ತುಮಕೂರು: ಕುಪ್ಪೂರು ಗದ್ದಿಗೆ ಮಠಕ್ಕೆ 13 ವರ್ಷದ ಬಾಲಕ ತೇಜಸ್ ನನ್ನು ಅಧಿಕೃತವಾಗಿ ಮಠಕ್ಕೆ ಪೀಠಾಧಿಪತಿಯಾಗಿ ನೇಮಕ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದುಗಾರರೊಂದಿಗೆ ಮಾತನಾಡಿದ ಅವರು, ಮಠದ ಇತಿಹಾಸದಲ್ಲಿ ಅವರ ಉತ್ತರಾಧಿಕಾರಿಯಾಗುವವರೆ ಶ್ರೀ ಯತೀಶ್ವರಾನಂದ ಸ್ವಾಮೀಜಿ ಅವರ ಅಂತ್ಯಸಂಸ್ಕಾರ ಮಾಡಬೇಕಿದೆ. ಅಲ್ಲದೇ ಹಿಂದಿನ ಚಂದ್ರಶೇಖರ ಸ್ವಾಮೀಜಿ ಅವರು ತೇಜಸ್ ಉತ್ತರಾಧಿಕಾರಿ ಆಗಬೇಕೆಂದು ವಿಲ್ನಲ್ಲಿ ಬರೆದಿಟ್ಟಿದ್ದಾರೆ.
ಹೀಗಾಗಿ ತೇಜಸ್ ಅವರ ನೇತೃತ್ವದಲ್ಲಿಯೇ ಅಂತ್ಯಸಂಸ್ಕಾರವನ್ನು ನಡೆಸಲಾಗಿದೆ. ಆದರೆ ಅಧಿಕೃತವಾಗಿ ಮಠದ ಪೀಠಾಧಿಕಾರಿಯಾಗಿ ಅವರನ್ನು ಅಧಿಕೃತವಾಗಿ ನೇಮಿಸಿಲ್ಲ ಎಂದು ತಿಳಿಸಿದರು.
ತೇಜಸ್ ಇನ್ನೂ ಅಧ್ಯಯನ ಮಾಡಬೇಕಿದೆ. ಅಲ್ಲದೇ 18 ವರ್ಷ ಆಗೋವರೆಗೂ ಅವರನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ, ಕಾನೂನು ವ್ಯಾಪ್ತಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಅವರು 18 ವರ್ಷ ಆದ ನಂತರ ಅವರಿಚ್ಛೆಯಂತೆ ಅವರು ಪೀಠಾಧಿಕಾರಿ ಆಗಬಹುದಾಗಿದೆ. ಈ ಕುರಿತಂತೆ ನ್ಯಾಯಾಧೀಶರೊಬ್ಬರು ನನಗೆ ಸ್ಪಷ್ಟನೆಯನ್ನು ಕೂಡ ಕೇಳಿದ್ದಾರೆ ಎಂದು ಹೇಳಿದರು.
ಸಿಎಪಿ ಶಿವಾನಂದ ಸ್ವಾಮೀಜಿ ಅವರ ಅಂತ್ಯಸಂಸ್ಕಾರ ನೇತೃತ್ವವನ್ನು ವಹಿಸುವಂತಹ ವ್ಯಕ್ತಿ ಬೇಕಾಗಿತ್ತು ಹಾಗಾಗಿ ಅನಿವಾರ್ಯವೆಂಬಂತೆ ಅವರನ್ನು ಅಂತಿಮ ವಿಧಿವಿಧಾನ ನೇತೃತ್ವ ವಹಿಸಲು ಹೇಳಲಾಗಿತ್ತು. ಆದರೆ, ಈಗ ತೇಜಸ್ ಕುಪ್ಪೂರು ಗದ್ದಿಗೆ ಮಠದ ಪೀಠಾಧಿಪತಿ ಅಲ್ಲ ಎಂದು ಸ್ಪಷ್ಟಪಡಿಸಿದರು.