ETV Bharat / state

ಬೊಮ್ಮಾಯಿ ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿಯಲ್ಲ : ಕಂದಾಯ ಸಚಿವ ಅಶೋಕ್​​ - ಈಟಿವಿ ಭಾರತ ಕನ್ನಡ

ಬೊಮ್ಮಾಯಿಯವರು ರೈತರ ವಿದ್ಯಾನಿಧಿ ಯೋಜನೆ, ನೀರಾವರಿ ಯೋಜನೆ ಮುಂತಾದ ಯೋಜನೆ ನೀಡಿದ್ದಾರೆ. ನೀರಾವರಿ ಯೋಜನೆ ಮೂಲಕ ಮನೆ ಮನೆಗೆ ನಲ್ಲಿ ನೀರು ಕೊಡಲಾಗುತ್ತಿದೆ. 50 ವರ್ಷ ಕಾಂಗ್ರೆಸ್​​ ಸರ್ಕಾರ ಆಳಿದರೂ, ಮನೆ ಮನೆಗೆ ಯಾಕೆ ಅವರ ಕೈಯಲ್ಲಿ ನೀರು ಕೊಡೋಕೆ ಆಗಿಲ್ಲ ಎಂದು ಕಂದಾಯ ಆರ್​ ಅಶೋಕ್​ ಪ್ರಶ್ನಿಸಿದ್ದಾರೆ.

minister-r-ashok-statement-on-cm-basavaraja-bommai
Eಬೊಮ್ಮಾಯಿ ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿಯಲ್ಲ : ಕಂದಾಯ ಸಚಿವ ಅಶೋಕ್​​tv Bharat
author img

By

Published : Dec 10, 2022, 6:18 PM IST

ಬೊಮ್ಮಾಯಿ ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿಯಲ್ಲ : ಕಂದಾಯ ಸಚಿವ ಅಶೋಕ್​​

ತುಮಕೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿ ಅಲ್ಲ. ಅನ್ನಭಾಗ್ಯದ ಅಕ್ಕಿಗೆ ಮೋದಿ ಅಕ್ಕಿ ಎಂದು ಹೆಸರಿಡುವ ಕೆಲಸಕ್ಕೆ ಬೊಮ್ಮಾಯಿಯವರು ಹೋಗಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿಯವರು ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ನೀರಾವರಿ ಯೋಜನೆ ಸೇರಿದಂತೆ ಮುಂತಾದ ಯೋಜನೆಗಳನ್ನು ನೀಡಿದ್ದಾರೆ. ನೀರಾವರಿ ಯೋಜನೆ ಮೂಲಕ ಮನೆ ಮನೆಗೆ ನಲ್ಲಿ ನೀರು ಕೊಡಲಾಗುತ್ತಿದೆ. 50 ವರ್ಷ ಕಾಂಗ್ರೆಸ್​​ ಸರ್ಕಾರ ಆಳಿದರೂ, ಮನೆ ಮನೆಗೆ ಯಾಕೆ ಅವರ ಕೈಯಲ್ಲಿ ನೀರು ಕೊಡೋಕೆ ಆಗಲಿಲ್ಲ ಎಂದು ಪ್ರಶ್ನಿಸಿದರು.

ಮುಂದಿನ ಬಜೆಟ್ ನಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡುತ್ತಾರೆ. ನಮ್ಮ ಸರ್ಕಾರ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಅಭಿವೃದ್ಧಿ ಬಗ್ಗೆ ಕಾಂಗ್ರೆಸ್​ಗೆ ಒಂದಿಷ್ಟು ಕಾಳಜಿ ಇಲ್ಲ. ಬರೀ ಟೀಕೆ ಮಾಡುವುದೊಂದೇ ಕೆಲಸ. ಟೀಕೆ ಮಾಡೋದನ್ನು ನ್ಯಾಯಯುತವಾಗಿ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್​​ಗೆ ಹೊಟ್ಟೆ ಉರಿ ಶುರುವಾಗಿದೆ : ಇನ್ನು ಸಿದ್ದರಾಮಯ್ಯ ಒಂದು ಕಡೆ, ಡಿ ಕೆ ಶಿವಕುಮಾರ್ ಒಂದು ಆಗಿದ್ದಾರೆ. ಇಬ್ಬರೂ ವಿರುದ್ಧವಾಗಿ ಟೀಕೆ ಮಾಡುತ್ತಾರೆ. ನಮ್ಮ ಸರ್ಕಾರ ಎಸ್​ಸಿ, ಎಸ್ ಟಿ ಮೀಸಲಾತಿ ನೀಡಿರುವುದು ಕಾಂಗ್ರೆಸ್‌ಗೆ ಬಹಳ ಸಮಸ್ಯೆ ಆಗಿದೆ. ಕೆಂಪೇಗೌಡ ಪ್ರತಿಮೆ ಆದ ಮೇಲೆ ಹೊಟ್ಟೆ ಉರಿ ಶುರುವಾಗಿದೆ. ಇನ್ನು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅನ್ನೋದು ಅವರಿಗೆ ಗೊತ್ತಾಗಿದೆ ಎಂದರು.

