ತುಮಕೂರು: ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರನ್ನು ಶಾಸಕ ಡಾ.ಸಿ.ಎಂ ರಾಜೇಶ್ ಗೌಡ ಭೇಟಿ ಮಾಡಿ ರೋಗಿಗಳ ಆರೋಗ್ಯ ವಿಚಾರಿಸಿದರು.
ಶಾಸಕರು ಸಂಪೂರ್ಣ ಪಿಪಿಇ ಕಿಟ್ ಧರಿಸಿ ಸೋಂಕಿತರ ಅಹವಾಲು ಸ್ವೀಕರಿಸಿದರು. ಈ ವೇಳೆ ವೈದ್ಯಕೀಯ ಸಿಬ್ಬಂದಿ ಮಾಸ್ಕ್ ಹಾಗೂ ಫೇಸ್‌ಶೀಲ್ಡ್ ಹಾಕಿದ್ದರು. ಸ್ವತಃ ವೈದ್ಯರಾಗಿರೋ ಶಾಸಕ ರಾಜೇಶ್ ಗೌಡ ಪಿಪಿಇ ಕಿಟ್ ಧರಿಸಿದ್ದು ವಿಶೇಷವಾಗಿತ್ತು.