ತುಮಕೂರು : ವೈದ್ಯಕೀಯ ಕಾಲೇಜು ಶಿರಾ ತಾಲೂಕಿಗೆ ಅಗತ್ಯವಿದೆ. ಅದನ್ನು ಮಂಜೂರು ಮಾಡಬೇಕು ಎಂದು ಸಾರ್ವಜನಿಕರು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರಿಗೆ ಬಹಿರಂಗವಾಗಿ ಆಗ್ರಹಿಸಿದ ಘಟನೆ ಶಿರಾದಲ್ಲಿ ನಡೆಯಿತು.
ಶಿರಾದಲ್ಲಿ ನಡೆದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತ ಮುಖಂಡರು ಹಾಗೂ ಸಾರ್ವಜನಿಕರು ಈ ಬೇಡಿಕೆ ಮುಂದಿಟ್ಟರು. ರೈತ ಮುಖಂಡ ಪರಮಶಿವಯ್ಯ ಎಂಬುವರಿಂದ ಬಹಿರಂಗವಾಗಿ ಒತ್ತಾಯಿಸಲಾಯಿತು.
ಓದಿ:ತುಮಕೂರು: ಮೊದಲ ಬಾರಿಗೆ ಖಾಸಗಿಯಾಗಿ ನಡೆದ ಈರುಳ್ಳಿ ಹರಾಜು ಪ್ರಕ್ರಿಯೆ
ನೀವು ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ತರಬೇಕು ಎಂದು ಬಿಜೆಪಿಗೆ ಬಂದಿದ್ದು, ಶಿರಾ ತಾಲೂಕು ಅಭಿವೃದ್ಧಿಯಾಗಬೇಕು ಎಂದು ಇತಿಹಾಸಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲ್ಲಿಸಿದ್ದೇವೆ ಎಂದರು. ನೀವು ಶಿರಾಗೆ ಮೆಡಿಕಲ್ ಕಾಲೇಜು ಕೊಡಬೇಕು ಎಂದು ಆಗ್ರಹಿಸಿದರು.