ತುಮಕೂರು: ಜಿಲ್ಲೆಗೆ ನಿಗದಿಯಂತೆ ಹೇಮಾವತಿ ನದಿ ನೀರನ್ನು ಹರಿಸಿಲ್ಲ. ಹೇಮಾವತಿ ನಾಲೆ ಆರಂಭವಾದಾಗಿನಿಂದಲೂ ಕೂಡ ಜಿಲ್ಲೆಯಲ್ಲಿ ಯಾವುದೇ ಕೆರೆಗಳು ತುಂಬಿಲ್ಲ ಎಂದು ಸಂಸದ ಜಿ.ಎಸ್.ಬಸವರಾಜ್ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಜಲಾಶಯದಿಂದ ಸಮುದ್ರಕ್ಕೆ ಬೇಕಾದರೆ ನೀರು ಬಿಡುತ್ತಾರೆ. ಆದರೆ, ತುಮಕೂರಿಗೆ ಬಿಡಬೇಕಾಗಿರುವಂತಹ 23 ಟಿಎಂಸಿ ನೀರನ್ನು ಏಕೆ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವೇಗೌಡರ ಕುಟುಂಬ ಮೊದಲಿನಿಂದಲೂ ನೀರಾವರಿ ವಿಷಯದಲ್ಲಿ ವಿರುದ್ಧವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ. ಅಲ್ಲದೆ ಆ ಸೇಡು ಇನ್ನೂ ಹೋಗಿಲ್ಲ ಎಂದು ಹೇಳಿದರು. ನೀರಾವರಿ ವಿಷಯದಲ್ಲಿ ದೇವೇಗೌಡರ ಕುಟುಂಬದವರು ತೆಗೆದುಕೊಂಡಂತಹ ನಿಲುವಿಗೆ ಜಿಲ್ಲೆಯ ರೈತರು ಅವರನ್ನು ಸೋಲಿಸಿದ್ದಾರೆ.
ಇನ್ನು ಮುಂದಾದರೂ ಬುದ್ಧಿ ಕಲಿಯಬೇಕು. ದೇವೇಗೌಡರು ಅವರ ಮಗ, ಸಚಿವ ರೇವಣ್ಣನಿಗೆ ಬುದ್ಧಿ ಹೇಳಬೇಕು ಎಂದು ಸಲಹೆ ನೀಡಿದರು.