ ದಾಕ್ಷಾಯಿಣಿ, ತಮ್ಮ ಮಾತಿನಂತೆಯೇ ಈ ವರ್ಷ ಮತ್ತೆ ಪಾದಯಾತ್ರೆ ಮಾಡುತ್ತಿದ್ದಾರೆ.

ತುಮಕೂರು ತಲುಪುತ್ತಿದ್ದಂತೆ ದಾಕ್ಷಾಯಿಣಿ ಅವರನ್ನು ಅಪ್ಪು ಅಭಿಮಾನಿಗಳು ಬರಮಾಡಿಕೊಂಡರು. ಬಳಿಕ ತುಮಕೂರಿನ ಬೆಳಗುಂಬ ರಸ್ತೆಯಲ್ಲಿರುವ ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಮಾರ್ಗ ಮಧ್ಯೆ ನೆಲಮಂಗಲದಲ್ಲಿ ಗಂಧದಗುಡಿ ಚಿತ್ರ ವೀಕ್ಷಿಸುವ ಆಸೆಯನ್ನು ಅವರು ಹೊಂದಿದ್ದಾರೆ.

ಇದನ್ನೂ ಓದಿ: 'ಬಿರಿಯಾನಿ ಅಂದ್ರೆ ಪುನೀತ್‌ ಅವ್ರಿಗೆ ಪಂಚಪ್ರಾಣ..': ನವಯುಗ ಹೋಟೆಲ್ ಮಾಲೀಕ​ ಮೋಹನ್ ರಾವ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.