ETV Bharat / state

ತುಮಕೂರು: ಕೊರೊನಾದಿಂದ ಹೆಚ್ಚಾಗುತ್ತಿದೆ ವೈದ್ಯಕೀಯ ಉಪಕರಣಗಳ ಬೇಡಿಕೆ - ವೈದ್ಯಕೀಯ ಉಪಕರಣ ಸುದ್ದಿ

ಮಾರ್ಚ್ ತಿಂಗಳಿನಿಂದ ಜೂನ್ ವರೆಗೆ ಇಂತಹ ವೈದ್ಯಕೀಯ ಪರಿಕರಗಳಿಗೆ ಬೇಡಿಕೆಯೇ ಇರಲಿಲ್ಲ. ಮೊದಮೊದಲು ವೈದ್ಯರು ಕೂಡ ಕೊರೊನಾ ಸೋಂಕಿತ ಗುಣಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಪರೀಕ್ಷಿಸುತ್ತಿದ್ದರು, ನಂತರದ ದಿನಗಳಲ್ಲಿ ರೋಗಿಯ ಸಂಪರ್ಕದಲ್ಲಿ ಇದ್ದಂತಹ ವೈದ್ಯರು ಕೂಡ ಕ್ವಾರಂಟೈನ್ ಒಳಗಾಗುತ್ತಿದ್ದರು. ಇದರಿಂದ ವೈದ್ಯರು ಸಾಕಷ್ಟು ಇಕ್ಕಟ್ಟಿಗೆ ಸಿಲುಕುವಂತಾಯಿತು. ಅಲ್ಲದೆ ಉಳಿದ ವೈದ್ಯರು ಸಹ ಕೊರೊನಾ ಸೋಂಕಿತರನ್ನು ಪರೀಕ್ಷಿಸಲು ಹಿಂದೇಟು ಹಾಕುವುದು ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.

Medical Gadgets demand increased in tumkuru
ಕೊರೊನಾದಿಂದ ಹೆಚ್ಚಾಗುತ್ತಿದೆ ವೈದ್ಯಕೀಯ ಉಪಕರಣಗಳ ಬೇಡಿಕೆ
author img

By

Published : Sep 1, 2020, 2:28 PM IST

ತುಮಕೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ರೋಗದ ಗುಣ ಲಕ್ಷಣಗಳು ಕಂಡು ಬಂದ ತಕ್ಷಣ ಜನರು ವೈದ್ಯರ ಬಳಿ ಚಿಕಿತ್ಸೆಗೆ ಹೋಗುತ್ತಿದ್ದಾರೆ. ಆದರೆ ಬಹುತೇಕ ಮಂದಿ ವೈದ್ಯರು ರೋಗಿಗಳಿಗೆ ಮುಕ್ತವಾಗಿ ಚಿಕಿತ್ಸೆ ನೀಡಲು ಹಿಂಜರಿಯುತ್ತಿದ್ದಾರೆ. ಬದಲಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ವೈದ್ಯಕೀಯ ಉಪಕರಣಗಳನ್ನು ಬಳಸಿ ಸ್ವಯಂ ಚಿಕಿತ್ಸೆಗೆ ಮನೆಯಲ್ಲಿ ಒಳಗಾಗುವಂತೆ ಸಲಹೆ ನೀಡುತ್ತಿದ್ದಾರೆ. ಅಲ್ಲದೆ ರೋಗದ ಗುಣಲಕ್ಷಣಗಳು ಮಿತಿಮೀರಿದ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಕಿವಿಮಾತು ಹೇಳುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ರೋಗದ ಗುಣ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವಂತಹ ವೈದ್ಯಕೀಯ ಪರಿಕರಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ.

