ತುಮಕೂರು: ಗೋವಿನ ಶಾಪದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ, ಇದೀಗ ಅಲ್ಲೊಂದು-ಇಲ್ಲೊಂದು ಸ್ಥಾನ ಉಳಿಸಿಕೊಂಡಿದೆ ಕಾಂಗ್ರೆಸ್ ಅದನ್ನು ಕಳೆದುಕೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ತಿಪಟೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಗೋ ಹತ್ಯೆ ನಿಷೇಧ ಬಗ್ಗೆ ಚರ್ಚೆಯಾಗಿದೆ. ಆದಷ್ಟು ಬೇಗ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಬರಲಿದೆ ಎಂದರು.
ಸಿದ್ದರಾಮಯ್ಯನವರು ಯಾವ ಯಾವ ಸಂದರ್ಭದಲ್ಲಿ ಏನೇನು ಹೇಳಿಕೆ ಕೊಡಿತ್ತಾರೆಂದು ಅವರಿಗೇ ಗೊತ್ತಿರುವುದಿಲ್ಲ. ಗೋವನ್ನು ತಾಯಿಯೆಂದು ಕರೆಯುತ್ತೇವೆ. ಸಿದ್ದರಾಮಯ್ಯ ಅವರ ತಾಯಿಯನ್ನು ಕೂಡ ನಾವು ತಾಯಿ ಎಂದು ಕರೆಯುತ್ತೇವೆ. ಸಿದ್ದರಾಮಯ್ಯನವರ ತಾಯಿಗೆ ವಯಸ್ಸಾಗಿದೆ ಅಂತ ಬಿಜೆಪಿ ಹಾಗೂ ಆರ್ಎಸ್ಎಸ್ ನವರ ಮನೆ ಮುಂದೆ ಬಿಡಲಾಗುತ್ತದೆಯೇ. ಈ ರೀತಿ ಹೇಳಿಕೆ ನೀಡಿ ಸಿದ್ದರಾಮಯ್ಯ ನವರು ಮುಸ್ಲಲ್ಮಾರನ್ನು ಸಂತೃಪ್ತಿ ಪಡಿಸುತ್ತಿದ್ದಾರೆ ಎಂದರು.
ಈಗ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೋ ಹತ್ಯೆ ನಿಷೇಧ ಕಾನೂನು ರದ್ದು ಮಾಡುತ್ತೇವೆ. ಗೋವನ್ನು ಯಾರು ಬೇಕಾದರು ಕಡಿಯಲಿ ಅದಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿಕೊಂಡು ಪ್ರಚಾರ ಮಾಡಿ ವೋಟು ಪಡೆಯಲಿ ಎಂದು ಸವಾಲು ಹಾಕಿದರು.
ಸಿ.ಪಿ ಯೋಗೇಶ್ವರ್ ಸಂಪುಟ ಸೇರ್ಪಡೆ ವಿಚಾರದಲ್ಲಿ ಯಾರು ಹೇಳಿಕೆ ಕೊಡದಂತೆ ನಡ್ಡಾ ಆದೇಶವಿದೆ. ನಾವು ಅವರ ಆದೇಶ ಪಾಲಿಸುತ್ತೇವೆ. ಈ ಬಗ್ಗೆ ನಾನು ಮಾತನಾಡಲು ತಯಾರಿಲ್ಲ. ಕೇಂದ್ರ ನಾಯಕರು, ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷ ಸೇರಿ ಚರ್ಚೆ ನಡೆಸುತ್ತಾರೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೋ ಅವರನ್ನು ಸೇರಿಸಿಕೊಳ್ಳುತ್ತಾರೆ. ಬೆಳಗಾವಿಯಲ್ಲಿ ನಡೆಯುವ ಕಾರ್ಯಾಕಾರಿಣಿ ಸಭೆಯಲ್ಲಿ ಸಚಿವ ಸಂಪುಟದ ಬಗ್ಗೆ ಚರ್ಚೆಯಾಗಲ್ಲ. ಪಕ್ಷ ಸಂಘಟನೆ ಹಾಗೂ ಸರ್ಕಾರದ ಬಗ್ಗೆ ಚರ್ಚೆಯಾಗಲಿದೆ ಎಂದರು.
ಸಿದ್ದರಾಮಯ್ಯ ಕುರುಬರು ಆದರೆ ನಾನು ಹಿಂದುಳಿದವರು, ಅಲ್ಪ ಸಂಖ್ಯಾತರ ನಾಯಕರು ಎಂದು ಹೇಳಿಕೊಳ್ಳುತ್ತಾರೆ. ಅವರೆಲ್ಲರೂ ಜೊತೆಯಲ್ಲಿ ಇದ್ದಾರೆ ಎಂದರೆ ಅವರ್ಯಾಕೆ ಸೋಲುತ್ತಿದ್ದರು. ಸಿದ್ದರಾಮಯ್ಯನವರ ಆಚಾರಕ್ಕೂ ನಡವಳಿಕೆಗೂ ಯಾವುದೇ ಸಂಬಂಧವಿಲ್ಲ ಎಂದರು.