ETV Bharat / state

ವಿಧಾನಪರಿಷತ್ ಚುನಾವಣೆಗೆ 20 ಮಂದಿ ಹೆಸರುಗಳನ್ನ ಹೈಕಮಾಂಡ್​ಗೆ ಶಿಫಾರಸು ಮಾಡಿದ್ದೆವು.. ಸಚಿವ ಮಾಧುಸ್ವಾಮಿ - ವಿಧಾನಪರಿಷತ್ ಚುನಾವಣೆ ಬಗ್ಗೆ ಮಾಧುಸ್ವಾಮಿ ಪ್ರತಿಕ್ರಿಯೆ

ರಾಜಕೀಯವಾಗಿ ಯಾವ ಸಮುದಾಯ ಹಿಂದುಳಿದಿದೆ ಅಂತಾ ಹೇಳೋದು ತುಂಬಾ ಕ್ಲಿಷ್ಟ. ಸಾಮಾಜಿಕವಾಗಿ ಹೇಳಬಹುದು. ಆರ್ಥಿಕವಾಗಿ ಹೇಳಬಹುದು. ರಾಜಕೀಯ ಪ್ರಾತಿನಿಧ್ಯ ಹಿನ್ನೆಲೆ ಹೇಳುವುದು ಕಷ್ಟ. ಸುಪ್ರೀಂಕೋರ್ಟ್​ನ ಮನವೊಲಿಸುತ್ತಿದ್ದೇವೆ. ಹೀಗಾಗಿ, ಬಿಬಿಎಂಪಿಗೆ ಚುನಾವಣೆ ನಡೆಸಲು ಎರಡು ತಿಂಗಳ ಕಾಲಾವಕಾಶ ನೀಡಿದೆ ಎಂದರು..

ಸಚಿವ ಮಾಧುಸ್ವಾಮಿ
ಸಚಿವ ಮಾಧುಸ್ವಾಮಿ
author img

By

Published : May 24, 2022, 5:12 PM IST

ತುಮಕೂರು : ವಿಧಾಪರಿಷತ್ ಚುನಾವಣೆಗೆ 20 ಮಂದಿಯ ಹೆಸರುಗಳನ್ನ ಹೈಕಮಾಂಡ್​ಗೆ ಶಿಫಾರಸು ಮಾಡಿದ್ದೆವು. ಯಾರನ್ನ ಯಾವ ಕಾರಣಕ್ಕೆ ಆಯ್ಕೆ ಮಾಡಬೇಕೆಂಬುದು ಹೈಕಮಾಂಡ್​ಗೆ ಬಿಟ್ಟಿದ್ದು. ಅಲ್ಲದೆ ಯಾರನ್ನ ಕೈಬಿಟ್ಟಿದ್ದು ಯಾಕೆ, ಯಾರನ್ನ ತೆಗೆದುಕೊಂಡರು ಅಂತಾ ದೊಡ್ಡ ಪಕ್ಷದಲ್ಲಿ ಉತ್ತರಿಸಲು ಆಗುತ್ತಾ?. ಅದನ್ನ ತೀರ್ಮಾನ ಮಾಡುವ ಶಕ್ತಿ ನೈಪುಣ್ಯತೆ ಮೇಲಿನವರಿಗೆ ಇದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಪರಿಷತ್ ಚುನಾವಣೆಗೆ ಟಿಕೆಟ್ ಹಂಚಿಕೆ ಕುರಿತಂತೆ ಸಚಿವ ಮಾಧುಸ್ವಾಮಿ ಅವರು ಮಾತನಾಡಿರುವುದು..

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಎಂ ದಾವೋಸ್​ನಲ್ಲಿ ಇದ್ದಾರೆ. ವಾಪಸ್ ಬಂದ ಬಳಿಕ ಎಂಎಲ್​ಸಿ ಚುನಾವಣೆ ಮುಗಿಯೋವರೆಗೂ ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ಇಲ್ಲ. ಪಕ್ಷದ ಕೆಲಸಕ್ಕೆ ಬಂದಿದ್ದೇನೆ. ನಾನೇನು ಉತ್ತರ ಹೇಳಲಿ. ಜಿಲ್ಲಾ ಉಸ್ತುವಾರಿ ಸಚಿವರು ಕೆಲಸ‌ ಮಾಡುತ್ತಿದ್ದಾರೆ. ಸಮಯ ತೆಗೆದುಕೊಂಡಿದ್ದಾರೆ. ಇವತ್ತು ನಾಳೆ ಬರಬಹುದು. ಈಗಿರುವ ಸಚಿವರು ಕೆಲಸ‌ ಮಾಡ್ತಿಲ್ಲ ಅಂತಾ ಹೇಳಲು ಆಗಲ್ಲ ಎಂದರು.