ಹೆಚ್ಚಾಗುತ್ತಿದೆ ವೈದ್ಯಕೀಯ ಉಪಕರಣಗಳ ಬೇಡಿಕೆ

ಅದರಲ್ಲಿ ರಕ್ತದೊತ್ತಡ, ಡಯಾಬಿಟಿಕ್ ಮತ್ತು ದೇಹದಲ್ಲಿನ ಉಷ್ಣಾಂಶವನ್ನು ಮತ್ತು ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸುವಂತಹ ವೈದ್ಯಕೀಯ ಉಪಕರಣಗಳಿಗೆ ಬಹು ಬೇಡಿಕೆ ಬಂದಿದೆ. ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಈಚೆಗೆ ಇಂತಹ ವೈದ್ಯಕೀಯ ಉಪಕರಣಗಳನ್ನು ಸಾರ್ವಜನಿಕರು ಖರೀದಿಸುತ್ತಿದ್ದಾರೆ. ಮಾರ್ಚ್ ತಿಂಗಳಿನಿಂದ ಜೂನ್ ವರೆಗೆ ಇಂತಹ ವೈದ್ಯಕೀಯ ಪರಿಕರಗಳಿಗೆ ಬೇಡಿಕೆಯೇ ಇರಲಿಲ್ಲ. ಮೊದಮೊದಲು ವೈದ್ಯರು ಕೂಡ ಕೊರೊನಾ ಸೋಂಕಿತ ಗುಣಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಪರೀಕ್ಷಿಸುತ್ತಿದ್ದರು, ನಂತರದ ದಿನಗಳಲ್ಲಿ ರೋಗಿಯ ಸಂಪರ್ಕದಲ್ಲಿ ಇದ್ದಂತಹ ವೈದ್ಯರು ಕೂಡ ಕ್ವಾರಂಟೈನ್ ಒಳಗಾಗುತ್ತಿದ್ದರು. ಇದರಿಂದ ವೈದ್ಯರು ಸಾಕಷ್ಟು ಇಕ್ಕಟ್ಟಿಗೆ ಸಿಲುಕುವಂತಾಯಿತು. ಅಲ್ಲದೆ ಉಳಿದ ವೈದ್ಯರು ಸಹ ಕೊರೊನಾ ಸೋಂಕಿತರನ್ನು ಪರೀಕ್ಷಿಸಲು ಹಿಂದೇಟು ಹಾಕುವುದು ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.

ಕೊರೊನಾ ಸೋಂಕಿನ ಗುಣಲಕ್ಷಣಗಳನ್ನು ಪತ್ತೆ ಹಚ್ಚಲು ಗ್ಲುಕೋಮೀಟರ್, ಪಲ್ಸ್ ಆಕ್ಸಿ ಮೀಟರ್, ಮತ್ತು ಡಿಜಿಟಲ್ ಥರ್ಮೊಮೀಟರ್​ಗಳನ್ನು ಜನರು ಬಳಸುತ್ತಿದ್ದಾರೆ. ವೈರಾಣು ಸೋಂಕಿತರ ದೇಹದಲ್ಲಿನ ಉಷ್ಣಾಂಶವನ್ನು ನಿರಂತರವಾಗಿ ಪರೀಕ್ಷಿಸಲು ಡಿಜಿಟಲ್ ಥರ್ಮಾಮೀಟರ್ ಅನ್ನು ಬಳಸಲಾಗುತ್ತಿದೆ. ಅದೇ ರೀತಿ ದೇಹದಲ್ಲಿನ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸಲು ಪಲ್ಸ್ ಆಕ್ಸಿ ಮೀಟರ್ ಅನ್ನು ಜನರು ಬಳಕೆ ಮಾಡುತ್ತಿದ್ದಾರೆ. ಇನ್ನು ದೇಹದಲ್ಲಿನ ಡಯಾಬಿಟಿಸ್ ಅನ್ನೋ ಪರೀಕ್ಷಿಸಿಕೊಳ್ಳಲು ಗ್ಲುಕೋಮೀಟರ್ ವೈದ್ಯಕೀಯ ಪರಿಕರವನ್ನು ಜನರು ಬಳಕೆ ಮಾಡುತ್ತಿದ್ದಾರೆ. ಸಾರ್ವಜನಿಕರು ಈ ರೀತಿಯ ವೈದ್ಯಕೀಯ ಉಪಕರಣಗಳನ್ನು ಮನೆಯಲ್ಲಿಯೆ ಇರಿಸಿಕೊಂಡು ಕೊರೊನಾ ಸೋಂಕಿನ ಗುಣಲಕ್ಷಣಗಳು ಕಂಡುಬಂದ ತಕ್ಷಣ ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ವೈದ್ಯಕೀಯ ಉಪಕರಣಗಳ ಬೇಡಿಕೆ ಹೆಚ್ಚುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.