ETV Bharat / state

ಗೊಂಬೆಯನ್ನು ದೇವರೆಂದು ಹೇಳಿದ್ರೆ ತಪ್ಪೇನು?, ಗೊಂಬೆಯಲ್ಲಿ ದೈವತ್ವ ಇರಲ್ವಾ?: ಸಚಿವ ರಾಜಣ್ಣ - ಶ್ರೀರಾಮ

ಬೊಂಬೆ ಎಂಬ ಕಾರಣಕ್ಕೆ ತಿರಸ್ಕಾರ ಮನೋಭಾವದಿಂದ ಇವರು ಮಾತನಾಡ್ತಾರಲ್ಲಾ, ಅದು ಸರೀನಾ? ಎಂದು ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

ಸಹಕಾರಿ ಸಚಿವ ಕೆ ಎನ್‌ ರಾಜಣ್ಣ  Minister KN Rajanna  ರಾವಣನಂತ ದೈವ ಭಕ್ತ ಯಾರೂ ಇರಲಿಲ್ಲ  ಕಾಂಗ್ರೆಸ್ ಸನಿಹಕ್ಕೆ ಮುದ್ದಹನುಮೇಗೌಡ
ಗೊಂಬೆಯನ್ನು ದೇವರೆಂದು ಹೇಳಿದ್ರೆ ಏನು ತಪ್ಪು, ಗೊಂಬೆಯಲ್ಲಿ ದೈವತ್ವ ಇರೋದಿಲ್ವಾ: ಸಚಿವ ರಾಜಣ್ಣ ಹೇಳಿಕೆ
author img

By ETV Bharat Karnataka Team

Published : Jan 19, 2024, 2:15 PM IST

ತುಮಕೂರು: ''ಬೊಂಬೆಯನ್ನು ದೇವರು ಅಂತಾ ಹೇಳಿದ್ರೆ ಏನು ತಪ್ಪು?, ಬೊಂಬೆಯಲ್ಲಿ ದೈವತ್ವ ಇರೋದಿಲ್ವಾ?'' ಎಂದು ಸಚಿವ ಕೆ.ಎನ್‌.ರಾಜಣ್ಣ ಹೇಳಿದರು. ತುಮಕೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬೊಂಬೆ ಅನ್ನೋ ಕಾರಣಕ್ಕೆ ತಿರಸ್ಕಾರ ಮನೋಭಾವದಿಂದ ಮಾತನಾಡ್ತಾರಲ್ಲ ಅದು ಸರೀನಾ?. ಟೂರಿಂಗ್ ಟಾಕೀಸ್ ರೀತಿಯೇ ಅವತ್ತಿನ ಪರಿಸ್ಥಿತಿ ಇತ್ತು. ಅದಕ್ಕೆ ಹೇಳಿದ್ದೇನೆ ನಾನು. ಅದನ್ನು ಬಿಟ್ಟು ದೇವರನ್ನೇ ಟೂರಿಂಗ್ ಟಾಕೀಸ್ ಅಂದಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.

''ನಾನು ರೈತ. ಹೊಲಕ್ಕೆ ಹೋಗುವಾಗ ಸಗಣಿ ತೆಗೆದುಕೊಂಡು ಹೋಗಿ, ಸಗಣಿ ಮೂರ್ತಿ ಮಾಡಿ ಗರಿಕೆ ಹುಲ್ಲು ಇಟ್ಟು ಪೂಜೆ ಮಾಡ್ತಿದ್ದೆ. ಹೊಲದಲ್ಲಿ ಸಿಕ್ಕ ಬೆಣಚು ಕಲ್ಲಿಗೂ ಪೂಜೆ ಮಾಡ್ತಿದ್ವಿ. ಅದು ನಮ್ಮ ನಂಬಿಕೆ'' ಎಂದು ಹೇಳಿದ ಅವರು, ''ಬಾಬ್ರಿ ಮಸೀದಿ ಧ್ವಂಸ ಮಾಡಿದ್ದ ಸಮಯದಲ್ಲಿ ನಾನು ಅಲ್ಲಿಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ಕಂಡ ಚಿತ್ರಣದ ಬಗ್ಗೆ ಅವತ್ತು ಹೇಳಿಕೊಂಡಿದ್ದೆ ಅಷ್ಟೇ'' ಎಂದರು.

