ತುಮಕೂರು:ತೆಂಗು ಬೆಳೆಗೆ ಸಂಬಂಧಪಟ್ಟಂತೆ ಪೂರಕ ಸಂಶೋಧನೆಗಳು ಖಾಸಗಿಯಾಗಿ ನಡೆಯುತ್ತಿವೆ. ಆದರೆ, ಸರ್ಕಾರದ ನೇತೃತ್ವದಲ್ಲಿ ನಡೆಯುತ್ತಿಲ್ಲ ಹೀಗಾಗಿ 'ಕೊಕೊನಟ್ ಟೆಕ್ನಾಲಜಿಕಲ್ ಪಾರ್ಕ್' ಮಾಡಬೇಕಾದ ಅಗತ್ಯವಿದೆ ಎಂದು ತಿಪಟೂರು ಶಾಸಕ ನಾಗೇಶ್ ತಿಳಿಸಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿದ ಅವರು ಈಗಾಗಲೇ ಈ ರೀತಿಯಾದ ಒಂದು ಮಹತ್ವದ ಯೋಜನೆಗಾಗಿ ನೂರು ಎಕರೆ ಜಮೀನು ಅಗತ್ಯವಿದೆ. ಜಾಗದ ಸಮಸ್ಯೆ ಎದುರಾಗಿದೆ ಸರ್ಕಾರ ಕೂಡ ಈಗಾಗಲೇ ಹಣವನ್ನು ಬಿಡುಗಡೆ ಮಾಡಲು ಸಿದ್ಧವಿದೆ. ಈ ಯೋಜನೆಯನ್ನು ಸರ್ಕಾರ ಕೈಬಿಡಲು ನಾವು ಬಿಡುವುದಿಲ್ಲ. ಕಡಿಮೆ ಪ್ರದೇಶದಲ್ಲಿ ಎಂದರೂ ಸರಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಪಡುತ್ತೇವೆ ಎಂದರು.
ತೆಂಗು ಬೆಳೆಯಲ್ಲಿ ಬಹುತೇಕ ಎಲ್ಲ ಪದಾರ್ಥಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸಬಹುದಾಗಿದೆ. ಆದರೆ, ಇದಕ್ಕೆ ಸಂಬಂಧಪಟ್ಟಂತೆ ಸಂಶೋಧನೆಗಳು ಯಾವುದನ್ನು ಕೂಡ ಸರ್ಕಾರ ಗಮನ ಹರಿಸಿಲ್ಲ. ಕಳೆದ ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ತೆಂಗು ಬೆಳೆ ಅಭಿವೃದ್ಧಿ ಕುರಿತ ಯೋಜನೆ ಪ್ರಸ್ತಾಪವಾಗಿತ್ತು ಎಂದು ತಿಳಿಸಿದರು.
ಇದನ್ನೂ ಓದಿ:ಮೊಟೇರಾದಲ್ಲಿ 3ನೇ ಟೆಸ್ಟ್: ರಾಷ್ಟ್ರಪತಿಯಿಂದ ಲೋಕಾರ್ಪಣೆಗೊಳ್ಳಲಿದೆ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನ