ETV Bharat / state

ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಅದೆಲ್ಲ ಸುಳ್ಳು: ಜಿ ಪರಮೇಶ್ವರ್ ಸ್ಪಷ್ಟನೆ - ಸೈಡ್ ಲೈನ್ ಮಾಡಿಲ್ಲ

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳ ಕುರಿತಾಗಿ ಸುರ್ಜೆವಾಲಾ ಅವರೊಂದಿಗೆ ಚರ್ಚೆ - ಆದರೆ ಸುರ್ಜೆವಾಲ ಭೇಟಿಯನ್ನೂ ಬೇರೆ ರೀತಿ ಬಿಂಬಿಸಲಾಗಿದೆ - ನನ್ನನ್ನ ಯಾರು ಸೈಡ್ ಲೈನ್ ಮಾಡಿಲ್ಲ - ಹಾಗಾದರೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡ್ತಿದ್ರಾ..? -ಜಿ ಪರಮೇಶ್ವರ್

Former DCM Dr G Parameshwar
ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್
author img

By

Published : Feb 4, 2023, 6:37 PM IST

Updated : Feb 5, 2023, 12:13 PM IST

ಡಿಸಿಎಂ ಡಾ ಜಿ ಪರಮೇಶ್ವರ್

ತುಮಕೂರು: ಕಾಂಗ್ರೆಸ್​ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ್ ಅವರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸುದ್ದಿ ಹರಿದಾಡಿತು. ಆದರೆ, ಅದೆಲ್ಲಾ ಸುಳ್ಳು, ಕೆಲ ವಿಚಾರಗಳ ಬಗ್ಗೆ ಸುರ್ಜೆವಾಲಾ ಅವರೊಂದಿಗೆ ಚರ್ಚೆ ಮಾಡಿದ್ದೇನೆ ಎಂದು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 3 ಗಂಟೆ ಕಾಲ ಸುರ್ಜೆವಾಲಾ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ನಾವು ಯಾವ ರೀತಿ ಚುನಾವಣೆಗೆ ಹೋಗ್ಬೇಕು. ಚುನಾವಣೆಗೆ ನಮ್ಮ ಪಕ್ಷದ ರಣನೀತಿ ಏನು ಇರಬೇಕು. ಚುನಾವಣಾ ಪ್ರಣಾಳಿಕೆಗಳು ಹೇಗೆ ಇರ್ಬೇಕು. ಜನ ಅದನ್ನೂ ಒಪ್ತರಾ ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.

ಸುರ್ಜೆವಾಲ ಅವರ ಭೇಟಿಯನ್ನೂ ಬೇರೆ ರೀತಿ ಬಿಂಬಿಸಲಾಗಿದೆ. ಕಾಂಗ್ರೆಸ್ ಹೊರಡಿಸಿದ ಎಲ್ಲ ಪ್ರಣಾಳಿಕೆಗಳು ನನ್ನ ಗಮನಕ್ಕೆ ಬಂದಿದೆ‌. ನಾವೆಲ್ಲರೂ ಒಟ್ಟಿಗೆ ಸೇರಿ ಮಾಡಿದ್ದೇವೆ‌. ಕೆಲವರು ನಮ್ಮಲ್ಲಿ ಅಸಮಾಧಾನ ತರೋಕೆ ಈ ರೀತಿ ಮಾಡ್ತಿದ್ದಾರೆ. ಗೃಹ ಲಕ್ಷ್ಮೀ ಭಾಗ್ಯ ಪ್ರಣಾಳಿಕೆಗೆ ಕೆಲವರು ಎಲ್ಲಿಂದ ಹಣ ತರ್ತಿರಾ ಅಂದ್ರು, ಅದಕ್ಕೆಲ್ಲಾ ನಾವು ಉತ್ತರ ಕೊಟ್ಟಿದ್ದೇವೆ ಎಂದು ಸ್ಪಷ್ಟ ಪಡಿಸಿದರು.