ಗುಜರಾತ್ ಎಲೆಕ್ಷನ್ ಆದಮೇಲೆ ಕರ್ನಾಟಕದಲ್ಲಿ ಗಂಟು ಮೂಟೆ ಕಟ್ಕೊಂಡು ಹೋಗೋ ಸ್ಥಿತಿಗೆ ಕಾಂಗ್ರೆಸ್ ಬಂದು ತಲುಪಿದೆ‌‌. ಟಿಪ್ಪುಭಾಗ್ಯ ಕೊಟ್ಟಿದ್ದಾರೆ, ಟಿಪ್ಪು ಜಂಯತಿ ಮಾಡಿದ್ದಾರೆ‌. ಟಿಪ್ಪು ಜಯಂತಿ ಆದಾಗ ಕೊಲೆಯಾಯ್ತು, ಇದು ಅವರ ಭಾಗ್ಯ ಎಂದು ಸಚಿವ ಅಶೋಕ್​ ಟೀಕಿಸಿದರು. ಪಿಎಫ್ಐ ಅಪರಾಧಿಗಳಿದ್ದರೂ ಮತ್ತೆ ಅವರನ್ನೆಲ್ಲಾ ಬೀದಿಗೆ ಬಿಟ್ಟರು. ಇವಾಗ ಕೇಂದ್ರ ಸರ್ಕಾರ ಪಿಎಫ್​ಐ ಬ್ಯಾನ್ ಮಾಡಿತು. ಆದರೆ ಕಾಂಗ್ರೆಸ್ ಸರ್ಕಾರ ಅವರಿಗೆಲ್ಲ ಲೈಸೆನ್ಸ್ ಕೊಟ್ಟಂಗೆ ಗಲಾಟೆ ಮಾಡಲಿ ಎಂದು ಬಿಡಿಸಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಎಲ್ಲರ ಪರವಾಗಿಲ್ಲ. ಅಲ್ಪಸಂಖ್ಯಾತರರನ್ನು ಕಂಡರೆ ಅದೇನು ಓಲೈಕೆ ಗೊತ್ತಿಲ್ಲ. ಟಿಪ್ಪು ಅಂದ್ರೆ ಸಿದ್ದರಾಮಯ್ಯ ಪ್ರಾಣ ಬಿಡ್ತಾರೆ. ಟಿಪ್ಪುಗಾಗಿ ಪ್ರಾಣ ಬಿಡೋ ಕಾಂಗ್ರೆಸ್ ನಮ್ಮ ರಾಜ್ಯಕ್ಕೆ ಬೇಕಾಗಿಲ್ಲ ಎಂದು ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ‌ ಎಂದರು.

