ತುಮಕೂರು: ತನ್ನ ತಾಯಿಯ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ, ಆತನ ರಕ್ತವನ್ನು ದೇಗುಲದ ಬಳಿ ಸುರಿದಿರುವ ಘಟನೆ ಗುಬ್ಬಿ ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ನಡೆದಿದೆ. ರಾಜಣ್ಣ (55) ಕೊಲೆಯಾದ ವ್ಯಕ್ತಿ. ರಾಜಣ್ಣ ಕಳೆದ ಎರಡು ವರ್ಷಗಳ ಹಿಂದೆ ಪತ್ನಿಯೊಂದಿಗಿನ ಮನಸ್ತಾಪದಿಂದಾಗಿ, ಬೇರೆ ವಾಸಿಸುತ್ತಿದ್ದನಂತೆ.
ಭಾನುವಾರ ತಡರಾತ್ರಿ, ಆರೋಪಿ ರಾಜಣ್ಣ ಜತೆ ಮಹೇಶ್ ಎಂಬುವವರ ಮನೆಯಲ್ಲಿ ಕುಡಿಯುತ್ತಿದ್ದನಂತೆ. ಈ ವೇಳೆ ರಾಜಣ್ಣ, ಮಹೇಶ್ ತಾಯಿ ವಿಚಾರವಾಗಿ ಕೆಟ್ಟದ್ದಾಗಿ ಮಾತಾಡಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಮಹೇಶ್ ಹಾಗೂ ರಾಜಣ್ಣನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿ ಮಹೇಶ್ ಮಚ್ಚಿನಿಂದ ಕೊಚ್ಚಿ ರಾಜಣ್ಣನನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Live video: ಬೆಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆ ಕಟ್ಟಡ ಕುಸಿತ.. ಸ್ವಲ್ಪದರಲ್ಲೇ ತಪ್ಪಿದ ಅನಾಹುತ
ಸ್ಥಳಕ್ಕೆ ಭೇಟಿ ನೀಡಿರುವ ಗುಬ್ಬಿ ಠಾಣಾ ಸಬ್ ಇನ್ಸ್ಪೆಕ್ಟರ್ ನಟರಾಜ್, ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.