ETV Bharat / state

ರಸ್ತೆ ಕಾಮಗಾರಿಗೆ ಮನವಿ ಮಾಡಿದ್ದಕ್ಕೆ ಯುವಕನಿಗೆ ಪಟಾರ್​ ಎಂದು ಕೆನ್ನೆಗೆ ಬಾರಿಸಿದ ಶಾಸಕ - ಪಾವಗಡ ಶಾಸಕ ವೆಂಕಟರಮಣಪ್ಪರಿಂದ ಯುವಕನ ಮೇಲೆ ಹಲ್ಲೆ

ಶಾಸಕ ವೆಂಕಟರಮಣಪ್ಪ ಅವರು ಕಚೇರಿ ಆವರಣದಿಂದ ಕಾರಿನ ಬಳಿ ಬರುತ್ತಿದ್ದಂತೆ ಸಮೀಪ ತೆರಳಿದ ಯುವಕನೊಬ್ಬ ರಸ್ತೆ ಅಭಿವೃದ್ಧಿ ಕುರಿತಂತೆ ಮನವಿ ಮಾಡಿದ್ದಾನೆ. ಇದನ್ನು ಕೇಳಿದಾಕ್ಷಣ ಇದ್ದಕ್ಕಿದ್ದಂತೆ ಕಪಾಳಮೋಕ್ಷ ಮಾಡಿದ್ದಾರೆ..

ರಸ್ತೆ ಕಾಮಗಾರಿಗೆ ಮನವಿ ಮಾಡಿದ್ದಕ್ಕೆ ಯುವಕನ ಕೆನ್ನೆಗೆ ಭಾರಿಸಿದ ಶಾಸಕ  ಪಾವಗಡ ಶಾಸಕ ವೆಂಕಟರಮಣಪ್ಪ

author img

By

Published : Apr 20, 2022, 4:38 PM IST

Updated : Apr 20, 2022, 5:19 PM IST

ತುಮಕೂರು : ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಬೇಕೆಂದು ಯುವಕನೊಬ್ಬ ಮನವಿ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪಾವಗಡ ಶಾಸಕ ವೆಂಕಟರಮಣಪ್ಪ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಪಾವಗಡ ತಾಲೂಕು ಕಚೇರಿ ಆವರಣದಲ್ಲಿ ಈ ಘಟನೆ ನಡೆದಿದೆ.

ಶಾಸಕ ವೆಂಕಟರಮಣಪ್ಪ ಅವರು ಕಚೇರಿ ಆವರಣದಿಂದ ಕಾರಿನ ಬಳಿ ಬರುತ್ತಿದ್ದಂತೆ ಸಮೀಪ ತೆರಳಿದ ಯುವಕನೊಬ್ಬ ರಸ್ತೆ ಅಭಿವೃದ್ಧಿ ಕುರಿತಂತೆ ಮನವಿ ಮಾಡಿದ್ದಾನೆ. ಇದನ್ನು ಕೇಳಿದಾಕ್ಷಣ ಇದ್ದಕ್ಕಿದ್ದಂತೆ ಕಪಾಳಮೋಕ್ಷ ಮಾಡಿದ್ದಾರೆ.

ನಂತರ ಸ್ಥಳೀಯರು ಯುವಕನನ್ನು ಸಮಾಧಾನಪಡಿಸಿ ದೂರ ಕರೆದುಕೊಂಡು ಹೋಗಿದ್ದಾರೆ. ಅಲ್ಲದೆ ರಸ್ತೆ ಕಾಮಗಾರಿಗೆ ಈಗಾಗಲೇ ಟೆಂಡರ್​ ​ಆಗಿದೆ ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ ಎಂದು ಯುವಕನಿಗೆ ತಿಳಿಸಿದ್ದಾರೆ.

ರಸ್ತೆ ಕಾಮಗಾರಿಗೆ ಮನವಿ ಮಾಡಿದ್ದಕ್ಕೆ ಯುವಕನಿಗೆ ಪಟಾರ್​ ಎಂದು ಕೆನ್ನೆಗೆ ಬಾರಿಸಿದ ಶಾಸಕ

ಇದನ್ನೂ ಓದಿ: ಗಲಭೆಕೋರರ ವಿರುದ್ಧ ಯುಪಿ ಮಾದರಿ ಕ್ರಮಕ್ಕೆ ಚಿಂತನೆ: ಸಚಿವ ಆರಗ ಜ್ಞಾನೇಂದ್ರ

ಶಾಸಕ ವೆಂಕಟರಮಣಪ್ಪ ಅತ್ತ ಕಾರಿನಲ್ಲಿ ಸ್ಥಳದಿಂದ ತೆರಳುತ್ತಿದ್ದಂತೆ ಯುವಕ 'ದೊಡ್ಡವರು ಎಂದು ಸುಮ್ಮನಿದ್ದೇನೆ. ಇಲ್ಲದಿದ್ದರೆ ತಕ್ಕ ಶಾಸ್ತಿ ಮಾಡುತ್ತಿದ್ದೆ' ಎಂದು ನೋವು ಹೊರ ಹಾಕಿದ್ದಾನೆ.

Last Updated : Apr 20, 2022, 5:19 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.