ETV Bharat / state

ಏ.26 ಮತ್ತು ಮೇ.24ರಂದು ಸಾಮೂಹಿಕ ವಿವಾಹ: ಪ್ರತಿ ಜೋಡಿಗೆ ₹55,000 ವೆಚ್ಚ! - ಮುಜರಾಯಿ ಇಲಾಖೆಯ ಸಚಿವ

ಈ ತಿಂಗಳ 13ರಂದು ಆಯ್ದ 12 ಭಾಗಗಳಲ್ಲಿ ಸಪ್ತಪದಿ ರಥ ಹೊರಡಲಿದೆ. ಈ ರಥದಲ್ಲಿ ದೇವಸ್ಥಾನಗಳ ಪರಂಪರೆ ಇತಿಹಾಸ ಹಾಗೂ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಇರುತ್ತೆ. ಈ ರಥವು ದೇವಾಲಯ ಹಾಗೂ ಪ್ರತಿ ಗ್ರಾಮಗಳಲ್ಲೂ ಸಂಚಾರ ಮಾಡಲಿದೆ. ಸಾಮೂಹಿಕ ಸರಳ ವಿವಾಹದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತೆ ಅಂತಾ ಸಚಿವರು ಹೇಳಿದರು.

Mass wedding on april 26 and may 24: government spends 55,000 per each pair
ಏ.26 ಮತ್ತು ಮೇ.24 ರಂದು ಸಾಮೂಹಿಕ ವಿವಾಹ: ಪ್ರತೀ ಜೋಡಿಗೆ 55,000 ರೂ. ವೆಚ್ಚ
author img

By

Published : Feb 8, 2020, 6:56 PM IST

ತುಮಕೂರು: ರಾಜ್ಯದ ಪ್ರಮುಖ 100 ದೇವಾಲಯಗಳಲ್ಲಿ ಏಪ್ರಿಲ್ 26 ಮತ್ತು ಮೇ 24ರಂದು ಸಾಮೂಹಿಕವಾಗಿ ಸರಳ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿವಾಹಕ್ಕೆ ಸಂಬಂಧಪಟ್ಟಂತೆ ಪ್ರತಿ ಜೋಡಿಗೆ ತಗಲುವ ₹55,000 ವೆಚ್ಚವನ್ನ ಸರ್ಕಾರವೇ ಭರಿಸಲಿದೆ ಎಂದರು. ಪ್ರತಿ ಜೋಡಿಗೆ 8 ಗ್ರಾಂ. ಚಿನ್ನದ ಮಾಂಗಲ್ಯ, ವಧುವಿನ ಖಾತೆಗೆ ₹10,000, ವರನ ಖಾತೆಗೆ 5,000 ರೂ. ಹಾಕಲಾಗುತ್ತೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳು, ಸಾಧು-ಸಂತರು, ಮಠಾಧೀಶರು, ಇನ್ಫೋಸಿಸ್‌ನ ಸುಧಾಮೂರ್ತಿ, ಚಲನಚಿತ್ರ ನಟ ಯಶ್ ಸೇರಿ ಸಚಿವರು, ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ತಿಂಗಳ 13ರಂದು ಆಯ್ದ 12 ಭಾಗಗಳಲ್ಲಿ ಸಪ್ತಪದಿ ರಥ ಹೊರಡಲಿದೆ. ಈ ರಥದಲ್ಲಿ ದೇವಸ್ಥಾನಗಳ ಪರಂಪರೆ ಇತಿಹಾಸ ಹಾಗೂ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಇರುತ್ತೆ. ಈ ರಥವು ದೇವಾಲಯ ಹಾಗೂ ಪ್ರತಿ ಗ್ರಾಮಗಳಲ್ಲೂ ಸಂಚಾರ ಮಾಡಲಿದೆ. ಸಾಮೂಹಿಕ ಸರಳ ವಿವಾಹದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತೆ ಅಂತಾ ಸಚಿವರು ಹೇಳಿದರು.

ತುಮಕೂರು: ರಾಜ್ಯದ ಪ್ರಮುಖ 100 ದೇವಾಲಯಗಳಲ್ಲಿ ಏಪ್ರಿಲ್ 26 ಮತ್ತು ಮೇ 24ರಂದು ಸಾಮೂಹಿಕವಾಗಿ ಸರಳ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿವಾಹಕ್ಕೆ ಸಂಬಂಧಪಟ್ಟಂತೆ ಪ್ರತಿ ಜೋಡಿಗೆ ತಗಲುವ ₹55,000 ವೆಚ್ಚವನ್ನ ಸರ್ಕಾರವೇ ಭರಿಸಲಿದೆ ಎಂದರು. ಪ್ರತಿ ಜೋಡಿಗೆ 8 ಗ್ರಾಂ. ಚಿನ್ನದ ಮಾಂಗಲ್ಯ, ವಧುವಿನ ಖಾತೆಗೆ ₹10,000, ವರನ ಖಾತೆಗೆ 5,000 ರೂ. ಹಾಕಲಾಗುತ್ತೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳು, ಸಾಧು-ಸಂತರು, ಮಠಾಧೀಶರು, ಇನ್ಫೋಸಿಸ್‌ನ ಸುಧಾಮೂರ್ತಿ, ಚಲನಚಿತ್ರ ನಟ ಯಶ್ ಸೇರಿ ಸಚಿವರು, ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ತಿಂಗಳ 13ರಂದು ಆಯ್ದ 12 ಭಾಗಗಳಲ್ಲಿ ಸಪ್ತಪದಿ ರಥ ಹೊರಡಲಿದೆ. ಈ ರಥದಲ್ಲಿ ದೇವಸ್ಥಾನಗಳ ಪರಂಪರೆ ಇತಿಹಾಸ ಹಾಗೂ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಇರುತ್ತೆ. ಈ ರಥವು ದೇವಾಲಯ ಹಾಗೂ ಪ್ರತಿ ಗ್ರಾಮಗಳಲ್ಲೂ ಸಂಚಾರ ಮಾಡಲಿದೆ. ಸಾಮೂಹಿಕ ಸರಳ ವಿವಾಹದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತೆ ಅಂತಾ ಸಚಿವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.