ರಾವಣನಂತಹ ದೈವಭಕ್ತ ಯಾರೂ ಇರಲಿಲ್ಲ: ''ಬಿಜೆಪಿಯವರು ನನಗೆ ರಾವಣ ಎಂದಿದ್ದಾರೆ. ಅದು ನನಗೆ ಬೇಜಾರಿಲ್ಲ. ರಾವಣ ಎಂದು ಅನಿಸಿಕೊಳ್ಳಲು ನಾನು ಸಿದ್ಧನಿದ್ದೇನೆ. ರಾವಣನಂತಹ ದೈವ ಭಕ್ತ ಯಾರೂ ಇರಲಿಲ್ಲ. ಇವರೆಲ್ಲ ಡೋಂಗಿ ದೈವ ಭಕ್ತರು'' ಎಂದು ಟೀಕಿಸಿದರು. ''ಹಿಂದೆ ಅಣ್ಣಾದೊರೈ ರಾಮಾಯಣಕ್ಕೆ ಬದಲಾಗಿ ರಾವಣನ ಕುರಿತಾಗಿ ನಾಟಕ ಆಡಿದ್ರು. ಈ ನಾಟಕದಲ್ಲಿ ರಾವಣ ಸೀತೆ ಮೇಲೆ ಬಲಾತ್ಕಾರ ಮಾಡೋದಿಲ್ಲ. ಇದು ರಾವಣನ ದೊಡ್ಡ ಗುಣ ಅಲ್ವೇ?'' ಎಂದ ಅವರು, ''ನಾನು ರಾಮ ಮತ್ತು ರಾವಣ ಇಬ್ಬರ ಪರ ಇದ್ದೇನೆ. ನನ್ನ ಹೇಳಿಕೆಯನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ. ನನ್ನ ಹೇಳಿಕೆಯಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ'' ಎಂದು ತಿಳಿಸಿದರು.

''ರಾವಣ ಶಿವನ ಪರಮಭಕ್ತ. ರಾವಣನಿಗೆ ಶಿವ ಆತ್ಮಲಿಂಗ ಕೊಟ್ಟಿರೋದು. ಕಾಂಗ್ರೆಸ್​ನವರು ಹಜ್ ಯಾತ್ರೆಗೆ ದುಡ್ಡು ಕೊಟ್ಟಂತೆ ಯಡಿಯೂರಪ್ಪನವರು ಕಾಶಿಗೆ ಹೋಗೋಕೆ ದುಡ್ಡು ಕೊಟ್ಟಿದ್ದರು. ಅದನ್ನು ಯಾರೂ ಬೇಡ ಎನ್ನಲಿಲ್ಲ. ಇದೇ ರೀತಿ ಇನ್ನೂ ಹಲವು ಸೂಕ್ಷ್ಮವಾದ ವಿಚಾರಗಳಿವೆ. ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ'' ಎಂದರು.

ಕಾಂಗ್ರೆಸ್ ಸನಿಹ ಬಂದಿದ್ದಾರೆ ಮುದ್ದಹನುಮೇಗೌಡರು: ''ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಲೋಕಸಭೆ ಟಿಕೆಟ್ ಸಂಬಂಧಪಟ್ಟಂತೆ ಅಭಿಪ್ರಾಯ ಸಂಗ್ರಹಿಸಲು ಆಗಮಿಸಿದ್ದಾರೆ. ಮುದ್ದಹನುಮೇಗೌಡರು ಕಾಂಗ್ರೆಸ್​ಗೆ ತುಂಬಾ ಸನಿಹಕ್ಕೆ ಬಂದಿದ್ದಾರೆ. ಅವರು ಯಾವುದೇ ಸಂದರ್ಭದಲ್ಲಿ ಬೇಕಾದರೂ ಪಕ್ಷಕ್ಕೆ ಸೇರ್ಪಡೆಯಾಗಬಹುದು.ಟಿಕೆಟ್ ಕೊಡುವ ವಿಚಾರದಲ್ಲಿ ನನ್ನ ಅಭಿಪ್ರಾಯ ಏನೂ ಇಲ್ಲ. ಅದು ಹೈಕಮಾಂಡ್​ಗೆ ಬಿಟ್ಟ ವಿಚಾರ'' ಎಂದು ಹೇಳಿದರು.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಕುಸುರಿ ಕೆಲಸದಲ್ಲಿ ರಾಯಚೂರಿನ ಯುವ ಶಿಲ್ಪಿ ವೀರೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.