ನಾವು ಜನರಿಗೆ ಪ್ರಣಾಳಿಕೆ ಕೊಟ್ಟ ಮೇಲೆ ಅದನ್ನು ಜಾರಿಗೆ ತರಬೇಕು. ಅದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. 1ನೇ ತರಗತಿಯಿಂದ 5ನೇ ತರಗತಿ ವರೆಗೆ ಯಾರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸ್ತಾರೆ. ಅಂತ ಎಸ್ಸಿ, ಎಸ್ಟಿ ಸಮುದಾಯದ ಕುಟುಂಬಕ್ಕೆ‌ ಹಣ ಬಿಡುಗಡೆ ಮಾಡುತ್ತೇವೆ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಅದಕ್ಕೆ ವರ್ಷಕ್ಕೆ 3600 ಕೋಟಿ ಹಣ ಬೇಕಾಗುತ್ತೆ. ಅದರ ಬಗ್ಗೆ ತೀರ್ಮಾನ ಮಾಡಿದ್ದೀವಿ.ನಿನ್ನೆ ಚಿತ್ರದುರ್ಗದಲ್ಲಿ 10 ಪ್ರಣಾಳಿಕೆಗಳನ್ನು ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ನಾನು 8 ವರ್ಷ ಕೆಪಿಸಿಸಿ ಅಧ್ಯಕ್ಷ ಆಗಿದ್ದೆ. 224 ಕ್ಷೇತ್ರದಲ್ಲೂ ಸಹ ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಯಾರು ಅಂತ ತೀರ್ಮಾನ ಆಗ್ಬೇಕು. ನಿನ್ನೆ ಪಕ್ಷದ ಮುಖಂಡರೊಂದಿಗೆ ಸಭೆ ನಡೆಯಿತು ಎಂದರು.

ಕೆಲ ದಿನಗಳ ಹಿಂದೆ ನನ್ನ ಮನೆಗೆ ಅಟಿಕಾ ಬಾಬು ಬಂದಿದ್ರು. ನಾನು ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡ್ತಿನಿ ಅಂದ್ರು. ನೋಡಪ್ಪ ನಮ್ಮ ಹೈಕಮಾಂಡ್​ ಇದೆ, ತಿರ್ಮಾನ ಮಾಡುತ್ತೆ ಅಂತ ಹೇಳಿದ್ದಿನಿ. ಇಲ್ಲಿ ಎಲ್ಲರನ್ನೂ ಒಟ್ಟಿಗೆ ತಗೊಂಡು ಹೋಗುವ ಪಾರ್ಟಿ ಕಾಂಗ್ರೆಸ್ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದಲ್ಲಿ ದುಡಿದವರಿಗೆ ಮಾನ್ಯತೆ ಇದೆ‌. ಇನ್ನು ಸರ್ವೆಯಲ್ಲಿ ಕಾಂಗ್ರೆಸ್​​​​ಗೆ ಹಿನ್ನಡೆ ವಿಚಾರದಲ್ಲಿ ನಮ್ಮ ಪಕ್ಷದಿಂದ ಒಂದು ಸ್ಯಾಂಪಲ್ ಸರ್ವೆ ನಡೆದಿದೆ‌. ಆ ಸರ್ವೆ ಫಲಿತಾಂಶದಂತೆ ಕೆಲ ಬದಲಾವಣೆ ನಿರ್ಧಾರ ಮಾಡಲು ತಿರ್ಮಾನ ಮಾಡಿದ್ದೇವೆ. ಕಾಂಗ್ರೆಸ್​ ಈ ಬಾರಿ ಗೆಲ್ಲಲೇ ಬೇಕು ಎಂದು ಹೇಳಿದರು.

ಜಾಸ್ತಿ ಹೊಸಮುಖಗಳಿಗೆ ಆದ್ಯತೆ:ಜೆಡಿಎಸ್ ಅವರು 224 ಕ್ಷೇತ್ರಕ್ಕೆ ಅಭ್ಯರ್ಥಿ ಹಾಕ್ತಾರೆ ಅನ್ನೋದು ನನಗೆ ಗೊತ್ತಿಲ್ಲ. ಬಿಜೆಪಿ ಅವರು ಕೆಲ ಅತೃಪ್ತರಿಗೆ ಟಿಕೆಟ್ ಕೊಟ್ಟರೆ ಕೊಡ್ಬಹುದು. ನಮ್ಮಲ್ಲಿ ಜಾಸ್ತಿ ಹೊಸ ಮುಖಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಈಗಾಗಲೇ 110 ಮಹಿಳೆಯರು ಅರ್ಜಿ ಹಾಕಿದ್ದಾರೆ. ಕೆಲ ಮಾನದಂಡಗಳ‌ ಮೇಲೆ ಟಿಕೆಟ್ ಹಂಚಿಕೆ ಆಗುತ್ತೆ ಎಂದರು.

ಗುಬ್ಬಿ ಹೆಚ್ ಎ ಎಲ್ ಉತ್ಪಾದನಾ ಘಟಕ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ವಿಚಾರದಲ್ಲಿ ಅವರು ನಮ್ಮ ಪ್ರಧಾನಮಂತ್ರಿಗಳು, ಅವರೇ ಪೌಂಡೇಷನ್ ಹಾಕಿದ್ರೂ. ಇನ್ನೆರಡು ವರ್ಷಗಳಲ್ಲಿ ಇಲ್ಲಿಂದ ಹೆಲಿಕಾಪ್ಟರ್ ಹಾರಾಡುತ್ತೆ ಅಂದಿದ್ರು. ಕಾರಣಾಂತರಗಳಿಂದ 7 ವರ್ಷಗಳ ಬಳಿಕ ಉದ್ಘಾಟನೆ ಆಗ್ತಿದೆ. ಅದನ್ನ ಅವರನ್ನೆ ಕೇಳ್ಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.

