ETV Bharat / state

ತುಮಕೂರು: 2ನೇ ಬಾರಿಗೆ ಜಿ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸಜ್ಜಾಯ್ತು ವೇದಿಕೆ - ತುಮಕೂರು ಜಿಲ್ಲಾ ಪಂಚಾಯತ್​​ ಅಧ್ಯಕ್ಷೆ

ಜನವರಿ 18ರಂದು ಜಿಲ್ಲಾ ಪಂಚಾಯತ್​​ ಅಧ್ಯಕ್ಷೆ ಲತಾ ರವಿಕುಮಾರ್​​ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತಿದೆ. ವಿಪರ್ಯಾಸವೆಂದರೆ ಬಿಜೆಪಿ ಬೆಂಬಲದಿಂದಲೇ ಜೆಡಿಸ್​​​ನ ಲತಾ ರವಿಕುಮಾರ್ ಅಧ್ಯಕ್ಷರಾಗಿದ್ದು, ಇದೀಗ ಬಿಜೆಪಿ ವತಿಯಿಂದಲೇ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತಿದೆ.

latha ravikumar
ತುಮಕೂರು ಜಿಲ್ಲಾ ಪಂಚಾಯತ್​​ ಅಧ್ಯಕ್ಷೆ ಲತಾ ರವಿಕುಮಾರ್
author img

By

Published : Jan 17, 2021, 10:31 AM IST

ತುಮಕೂರು: ಇಲ್ಲಿನ ಜಿಲ್ಲಾ ಪಂಚಾಯತ್​​ ಅಧ್ಯಕ್ಷೆ ಲತಾ ರವಿಕುಮಾರ್ ಅಧ್ಯಕ್ಷಗಾದಿಗೆ ಏರಿದಾಗಿನಿಂದಲೂ ಅವರ ವಿರುದ್ಧ ಎರಡನೇ ಬಾರಿಗೆ ಅವಿಶ್ವಾಸ ನಿರ್ಣಯ ಮಂಡಿಸಲು ವೇದಿಕೆ ಸಜ್ಜಾಗಿದೆ. ಇನ್ನೇನು ಅಧಿಕಾರಾವಧಿ ಪೂರ್ಣಗೊಳ್ಳಲು ಎರಡು ತಿಂಗಳು ಬಾಕಿ ಇರುವಾಗ ಮತ್ತೊಮ್ಮೆ ಬಿಜೆಪಿ ವತಿಯಿಂದ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತಿದೆ.

2ನೇ ಬಾರಿಗೆ ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಜ್ಜಾಯ್ತು ವೇದಿಕೆ

57 ಮಂದಿ ಜಿಲ್ಲಾ ಪಂಚಾಯತ್​​ ಸದಸ್ಯರ ಬಲದಲ್ಲಿ 23 ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ. 19 ಮಂದಿ ಬಿಜೆಪಿ ಸದಸ್ಯರಿದ್ದಾರೆ. ಉಳಿದಂತೆ 14 ಮಂದಿ ಜೆಡಿಎಸ್ ಸದಸ್ಯರು ಮತ್ತು ಓರ್ವ ಪಕ್ಷೇತರ ಸದಸ್ಯರಿದ್ದಾರೆ. 23 ಮಂದಿ ಕಾಂಗ್ರೆಸ್ ಸದಸ್ಯರಿಗೆ ಈಗಾಗಲೇ ಅವಿಶ್ವಾಸದ ವಿರುದ್ಧವಾಗಿ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿದೆ. 19 ಬಿಜೆಪಿ ಸದಸ್ಯರಿಗೆ ಪಕ್ಷವು ಅವಿಶ್ವಾಸದ ಪರವಾಗಿ ಮತ ಚಲಾಯಿಸುವಂತೆ ಸೂಚನೆ ನೀಡಿದೆ. ಈವರೆಗೂ ನಿರಂತರವಾಗಿ 4 ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿ ಕೋರಂ ಕೊರತೆಯಿಂದ ಸಭೆ ರದ್ದಾಗಿತ್ತು. ಅವಿಶ್ವಾಸ ನಿರ್ಣಯದಲ್ಲಿ ತಮಗೆ ಗೆಲುವು ಸಿಗಲಿದೆ ಎಂಬ ವಿಶ್ವಾಸ ಜಿಲ್ಲಾ ಪಂಚಾಯತ್​​ ಅಧ್ಯಕ್ಷೆ ಲತಾ ರವಿಕುಮಾರ್ ಅವರದ್ದಾಗಿದೆ.

ಈ ಸುದ್ದಿಯನ್ನೂ ಓದಿ: ಅಮಿತ್ ಶಾ ಗೆ ಸ್ವಾಗತ ಕೋರಲು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಿಜೆಪಿ ನಾಯಕರು

ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯದ ಪರವಾಗಿ ನಿಲ್ಲುವ ಸೂಚನೆಯನ್ನು ಬಿಜೆಪಿ ಪಕ್ಷವು ನೀಡಿದೆ. ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಿ ಪಕ್ಷದ ಹೈಕಮಾಂಡ್ ಪ್ರಾರಂಭದಲ್ಲಿ ಸೂಚನೆ ನೀಡಿತ್ತು. ಇದೀಗ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಪರವಾಗಿ ನಿಲ್ಲುವ ಸೂಚನೆಯನ್ನು ಪಕ್ಷ ನೀಡಿದೆ ಎನ್ನುತ್ತಾರೆ ಬಿಜೆಪಿ ಸದಸ್ಯ ಹುಚ್ಚಯ್ಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.