ತುಮಕೂರು:ಸಾಮಾಜಿಕ ಜಾಲತಾಣದ ಮೂಲಕ ಜನರ ಬ್ಯಾಂಕ್ ಖಾತೆಗಳಿಗೆ ಖನ್ನಾ ಹಾಕುತ್ತಿರೋ ಪ್ರಕರಣ ತುಮಕೂರಿನಲ್ಲಿ ನಿತ್ಯ ಒಂದಿಲ್ಲೊಂದು ಕಡೆ ದಾಖಲಾಗುತ್ತಲೇ ಇದೆ. ಇದೀಗ ತುಮಕೂರಿನ ಸಪ್ತಗಿರಿ ಬಡಾವಣೆಯ ರಾಜೇಶ್ ಎಂಬುವರ ಬ್ಯಾಂಕ್ ಖಾತೆಯಿಂದ 10 ಸಾವಿರ ರೂ. ಲಪಟಾಯಿಸಿದ್ದಾರೆ ವಂಚಕರು.
ಜೂ.18ರಂದು ಬೆಳಗ್ಗೆ ರಾಜೇಶ್ ಎಂಬುವರ ಮೊಬೈಲ್ ನಂಬರ್ಗೆ ಅಪರಿಚಿತರೊಬ್ಬರ ಮೊಬೈಲ್ ನಂಬರ್ನಿಂದ ಕರೆ ಬಂದಿದ್ದು, ‘ನಿಮ್ಮ ಬ್ಯಾಂಕ್ KYC ಅಪ್ಡೇಟ್ ಮಾಡಿ ಎಂದು ಮೆಸೇಜ್ ಬಂದಿದೆ, ಅದರಲ್ಲಿ ಇದ್ದ ಲಿಂಕ್ ಒಪನ್ ಮಾಡಿ ತಮ್ಮ ಇಂಟರ್ನೆಟ್ ಬ್ಯಾಂಕ್ ಐಡಿ & ಪಾಸ್ವರ್ಡ್ ಹಾಗೂ ಒಟಿಪಿ ಹಾಕಿದ್ದಾರೆ. ನಂತರ ರಾಜೇಶ್ ಅವರ SBI ಖಾತೆ ನಂಬರ್ನಿಂದ 10,000/- ರೂಪಾಯಿಗಳು ಕಡಿತಗೊಂಡಿದೆ.
ಮೋಸ ಹೋಗಿರುವುದನ್ನು ಮನಗಂಡು , ತಕ್ಷಣ ಆರೋಪಿಗಳನ್ನು ಪತ್ತೆ ಮಾಡಿ ಹಣ ವಾಪಸ್ ಕೊಡಿಸಬೇಕೆಂದು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ರಾಜೇಶ್. ಈ ಸಂಬಂಧ ದೂರು ಪಡೆದಿರೋ ಸೈಬರ್ ಕ್ರೈಂ ಪೊಲೀಸರು ಐಟಿ ಆಕ್ಟ್ ಮತ್ತು 419, 420 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನ ಸೂಪರ್ ಲೀಗ್ : ಕ್ರಿಕೆಟ್ ಬೆಟ್ಟಿಂಗ್ ಗ್ಯಾಂಗ್ ಬಂಧನ.. 21.50 ಲಕ್ಷ ರೂ. ವಶ