ಕರ್ನಾಟಕದಲ್ಲಿ ಕರ್ನಾಟಕ ಮಾಡೆಲ್​ : ಗುಜರಾತ್ ಮಾಡೆಲ್ ಗುಜರಾತ್ ನಲ್ಲಿ, ಕರ್ನಾಟಕ ಮಾಡೆಲ್​ ಕರ್ನಾಟಕದಲ್ಲಿ. ಕೇಂದ್ರದ ತಂಡ ಕರ್ನಾಟಕಕ್ಕೆ ಬರುತ್ತದೆ. ಇದೇ ಡಿಸೆಂಬರ್ ನಲ್ಲಿ ಕೇಂದ್ರದ ನಾಯಕರೆಲ್ಲ ರಾಜ್ಯಕ್ಕೆ ಬರುತ್ತಾರೆ. ಪ್ರಧಾನಿ ಮೋದಿ ಪ್ರತಿ 15 ದಿನಕ್ಕೆ ಒಂದು ಬಾರಿ ಕರ್ನಾಟಕಕ್ಕೆ ಬರುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿ ತಿಂಗಳು ನಾಲ್ಕು ಬಾರಿ ರಾಜ್ಯಕ್ಕೆ ಬರುತ್ತಾರೆ ಎಂದು ಹೇಳಿದರು. ಮಾನದಂಡಗಳು ಏನಿದೆ, ಏನ್ ಮಾಡ್ಬೇಕು ಎಂಬ ಬಗ್ಗೆ ಮೋದಿ, ಅಮಿತ್ ಶಾ ತೀರ್ಮಾನ ಮಾಡುತ್ತಾರೆ. ಆ ಪ್ರಕಾರ ಚುನಾವಣೆ ಗೆಲ್ಲಲು ತಯಾರಿ ಮಾಡುತ್ತೇವೆ ಎಂದು ಹೇಳಿದರು.

ಈಶ್ವರಪ್ಪಗೆ ಟಿಕೆಟ್ ಕೈ ತಪ್ಪುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಪೊಲೀಸ್ ತನಿಖೆ ಆಗಿದೆ. ಬಿ ರಿಪೋರ್ಟ್ ಕೂಡಾ ಹಾಕಿದ್ದಾರೆ. ಕಾಂಗ್ರೆಸ್ ಮಾಡೋ ಅಪಾದನೆಗಳಿಗೆಲ್ಲ ಬೆಲೆ ಕೊಡುವಂತಹ ಅವಶ್ಯಕತೆ ಇಲ್ಲ ಎಂದರು.

ಜನಾರ್ದನ ರೆಡ್ಡಿ ಬಿಜೆಪಿ ಬಿಟ್ಟು ಹೋಗುವುದಿಲ್ಲ : ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುವ ವಿಚಾರವಾಗಿ ಮಾತನಾಡಿ, ಶ್ರೀರಾಮುಲು, ನಾನು, ಮುಖ್ಯಮಂತ್ರಿಗಳು ಎಲ್ಲರೂ ಸೇರಿ ಜನಾರ್ದನ ರೆಡ್ಡಿ ಜೊತೆ
ಮಾತನಾಡಿದ್ದೇವೆ. ಯಾವುದೇ ಕಾರಣಕ್ಕೂ ಹೊಸ ಪಕ್ಷ ಕಟ್ಟುವ ಪ್ರಶ್ನೆಯೇ ಇಲ್ಲ. ಅವೆಲ್ಲ ಶುದ್ಧ ಸುಳ್ಳು, ಹಿಂದೇನು ಬಿಜೆಪಿಗೆ ಬೆಂಬಲ ಮಾಡಿದ್ದಾರೆ. ಮುಂದೆಯೂ ಬಿಜೆಪಿಗೆ ಬೆಂಬಲ ನೀಡ್ತಾರೆ ಎಂದು ಸಚಿವ ಅಶೋಕ್​ ವಿಶ್ವಾಸ ವ್ಯಕ್ತಪಡಿಸಿದರು.

ಜನಸಂಕಲ್ಪ ಯಾತ್ರೆಗೆ ಯಡಿಯೂರಪ್ಪ ಗೈರು ವಿಚಾರವಾಗಿ ಮಾತನಾಡಿ, ಎಲ್ಲಾ ಕಡೆ ಯಡಿಯೂರಪ್ಪ ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಗುಜರಾತ್‌ಗೆ ಹೋಗಿದ್ದಾರೆ‌. ಗುಜರಾತ್ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಯಡಿಯೂರಪ್ಪ ಅವರಿಗೆ ಕೊಟ್ಟಿದ್ದಾರೆ. ಬಿಎಸ್​ವೈ ನೇತೃತ್ವದಲ್ಲೇ ನಾವು ಚುನಾವಣೆ ಮಾಡ್ತಿವಿ ಎಂದು ಹೇಳಿದರು.

ಇದನ್ನೂ ಓದಿ : ರೌಡಿಶೀಟರ್​ ಬೆತ್ತನಗೆರೆ ಶಂಕರನ ಸೇರ್ಪಡೆ ಮಾಡುವ ಮೂಲಕ ನಮ್ಮಿಂದ ತಪ್ಪಾಗಿದೆ: ಸಿದ್ದರಾಜು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.