ತುಮಕೂರು: ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನ ಭೀಕರ ಹತ್ಯೆ ನಡೆದಿದೆ. ಮುಬಾರಕ್ ಪಾಷಾ ಕೊಲೆಯಾದ ದುರ್ದೈವಿ. ತುಮಕೂರು ನಗರದ ಜಿಸಿಆರ್ ಕಾಲೋನಿ ನಿವಾಸಿಯಾದ ಇವರು ಕಳೆದ ರಾತ್ರಿ ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ, ಯಾರೋ ಅಪರಿಚಿತರು ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಿದ್ದಾರೆ.
ಕೊಲೆಯಾದ ವ್ಯಕ್ತಿ ನಗರದ ಗುಬ್ಬಿ ಗೇಟ್ ಬಳಿ ಹಮಾಲಿ ಕೆಲಸ ಮಾಡಿಕೊಂಡಿದ್ದರು. ಯಾರೊಂದಿಗೋ ಗಲಾಟೆ ಮಾಡಿಕೊಂಡ ಹಿನ್ನೆಲೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕೊಲೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ವಿವಿಧ ಕಾರ್ಯ ನಿಮಿತ್ತ ಶುಕ್ರವಾರ ಬೆಳಗ್ಗೆ ಖಾಸಗಿ ಬಸ್ ನಿಲ್ದಾಣಕ್ಕೆ ಬಂದ ಜನ ಬಸ್ ನಿಲ್ದಾಣದಲ್ಲಿ ಮೃತದೇಹ ನೋಡಿ ಬೆಚ್ಚಿಬಿದ್ದರು. ಕೊಲೆಯಾದ ಜಾಗದಲ್ಲಿ ರಕ್ತ ಚೆಲ್ಲಾಡಿದ್ದು, ಗಲಾಟೆ ಮಾಡಿಕೊಂಡು ಕೊಲೆಯಾಗಿರುವ ರೀತಿಯಲ್ಲಿ ಕಂಡು ಬರುತ್ತಿದೆ. ಒಟ್ಟಾರೆಯಾಗಿ ತನಿಖೆ ಬಳಿಕ ಕೊಲೆಗೆ ಕಾರಣ ತಿಳಿಯಲಿದೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಇಬ್ಬರು ರೌಡಿಗಳ ಮರ್ಡರ್... ದೇವಾಲಯದ ಕಟ್ಟೆಯ ಮೇಲೆಯೇ ಭೀಕರ ಹತ್ಯೆ