ಬಿಬಿಎಂಪಿ ಚುನಾವಣೆಗೆ ಎರಡು ತಿಂಗಳು ಕಾಲಾವಕಾಶವಿದೆ. ಜಿಪಂ, ತಾಪಂ ಕ್ಷೇತ್ರಗಳ ವರದಿ ಮರುವಿಂಗಡಣೆಯಾಗಿದೆ. ಡಿಸಿಗಳು ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತಾರೆ. ಕ್ಯಾಟಗರಿ ಕೂಡ ಫಿಕ್ಸ್ ಮಾಡ್ತಿವಿ. ಆದರೆ, ಒಬಿಸಿಗೆ ಮೀಸಲಾತಿ ನೀಡುವ ವಿಚಾರ ರಾಜಕೀಯವಾಗಿ ಗುರ್ತಿಸಬೇಕೆಂದು ಸುಪ್ರೀಂಕೋರ್ಟ್ ಹೇಳಿಕೆಯಾಗಿದೆ. ಒಬಿಸಿಗೆ ಇರುವ ರಾಜಕೀಯ ಪ್ರಾತಿನಿಧ್ಯ ಹಿನ್ನಡೆಯನ್ನ ಗುರುತಿಸುವಂತೆ ಹೇಳಿದೆ. ಫಣೀಂದ್ರ ಅವರು ಯಾವಾಗ ವರದಿ ನೀಡುತ್ತಾರೆ. ಸುಪ್ರೀಂಕೋರ್ಟ್ ಮುಂದೆ ಕಾಲಾವಕಾಶಬೇಕೆಂದು ಕೇಳಿದ್ದೇವೆ ಎಂದರು.

ರಾಜಕೀಯವಾಗಿ ಯಾವ ಸಮುದಾಯ ಹಿಂದುಳಿದಿದೆ ಅಂತಾ ಹೇಳೋದು ತುಂಬಾ ಕ್ಲಿಷ್ಟ. ಸಾಮಾಜಿಕವಾಗಿ ಹೇಳಬಹುದು. ಆರ್ಥಿಕವಾಗಿ ಹೇಳಬಹುದು. ರಾಜಕೀಯ ಪ್ರಾತಿನಿಧ್ಯ ಹಿನ್ನೆಲೆ ಹೇಳುವುದು ಕಷ್ಟ. ಸುಪ್ರೀಂಕೋರ್ಟ್​ನ ಮನವೊಲಿಸುತ್ತಿದ್ದೇವೆ. ಹೀಗಾಗಿ, ಬಿಬಿಎಂಪಿಗೆ ಚುನಾವಣೆ ನಡೆಸಲು ಎರಡು ತಿಂಗಳ ಕಾಲಾವಕಾಶ ನೀಡಿದೆ ಎಂದರು.

ಜಿಪಂ, ತಾಪಂಗೆ ಇನ್ನೂ ಮೂರ್ನಾಲ್ಕು ತಿಂಗಳು ಅವಕಾಶ ನೀಡಿದ್ರೆ ಬಗೆಹರಿಸಬಹುದು. ಬಿಬಿಎಂಪಿಯಲ್ಲಿ 248 ವಾರ್ಡ್ ಮಾಡಲಾಗಿದೆ. ಅವುಗಳಿಗೆ ಚುನಾವಣೆ ಮಾಡಲಾಗುತ್ತದೆ. ಮೊದಲ ನಿರ್ಧಾರ ಪ್ರಕಾರ 198ಕ್ಕೆ ಚುನಾವಣೆ ಮಾಡಬೇಕಿತ್ತು. ಆದರೆ, 111 ಹಳ್ಳಿಗಳನ್ನು ಬಿಬಿಎಂಪಿಗೆ ಸೇರಿಸಲಾಗಿದೆ ಎಂದು ಹೇಳಿದರು.

ಅವರಿಗೆ ಪಂಚಾಯತ್ ಚುನಾವಣೆಯಲ್ಲಿ ಕೈಬಿಡಲಾಗಿದೆ. ಆ ಕಡೆ ಅದು ಇಲ್ಲ, ಈ ಕಡೆ ಇದು ಇಲ್ಲ ಅನ್ನೊ ಪರಿಸ್ಥಿತಿ ಇರುವ ಕಾರಣ ಸಮಗ್ರವಾಗಿ ಚುನಾವಣೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಬಿಬಿಎಂಪಿ ಚುನಾವಣೆ ನಡೆಯುತ್ತೆ. ಬಳಿಕ ಜಿಪಂ ತಾಪಂ ಚುನಾವಣೆ ಮಾಡಲಾಗುತ್ತದೆ ಎಂದು ಹೇಳಿದರು.

ಓದಿ: ವಿಧಾನಪರಿಷತ್ ಚುನಾವಣೆ: ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿಗಳು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.