ETV Bharat / state

ಅಕ್ಕನ ಮದುವೆ ಮಾಡಲು ಅನ್ಯಾಯದ ಹಾದಿ.. ಕಾರು ಚಾಲಕನ ಕೊಂದ ಕಿರಾತಕ ಅರೆಸ್ಟ್​

ತನ್ನ ಸಹೋದರಿಯ ಮದುವೆ ಮಾಡಿಸಲು ಹಣ ಹೊಂದಿಸಲು ಕಷ್ಟಪಡುತ್ತಿದ್ದ ವ್ಯಕ್ತಿವೋರ್ವ ಅನ್ಯ ಮಾರ್ಗ ಹಿಡಿದಿದ್ದಾನೆ. ಕಾರು ಚಾಲಕನ ಕೊಲೆ ಮಾಡಿದ ಆರೋಪದ ಮೇಲೆ ಈಗ ಕಂಬಿ ಎಣಿಸುತ್ತಿದ್ದಾನೆ. ಆದರೆ ಇಲ್ಲಿ ಯಾವುದೇ ಸಂಬಂಧವಿರದ ಕಾರು ಚಾಲಕ ಬಲಿಯಾಗಿರುವುದು ದುರಂತ.

tumkur
ತುಮಕೂರು
author img

By

Published : Feb 9, 2021, 12:17 PM IST

ತುಮಕೂರು: ಅಪರಾಧ ಚಟುವಟಿಕೆಗಳಿಗೆ ನಾನಾ ರೂಪವಿರುತ್ತದೆ. ಅದೇ ಸ್ವರೂಪದ ಕೊಲೆ ಪ್ರಕರಣವೊಂದು ಜಿಲ್ಲೆಯಲ್ಲಿ ನಡೆದಿದೆ. ಅಮಾಯಕ ಕಾರು ಚಾಲಕನನ್ನು ಕೊಲೆ ಮಾಡಿ, ಕಾರನ್ನು ಅಪಹರಿಸಿ ಮಾರಾಟ ಮಾಡಿ ಹಣ ಗಳಿಸಲು ಯತ್ನಿಸಿದ್ದ ವ್ಯಕ್ತಿ ಆ ಹಣದಿಂದ ತನ್ನ ಸಹೋದರಿಯ ಮದುವೆ ಮಾಡಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

ತುಮಕೂರಿನ ಕೊರಟಗೆರೆಯಲ್ಲಿ ನಡೆದ ಕೊಲೆ

ಜ.30ರಂದು ತುಮಕೂರಿನ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ಅಪಘಾತದ ರೀತಿಯಲ್ಲಿ ಕೊಲೆಯೊಂದು ನಡೆದಿತ್ತು. ಈ ಪ್ರಕರಣ ಬೆನ್ನಟ್ಟಿದ್ದ ಪೊಲೀಸರಿಗೆ ಇದೀಗ ಕೊಲೆಯ ಆರೋಪಿ ಸಿಕ್ಕಿಬಿದ್ದಿದ್ದಾನೆ. ಕೊಲೆ ಸಂಬಂಧ ಯುವಕನೋರ್ವನನ್ನ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ವೀರೇಂದ್ರ ಪಿ(24), ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ, ಗೋಪನಹಳ್ಳಿ ಗ್ರಾಮದವನಾಗಿದ್ದಾನೆ. ಈತ ಆನೆಕಲ್ ತಾಲೂಕಿನ ಅತ್ತಿಬೆಲೆಯ ಅಣ್ಣಯ್ಯಪ್ಪ ಲೇ ಔಟ್​ನಲ್ಲಿ ವಾಸವಿದ್ದ. ಕೊಲೆಯಾದ ದಿನ ಟೋಲ್​ಗೇಟ್ ಬಳಿಯ ಕ್ಯಾಮರಾಗಳನ್ನು ಪರೀಶೀಲಿಸಿದಾಗ ಕಾರು ಚಲಿಸಿರುವುದು ಪತ್ತೆಹಚ್ಚಿ, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಪಘಾತದ ಮಾದರಿಯಲ್ಲಿ ನಡೆದಿತ್ತು ಕೊಲೆ!

