ETV Bharat / state

ಬೆಚ್ಚಿಬಿದ್ದ ತುಮಕೂರು ಜನತೆ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕೊಲೆಯ ಭೀಕರ ದೃಶ್ಯ - ತುಮಕೂರಿನಲ್ಲಿ ಸಿಸಿಟಿವಿಯಲ್ಲಿ ಕೊಲೆಯ ದೃಶ್ಯ ಸೆರೆ

ತುಮಕೂರು ನಗರದ ಶಿರಾ ಗೇಟ್ ಬಳಿಯ ನಾಗಣ್ಣನ ಪಾಳ್ಯದಲ್ಲಿ ನಡೆದ ಭೀಕರ ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯರು ಹಲ್ಲೆಗೊಳಗಾದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ತುಮಕೂರಿನಲ್ಲಿ ಕೊಲೆ
author img

By

Published : Nov 8, 2019, 10:14 AM IST

Updated : Nov 8, 2019, 12:14 PM IST

ತುಮಕೂರು: ನಗರದ ಶಿರಾ ಗೇಟ್ ಬಳಿಯ ನಾಗಣ್ಣನ ಪಾಳ್ಯದಲ್ಲಿ ನಡೆದ ಭೀಕರ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರದ ರಸ್ತೆಯಲ್ಲಿ ಮಹಂತೇಶ್ ಎಂಬುವವರನ್ನ ಅಟ್ಟಾಡಿಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಾಂತೇಶ್​ನನ್ನು ದುಷ್ಕರ್ಮಿಯೊಬ್ಬ ಅಟ್ಟಾಡಿಸಿ, ಡ್ರಾಗರ್​ನಿಂದ ಇರಿದು ಹಲ್ಲೆ ಮಾಡಿದ್ದಾನೆ. ಈ ವೇಳೆ ತೀವ್ರ ಗಾಯಗೊಂಡ ಮಹಾಂತೇಶ್​ ಓಡಿಬರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಬೆಚ್ಚಿಬಿದ್ದ ತುಮಕೂರು ಜನತೆ

ಮಹಂತೇಶ್​ನ ಹೊಟ್ಟೆಯ ಭಾಗಕ್ಕೆ ದುಷ್ಕರ್ಮಿ ಡ್ರಾಗರ್ ನಿಂದ ಇರಿದು ಹತ್ಯೆ ಮಾಡಲಾಗಿದ್ದು, ರಸ್ತೆ ತುಂಬೆಲ್ಲಾ ಮಹಾಂತೇಶ್ ಸಹಾಯಕ್ಕಾಗಿ ಗೋಗರಿಯುತ್ತಾ ನಡುರಸ್ತೆಯಲ್ಲಿ ಕುಸಿದು ಬೀಳುತ್ತಾನೆ. ಗಂಭೀರ ಗಾಯಗೊಂಡಿದ್ದ ಮಹಾಂತೇಶ್​ನನ್ನು ಸ್ಥಳೀಯರು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಮಹಾಂತೇಶ್​ ಮೃತಪಟ್ಟಿದ್ದಾನೆ.

ಒಟ್ಟಿನಲ್ಲಿ ಕೊಲೆಯ ಈ ಭೀಕರ ದೃಶ್ಯ ಕಂಡು ತುಮಕೂರಿಗರು ಭಯಭೀತಗೊಂಡಿದ್ದಾರೆ.

Intro:nullBody:ಕೊಲೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ......

ತುಮಕೂರು
ನಿನ್ನೆ ಸಂಜೆ ತುಮಕೂರು ನಗರದ ಶಿರಾಗೇಟ್ ಬಳಿಯ ನಾಗಣ್ಣನ ಪಾಳ್ಯದ ಬಳಿ ನಡೆದಿದ್ದ ಭೀಕರ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭಯಾನಕ ದೃಶ್ಯಾವಳಿಯಲ್ಲಿ ಕೊಲೆಗೀಡಾದ ಮಹಂತೇಶ್ ನ ಹೊಟ್ಟೆಯ ಭಾಗಕ್ಕೆ ದುಷ್ಕರ್ಮಿಗಳು ಡ್ರಾಗರ್ ನಿಂದ ಹಲ್ಲೆ ಮಾಡಿದ್ದು, ರಸ್ತೆ ತುಂಬೆಲ್ಲಾ ಮಹಾಂತೇಶ್ ಸಹಾಯಕ್ಕಾಗಿ ಓಡಾಡುತ್ತಿರುವುದು ಕಂಡುಬಂದಿದೆ. ರಕ್ತದ ಮಡುವಿನಲ್ಲಿಯೇ ಮಹಾಂತೇಶ್ ರಸ್ತೆಯಲ್ಲಿ ಅಲ್ಲಲ್ಲಿ ಕುಸಿದು ಬೀಳುವ ದೃಶ್ಯ ಹಾಗೂ ಮೇಲೆದ್ದು ಪುನಃ ಮನೆಯೊಂದರ ಗೇಟ್ ಬಳಿ ಬಿದ್ದಿರುವುದು ಕಂಡುಬಂದಿದೆ. ಇದೇ ವೇಳೆ ಮಹಾಂತೇಶ ನನ್ನು ದುಷ್ಕರ್ಮಿಯೊಬ್ಬ ಅಟ್ಟಿಸಿಕೊಂಡು ಬಂದಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಅಲ್ಲದೆ ಘಟನೆ ಸಂದರ್ಭದಲ್ಲಿ ರಸ್ತೆಯಲ್ಲಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಈ ಕೊಲೆಯ ದೃಶ್ಯ ವನ್ನು ಕಣ್ಣಾರೆ ಕಂಡು ಬೆಚ್ಚಿಬಿದ್ದಿರುವುದು ಕಂಡುಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಂತೇಶ್ ನನ್ನು ಸ್ಥಳೀಯರು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.Conclusion:null
Last Updated : Nov 8, 2019, 12:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.