ಹೆಚ್ ಎಎಲ್ ಉತ್ಪಾದನಾ ಘಟಕಕ್ಕೆ ಒಟ್ಟು 6,500 ಜನಕ್ಕೆ ಉದ್ಯೋಗ ಕೊಡ್ತಿನಿ ಅಂತ ಹೇಳಿದ್ದಾರೆ. ಆದಷ್ಟು ತುಮಕೂರು ಜಿಲ್ಲೆಯ ಜನರಿಗೆ ಹೆಚ್ಚಿನ ಉದ್ಯೋಗ ಕೊಡ್ಬೇಕು. ನಮ್ಮಲ್ಲಿ ಐಟಿಐ, ಎಂಜಿನಿಯರ್, ಸೇರಿದಂತೆ ಅನೇಕ ವಿದ್ಯಾಭ್ಯಾಸ ಮಾಡಿದವರು ಇದ್ದಾರೆ. ಅವರನ್ನ ಆಯ್ಕೆ ಮಾಡಿ ತರಬೇತಿ ಕೊಟ್ಟು‌ ಕೆಲಸ ಕೊಡಲಿ ಎಂದು ಒತ್ತಾಯಿಸಿದರು.

ಸೈಡ್ ಲೈನ್ ಮಾಡಿಲ್ಲ:ಕಾಂಗ್ರೆಸ್ ಪಕ್ಷದಲ್ಲಿ ಪರಮೇಶ್ವರ್ ಅವರನ್ನ ಸೈಡ್ ಲೈನ್ ಮಾಡಿರೋ ವಿಚಾರದಲ್ಲಿ ನನ್ನನ್ನ ಯಾರು ಸೈಡ್ ಲೈನ್ ಮಾಡಿಲ್ಲ. ಹಾಗೆ ಮಾಡಿದ್ರೆ, ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡ್ತಿದ್ರಾ..? ಮಾಡ್ತಿರಲಿಲ್ಲ ಅಲ್ವಾ ಎಂದ ಅವರು, ಪ್ರಜಾ ಧ್ವನಿ ಯಾತ್ರೆ ಎರಡು ಟೀಂ ಮಾಡಿದ್ದಾರೆ ಎಂಬ ವಿಚಾರದಲ್ಲಿ, ಹೌದು ಎರಡು ಟೀಂ ಮಾಡಿದ್ದಾರೆ. ಒಂದು ಕಡೆ ಸಿದ್ದರಾಮಯ್ಯ, ಮತ್ತೊಂದು ಡಿಕೆಶಿ ಹೋಗ್ತಾರೆ ಎಂದು ತಿಳಿಸಿದರು.

ಇಡೀ ರಾಜ್ಯ ಕಾಂಗ್ರೆಸ್ ಪರ: ಮೈಸೂರು ಭಾಗಕ್ಕೆ ಡಿಕೆಶಿ ಅವರು ಹೋಗ್ತಾರೆ. ನಾನು ಆ ಕಡೆ ಹೋಗ್ತಿನಿ. ನಾನು ನಿನ್ನೆ ಕೋಲಾರಕ್ಕೆ ಹೋಗಿದ್ದೆ. ಇವತ್ತು ಮಾಲೂರು ಕಡೆಗೆ ಹೋಗ್ಬೇಕಿತ್ತು. ಕಾರಣಾಂತರಗಳಿಂದ ಹೋಗಲು ಆಗಿಲ್ಲ ಎಂದ ಅವರು, ಪ್ರಜಾಧ್ವನಿ ಯಾತ್ರೆಯಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ತಿದೆ. ಇಡೀ ರಾಜ್ಯ ಕಾಂಗ್ರೆಸ್ ಪರವಾಗಿದೆ. ಈ ಬಾರಿ ಜನ ಕಾಂಗ್ರೆಸ್ ಕೈ ಹಿಡಿತಾರೆ.ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎಂದರು.

ಇದನ್ನೂಓದಿ:ಈ ಬಾರಿ ಕೇಂದ್ರದ ಬಜೆಟ್​​​ನ​​​ಲ್ಲಿ​ ಅಕ್ಷರ, ಆರೋಗ್ಯ, ಅನ್ನ ಕಡೆಗಣನೆ: ಎಚ್ ವಿಶ್ವನಾಥ್

Last Updated : Feb 5, 2023, 12:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.