ಜ. 30ರ ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಸಮೀಪದಲ್ಲಿ ಕಾರೊಂದು ಪತ್ತೆಯಾಗಿತ್ತು. ಮರವೊಂದಕ್ಕೆ ಡಿಕ್ಕಿಯಾಗಿ ಅಪಘಾತವಾದ ರೀತಿಯಲ್ಲಿ ಪತ್ತೆಯಾಗಿದ್ದ ಕಾರಿನ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ವೇಳೆ ವ್ಯಕ್ತಿಯೋರ್ವನ ಎಡ ಭಾಗದ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ಬಳಿಕ ಶವವನ್ನು ಚಾಲಕನ ಸೀಟಿನಲ್ಲಿ ಇರಿಸಿ ಪರಾರಿಯಾಗಿದ್ದು ಪತ್ತೆಯಾಗಿತ್ತು. ಬೆಂಗಳೂರಿನ ನಿವಾಸಿ ನಿಸಾರ್ ಅಹಮದ್ ಕೊಲೆಯಾದ ವ್ಯಕ್ತಿ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಅಕ್ಕನ ಮದುವೆಗಾಗಿ ಕೊಲೆ!

ಬಂಧಿತ ಆರೋಪಿ ವೀರೇಂದ್ರ ತನ್ನ ಅಕ್ಕನ ಮದುವೆಗೆ ಒಂದು ಲಕ್ಷ ರೂಪಾಯಿ ಹಣ ಹೊಂದಿಸಲು ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಮೊದಲು ಬೆಂಗಳೂರಿನಿಂದ ತುಮಕೂರಿಗೆ ತೆರಳಲು ಕಾರ್ ಒಂದನ್ನು ಬಾಡಿಗೆ ಪಡೆದು ಅಲ್ಲಿಂದ ತುಮಕೂರಿಗೆ ಬಂದಿದ್ದನು. ಮಧ್ಯರಾತ್ರಿ ಸಮಯದಲ್ಲಿ ಚಾಲಕನನ್ನು ಕೊಲೆಗೈದು ಕಾರು ಕದಿಯಲು ಈತ ಸ್ಕೆಚ್ ಹಾಕಿದ್ದನು. ಅದನ್ನು ಮಾರಾಟ ಮಾಡಿ ಬಂದ ಹಣದಿಂದ ತನ್ನ ಅಕ್ಕನ ಮದುವೆ ಮಾಡಲು ದುರಾಲೋಚನೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಆ ದಿನ ನಿಸಾರ್ ಅಹಮದ್​ನನ್ನು ಕೊಲೆ ಮಾಡಿದ್ದಾನೆ. ಆದರೆ ಕಾರನ್ನು ಸ್ಥಳದಿಂದ ಕೊಂಡೊಯ್ಯಲು ಸಾಧ್ಯವಾಗದೆ ಕಾರ್ ಬಿಟ್ಟು ಪರಾರಿಯಾಗಿದ್ದಾನೆ.

ಇದನ್ನೂ ಓದಿ: ವಿಜಯಪುರ: ಭೀಮಾ ತೀರದ ರೌಡಿಗಳ ಪರೇಡ್

ಒಟ್ಟಾರೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವೀರೇಂದ್ರ ಲಾಕ್​ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದ. ಅಕ್ಕನ ಮದುವೆಗೆ ಹಣ ಹೊಂದಿಸುವ ಜವಾಬ್ದಾರಿ ಹೊತ್ತಿದ್ದ ಯುವಕ ಇದೀಗ ಪೊಲೀಸರಿಗೆ ತಗಲಾಕಿಕೊಂಡಿದ್ದಾನೆ. ಅಕ್ಕನ ಮದುವೆಗೆ ಅನ್ಯಾಯದ ಮಾರ್ಗದಿಂದ ಹಣ ಹೊಂದಿಸಲು ಹೋಗಿ ಕೊಲೆ ಮಾಡಿದ ಯುವಕ ಜೈಲು ಪಾಲಾದ್ರೆ, ಇತ್ತ ಯಾವುದೇ ತಪ್ಪು ಮಾಡದ ಅಮಾಯಕ ಕಾರು ಚಾಲಕ ಜೀವ ಕಳೆದುಕೊಂಡಿರುವುದು ದುರಂತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.